Wednesday 6 January 2016

ಮ್ಯಾಸನಾಯಕರ ದೇವರ ಪದಗಳು


ಕರ್ನಾಟಕ ಜಾನಪದ ಅಧ್ಯಯನದ ಚರಿತ್ರೆಯ ಆರಂಭದ ದಿನಗಳಲ್ಲಿ ಜಾನಪದ ಸಂಪತ್ತಿನ ಸಂಗ್ರಹ-ಸಂಪಾದನಾ ಕಾರ್ಯಗಳಿಗೆ ಇದ್ದ ಆಸಕ್ತಿ ಹಾಗೂ ಮನ್ನಣೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲವಾಗಿದೆ. ಇದಕ್ಕೆ ಪ್ರಮುಖವಾದ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು : ಸಂಗ್ರಹ ಮತ್ತು ಸಂಪಾದನೆಯ ಕಾರ್ಯಗಳು ಹೆಚ್ಚಿನ ಮಾನವ ಶ್ರಮ, ಸಮಯ ಮತ್ತು ಹಣವನ್ನು ಬೇಡುವಂತಹದ್ದು. ಆದರೆ ಪ್ರಸ್ತುತ ಸಂದರ್ಭದೊಳಗೆ ಮನುಷ್ಯ ಇವುಗಳಲ್ಲಿ ಯಾವುದೊಂದನ್ನೂ ದಾರಾಳವಾಗಿ ಬಳಸುವ ಸ್ಥಿತಿಯಲ್ಲಿ ಇಲ್ಲದಿರುವುದು.  ಎರಡು:ಜನಪದ ಅಧ್ಯಯನ ಕ್ಷೇತ್ರದಲ್ಲಿ ಸಂಗ್ರಹ ಮತ್ತು ಸಂಪಾದನೆಯ ಕ್ಷೇತ್ರಗಳು ಸೃಜನಶೀಲ ಅಲ್ಲದವುಗಳು ಎಂಬುದಾಗಿ ಪರಿಗಣಿತವಾಗುತ್ತಿರುವುದು. ಹಾಗೆಯೇ ಕರ್ನಾಟಕ ಜಾನಪದ ಸಂಪತ್ತು ಈಗಾಗಲೇ ಸಾಕಷ್ಟು ಸಂಗ್ರಹ ಗೊಂಡಿದ್ದು ಸಂಗ್ರಹಿಸಬೇಕಾದ ಅಗತ್ಯವಿಲ್ಲ. ಅಷ್ಟೇ ಅಲ್ಲದೆ ಜಾನಪದ ಜೀವಂತ ಪಳಿಯುಳಿಕೆಯಾದ್ದರಿಂದ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುತ್ತದೆ. ಹಾಗಾಗಿ ಸಂಗ್ರಹಗಳು ನಿಜವಾದ ಅರ್ಥದಲ್ಲಿ ಈoಟಞಟoಡಿe ಎನಿಸದೆ ಆeಚಿಜಟoಡಿe ಎನಿಸುತ್ತವೆ ಎನ್ನುವ ಹೊಸ ಅಭಿಪ್ರಾಯಗಳು ರೂಪುಗೊಂಡಿದ್ದು. ಇವೆರಡು ಕಾರಣಗಳಲ್ಲಿ ಮೊದಲನೆಯದು ಮನುಷ್ಯನ ಸೋಮಾರಿತನ ಹಾಗೂ ಜಿಪುಣತನಕ್ಕೆ ಸಂಬಂಧಿಸಿದ ದೋಷವಾಗಿರುವುದರಿಂದ  ಅವುಗಳನ್ನು ತಿದ್ದುಕೊಳ್ಳುವುದು ಉತ್ತಮ. ಇನ್ನೂ ಎರಡನೇ ಕಾರಣದಲ್ಲಿ ಗುರುತಿಸಿರುವಂತೆ ಹೊಸಕಾಲದ ಜಾನಪದ ಅಧ್ಯಯನಗಳಲ್ಲಿ ರೂಪುಗೊಳ್ಳುತ್ತಿರುವ ಅಭಿಪ್ರಾಯಗಳು ಪೂರ್ಣ ಸತ್ಯವಲ್ಲ. ಜಾನಪದವನ್ನು ಪ್ರದರ್ಶನಾತ್ಮಕ ಸಿದ್ಧಾಂತದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ವಾಂಸರು ’ಯಾವುದೇ  ಜಾನಪದ ಪಠ್ಯ ಒಂದು ಪ್ರದರ್ಶನದಿಂದ ಇನ್ನೊಂದು ಪ್ರದರ್ಶನಕ್ಕೆ  ಭಿನ್ನವಾಗುತ್ತದೆ’ ಎಂಬುದನ್ನು ನಿರೂಪಿಸಿದ್ದಾರೆ. ಹಾಗೆಯೇ ಆಧುನಿಕ ಸಿದ್ಧಾಂತಿಗಳು ವಾದಿಸುವಂತೆ ಕಾಲದಿಂದ ಕಾಲಕ್ಕೆ ಸಮಯ-ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುವ ಜಾನಪದ, ಚರಿತ್ರೆಯ ನಿರೂಪಣೆಗಳಿಗೆ ಮಹತ್ವದ ಆಕರಗಳಾಗಬಲ್ಲವು.
ಕೋಲಾಟದ ಕಲೆ ಭಾರತದಾದ್ಯಂತ ಪ್ರಚಲಿತವಿರುವ ಕಲೆಯಾಗಿದೆ. ಇದು ಪ್ರದೇಶ ಜನಾಂಗ, ಜಾತಿ, ಲಿಂಗ ಇಂತಹ ಯಾವುದೇ ಒಂದು ವಲಯಕ್ಕೆ ಸೀಮಿತವಾಗದೇ ಸರ್ವವ್ಯಾಪಿ ಕಲೆಯೆನಿಸಿದೆ. ಹೀಗೆ ವ್ಯಾಪಕವಾದ ಭೂಪ್ರದೇಶದಲ್ಲಿ ವಿವಿಧ ಜನಸಮುದಾಯಗಳ ನಡುವೆ ಪ್ರಚಲಿತವಿರುವ ಈ ಕಲೆಗೆ ಅಷ್ಟೇ ವೈವಿಧ್ಯಮಯತೆ ಹಾಗೂ ವೈಶಿಷ್ಟ್ಯತೆಗಳು ಇರುವುದು ಕಂಡುಬರುತ್ತದೆ. ಕೋಲಾಟ ಆಟವೂ ಹೌದು ನೃತ್ಯವೂ ಹೌದು ಎಂಬುದು ಅತ್ಯಂತ ಕುತೂಹಲಕಾರಿಯಾದುದು. ಈ ಕಲೆಯಲ್ಲಿ ಸಾಹಿತ್ಯ ಮತ್ತು ನೃತ್ಯಗಳ ಸಾಮರಸ್ಯವನ್ನು ಕಾಣುತ್ತೇವೆ. ಕೋಲಾಟ ಕಲೆಯ ಬೆಳವಣಿಗೆಯ ಚರಿತ್ರೆಯಲ್ಲಿ ಕಂಡುಬರುವ  ಸ್ವಾರಸ್ಯದ ಸಂಗತಿಗಳೆಂದರೆ ಪ್ರಾಚೀನ ಕಲೆಯಾದ ಕೋಲಾಟವು ಮೊದಲು ರಾಜಾಸ್ಥಾನಗಳಿಗೆ ಮಾತ್ರ ಸೀಮಿತವಾಗಿದ್ದು ನಂತರ ಜನಸಾಮಾನ್ಯರ ಕಲೆಯಾಗಿ ಎಲ್ಲರನ್ನೂ ರಂಜಿಸುವ, ಅವರ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಅವಕಾಶವಾಗಿಯೂ ಬೆಳೆಯಿತು. ಹಾಗೆಯೇ ಆರಂಭಕ್ಕೆ ಪುರುಷರು ಮಾತ್ರ ಭಾಗವಹಿಸುತ್ತಿದ್ದ ಈ ಕಲೆ ಕಾಲ ಬದಲಾದಂತೆ ಸ್ತ್ರೀಯರಿಗೂ ಪ್ರವೇಶಾವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ ಮೊದಲು ಕೇವಲ ಮನೋರಂಜನೆಯ ಪ್ರಧಾನ ಉದ್ದೇಶ ಹೊಂದಿ ಲೌಕಿಕ ಕಲೆ ಎನಿಸಿದ್ದು ಮುಂದುವರಿದಂತೆ ಧಾರ‍್ಮಿಕ ಆಯಾಮವನ್ನು ಪಡೆದುಕೊಂಡಿದೆ. ವಿಶೇಷವಾಗಿ ವೈಷ್ಣವ ಧರಕ್ಕೂ ಕೋಲಾಟಕ್ಕೂ ನಿಕಟ ಸಂಬಂಧವಿರುವುದನ್ನು ಗುರುತಿಸಬಹುದು. ಗೋಪಿಕಾ ಸ್ತ್ರೀಯರು ಮತ್ತು ಶ್ರೀಕೃಷ್ಣನ ಮಧ್ಯೆದ ಕೋಲಾಟ ಧರ‍್ಮ ಪ್ರಚಾರದ ಉದ್ದೇಶಕ್ಕೆ ತಿರುಗಿರುವುದನ್ನು ಇಂದು ಕಾಣುತ್ತೇವೆ. ಮುಖ್ಯವಾಗಿ ಕೋಲಾಟದ ಪದ್ಯ ಸಾಹಿತ್ಯ ವೈಷ್ಣವ ಧರ‍್ಮ ಪ್ರಚಾರದ ಮಾಧ್ಯಮವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇಂತಹ ಹಲವು ವೈಶಿಷ್ಟ್ಯತೆಗಳನ್ನೊಳಗೊಂಡ ಈ ಕಲೆ ಭಾರತದಾದ್ಯಂತ ನೂರಾರು ಬಗೆಗಳಲ್ಲಿ ಪ್ರಚಲಿತವಿರುವುದನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿಯೂ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದಿರುವಷ್ಟು ಕೋಲಾಟಗಳ ಸಂಖ್ಯೆ ಮತ್ತು ವೈವಿಧ್ಯತೆಯನ್ನು ಕಾಣಬಹುದು.ಸದ್ಯಕ್ಕೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೋಲಾಟ ಪ್ರಚಲಿತವಿದ್ದು ಇಲ್ಲಿ ಬಳಕೆಗೊಳ್ಳುತ್ತಿರುವ ಸುಮಾರು ೧೪೦ ಕ್ಕೂ ಹೆಚ್ಚಿನ ಕೋಲಾಟದ ವಿಧಗಳನ್ನು ಗುರುತಿಸಲಾಗಿದೆ.
ಇಷ್ಟೊಂದು ಶ್ರೀಮಂತ ಪರಂಪರೆಯಿರುವ ಕರ್ನಾಟಕದಲ್ಲಿ ಕೋಲಾಟ ಪದಗಳ ಸಂಗ್ರಹಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲವಾದರೂ ಪ್ರಯತ್ನಗಳೇನು ನಿರಾಶದಾಯಕವಾಗಿಲ್ಲ. ಕನ್ನಡದ ಸಂದರ್ಭದಲ್ಲಿ ಈವರೆಗೂ ಕೋಲಾಟದ ಪದಗಳ ಹಲವಾರು ಸಂಗ್ರಹಗಳು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಪ್ರೊ. ಮಳಲಿ ವಸಂತಕುಮಾರ ಅವರ ಕೋಲಾಟದ ಪದಗಳು, ಡಾ. ಎಸ್. ಪಿ. ಪದ್ಮಪ್ರಸಾದ್ ಅವರ ಕೋಲಾಟಗಳು ಮತ್ತು ಕೋಲು ಪದಗಳು, ಎಸ್.ವಿ. ರಂಗಣ್ಣ ಅವರ ಕೋಲ್ ಕೋಲ್ ಕೂಡಿಬರಲಿ, ಡಾ. ಬಸವರಾಜ ಮಲಶೆಟ್ಟಿ ಅವರ ಕೋಲಾಟದ ಪದಗಳು ಮುಖ್ಯವಾಗಿವೆ. ಈಚೆಗೆ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಮಾಲಿಕೆಯಲ್ಲಿ ಕರ್ನಾಟಕದ ಕೋಲಾಟದ ಪದಗಳ ಪ್ರಾತಿನಿಧಿಕ ಸಂಕಲನವನ್ನು ಹೊರತಂದಿದೆ. ಡಾ. ಸೋಮನಾಥ ನುಚ್ಚ ಅವರು ಸಂಪಾದಿಸಿದ್ದು ಇದರಲ್ಲಿ ಈವರೆಗೂ ಪ್ರಕಟವಾಗಿರುವ ಸಂಕಲನಗಳಲ್ಲಿ ಮುಖ್ಯವಾದ ಪದಗಳನ್ನು ಆಯ್ದು ಅವುಗಳ ಜೊತೆಗೆ ತಾವು ಸಂಗ್ರಹಿಸಿರುವ ಪದಗಳಲ್ಲಿ ಕೆಲವನ್ನು ಸೇರಿಸಿ ಪ್ರಕಟಿಸಿದ್ದಾರೆ. ಈ ಸಂಕಲನದಲ್ಲಿ ೩೫೭ ಪದಗಳಿವೆ. ಇವುಗಳ ಜೊತೆಗೆ ಕೋಲಾಟಗಳನ್ನು ಕುರಿತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸಿರುವ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರ ಪ್ರಯತ್ನ ಮತ್ತು ಕರ್ನಾಟಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರು ಈ ಬಗೆಗೆ ನಡೆಸುತ್ತಿರುವ ಸಂಶೋಧನಾ ಅಧ್ಯಯನಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಂಥ ಪ್ರಯತ್ನಗಳಿಗೆ ನಾನು ಈ ಸಂಕಲನದ ಮೂಲಕ ಕೈಜೋಡಿಸಿದ್ದೇನೆ ಎಂಬುದು ನನ್ನ ವಿನಮ್ರ ಭಾವನೆ. ಪ್ರಸ್ತುತ  ಸಂಕಲನದಲ್ಲಿ ೧೬೦ ಹಾಡುಗಳಿದ್ದು ಇವು ಯಾವುವು ಕೂಡ ಈವರೆಗೆ ಎಲ್ಲಿಯೂ ಪ್ರಕಟವಾಗದೇ ಇದೇ ಮೊದಲಬಾರಿಗೆ ಪ್ರಕಟಗೊಳ್ಳುತ್ತಿವೆ ಎಂಬುದು ಈ ಸಂಕಲನದ ಮಹತ್ವವನ್ನು ಹೆಚ್ಚಿಸಿದೆ ಎಂದು ಭಾವಿಸುತ್ತೇನೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಎಂಬ ಮ್ಯಾಸ ಬೇಡ ಬುಡಕಟ್ಟಿನ ಒಂದು ಹಟ್ಟಿ. ತೆಲಗು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಇವರು ಚನ್ನಕೇಶವ ಮತ್ತು ತಿಮ್ಮಪ್ಪನ ದೈವದ ಒಕ್ಕಲು. ಈ ಹಟ್ಟಿಯೊಳಗೆ ಮಕ್ಕಳು, ವಯಸ್ಕರು,ಗಂಡಸರು,ಹೆಂಗಸರು ಇಂಥ ಯಾವುದೇ ಬೇಧವಿಲ್ಲದೆ ಕೋಲಾಟವಾಡುತ್ತಾರೆ. ಇಲ್ಲಿ ಕೋಲಾಟ ಬರೀ ಮನೋರಂಜನೆಯಾಗಿರದೇ ಧಾರ್ಮಿಕ ಆಯಾಮದೊಳಗೂ ಬಳಕೆಯಾಗುತ್ತಿರುವುದು ಗಮನಾರ್ಹ. ಹಬ್ಬದ ದಿನಗಳಲ್ಲಿ ವಿಶೇಷ ಸಮವಸ್ತ್ರಗಳನ್ನು ಧರಸಿ ದೇವರಗುಡಿಯ ಮುಂದೆ ಆಡುವ ಕೋಲಾಟ ಮನೋರಂಜನೆಯಾದರೆ, ಅದೇ ದೇವರ ಗುಡಿಯ ಮುಂದೆ ಮಳೆ ಬರಲೆಂದು ದೇವರನ್ನು ಭಕ್ತಿಯಿಂದ ಧ್ಯಾನಿಸಿ ಆಡುವ ಕೋಲಾಟವು ಧಾರ್ಮಿಕವೆನಿಸುತ್ತದೆ. ಇಂಥ ವಿವಿಧ ರೀತಿಯ ಕಾರ್ಯಾಕಾರಣಗಳೊಂದಿಗೆ ಪ್ರಚಲಿತ ವಿರುವ ಇಲ್ಲಿನ ಕೋಲಾಟ ಒಂದು ಊರಿನಲ್ಲಿ ಬಳಕೆಗೊಳ್ಳುತ್ತದೆ ಆದರೂ ಈ ಊರಿಗೆ ಮಾತ್ರವೇ ಸೀಮಿತವಲ್ಲ. ಮಧ್ಯ ಕರ್ನಾಟಕದ ಅನೇಕ ಊರುಗಳಲ್ಲಿ ಬಳಕೆಯಲ್ಲಿವೆ. ಆದರೆ ಇಲ್ಲಿಯ ಸ್ವರೂಪ ಮಾತ್ರ ವಿಶಿಷ್ಟ. ಸ್ತುತಿ ಪದಗಳು, ತಾಳುಪುಕಡ್ಡಿ ಪದಗಳು, ಹೆಜ್ಜೆಕೋಲು ಪದಗಳು, ವಿಶಿಷ್ಟ ಕೋಲಾಟದ ಪದಗಳು, ಮುತ್ತಯ್ಯಗಳ ಕೋಲಾಟದ ಪದಗಳು,ಕೊಂಡಾಡುವ ಪದಗಳು-ಭಾಗ-೧,ಭಾಗ-೨, ಮಂಗಳಾರತಿ ಪದಗಳು ಇವೇ ಆ ಎಂಟು ವಿಭಾಗಗಳು. ಈ ಭೂ ಪ್ರದೇಶದ ಕೋಲಾಟದ ಸಾಮಾನ್ಯ ಸ್ವರೂಪವೆಂದರೆ ಪ್ರತೀ ಕೋಲಾಟದ ತಂಡದಲ್ಲಿ ಹೊರಗಿನ ಗುಂಪು ಒಳಗಿನ ಗುಂಪು ಎಂಬ ಎರಡು ಗುಂಪುಗಳು ಇರುತ್ತವೆ. ಇವರಡು ಗುಂಪುಗಳು ಕೋಲುಗಳನ್ನು ಬಡಿಯುತ್ತಾ ಮಂಡಲಾಕಾರದಲ್ಲಿ ನೃತ್ಯಮಾಡುತ್ತಾರೆ. ನೃತ್ಯದ ಜೊತೆಗೆ ಈ ಸಾಹಿತ್ಯವನ್ನು ಹಾಡುತ್ತಾರೆ.  ಕೋಲುಗಳನ್ನು ಪಡೆಯುವ ಕ್ರಮದಲ್ಲಿ ತಾಳುಪುಕಡ್ಡಿ, ಎತ್ತು ಕಡ್ಡಿ, ಗೀರ್ ಕಡ್ಡಿ, ಹೆಜ್ಜೆಕೋಲು ಕಡ್ಡಿ, ಮುತ್ತಯ್ಯಗಳ ಕೋಲು ಕಡ್ಡಿ ಎನ್ನುವ ಕ್ರಮಗಳಿವೆ. ಪ್ರತೀ ಕೋಲಾಟದ ನೃತ್ಯವು ತಾಳಪುಕಡ್ಡಿ ಹಾಡುಗಳಿಂದ ಆರಂಭಗೊಳ್ಳುತ್ತದೆ. ತಾಳುಪುಕಡ್ಡಿ ಕೋಲಾಟದಲ್ಲಿ ನಿಧಾನ ಗತಿಯ ನೃತ್ಯ ಹಾಗೂ ಹಾಡು ಇಲ್ಲಿ ಪ್ರಧಾನವಾಗಿರುತ್ತದೆ. ಇದರ ನಂತರ ನೃತ್ಯ ಹಾಗೂ ಹಾಡುಗಳು ವೇಗಪಡೆದು ತೀವ್ರಗತಿಯ ಸ್ಥಿತಿಯನ್ನು ತಲುಪುತ್ತವೆ. ಹಾಗೆಯೇ ವಿವಿಧ ರೀತಿಯ ಕೋಲು ಕ್ರಮಗಳು ಬಳಕೆಗೊಳ್ಳುತ್ತವೆ. ಇಲ್ಲಿ ಇರುವ ಒಟ್ಟು ಹಾಡುಗಳಿಗೆ  ೨೯ ಬಗೆಯ ವಿವಿಧ ನೃತ್ಯಗಳು ಮತ್ತು ಐದು ರೀತಿಯ ಕಡ್ಡಿ ಬಡಿಯುವ ಕ್ರಮಗಳು ಇವೆ. ಕೊಂಡಾಡುವ ಪದಗಳಲ್ಲಿ ಮಾತ್ರ ನೃತ್ಯ ಹಾಗೂ ಕಡ್ಡಿ ಬಡಿತಗಳಿರದೆ ಒಳ ಹೊರ ಗುಂಪುಗಳು ಎದುರುಬದುರಾಗಿ ನಿಂತು ಪರಸ್ಪರ ಪ್ರಶ್ನೋತ್ತರ ರೂಪದಲ್ಲಿ ಕೇವಲ ಹಾಡುಗಳನ್ನು ಮಾತ್ರ ಹಾಡುವುದುಂಟು.
ಈಗಾಗಲೇ ಹೇಳಿದಂತೆ ಈ ಹಟ್ಟಿಯ ಜನರ ಭಾಷೆ ಕನ್ನಡ ಮಿಶ್ರಿತ ತೆಲಗು. ಇದನ್ನು ಜಾನಪದ ತಜ್ಞರು, ಭಾಷಾ ವಿಜ್ಞಾನಿಗಳು ಕಂದೆಲಗು ಎಂದು ಕರೆದಿದ್ದಾರೆ. ಈ ಕಂದೆಲಗು ಭಾಷಿಕರು ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಇಲ್ಲಿನ ಹಾಡುಗಳನ್ನು ಹಾಡಿದ್ದಾರೆ. ಅವುಗಳನ್ನು ಯಾವುದೇ ಭಾಷಾಂತರವಿಲ್ಲದೆ ನೇರವಾಗಿ ಇಲ್ಲಿ ಮುದ್ರಿಸಲಾಗಿದೆ. ತೆಲಗಿನ ಹಾಡುಗಳು ಕನ್ನಡ ಭಾಷಿಕರ ಅರ್ಥಗ್ರಹಿಕೆಗೆ ಯಾವುದೇ ರೀತಿಯ ತೊಂದರೆಯಾಗಲಾರದು. ಇಲ್ಲಿ ಬರುವ ಪದಗಳು ಸಮುದಾಯಗಳೊಳಗಿಂದ ಮೂಡಿ ಬಂದ ಸೃಜನಶಿಲ ಸಂವೇದನೆಗಳಾಗಿವೆ. ಸ್ತುತಿ ಪದಗಳಲ್ಲಿ ಕಾಣುವಂತೆ ಗಣಪತಿ,ಗುರು,ಸೂರ್ಯ, ಚಂದ್ರ,ರಾಮ,ಲಕ್ಷ್ಮಣ,ಸೀತೆ,ಹನುಮಂತ ಇವೇ ಮೊದಲಾದ ದೈವಗಳನ್ನು ಸ್ತುತಿಸಲಾಗಿದೆ. ಈ ದೈವಗಳಿಗಿರುವ ಅಂತಃ ಶಕ್ತಿಗೆ ಸಲಾಂ ಮಾಡಲಾಗಿದೆ. ಎರಡನೇ ಭಾಗದಲ್ಲಿ ಬರುವ ತಾಳಪುಕಡ್ಡಿ ಪದಗಳಲ್ಲಿ ಹಲವಾರು ಪದಗಳು ದಾಸರ ಪದಗಳು, ತತ್ವಪದಗಳಗಿದ್ದು ಆ ಹಾಡುಗಳನ್ನು ತಮ್ಮ ತಾಳ-ಲಯಗಳಿಗೆ ಅನುಗುಣವಾಗಿ ಹೊಂದಿಸಿಕೊಂಡು ಹಾಡಲಾಗಿದೆ. ಕೋಲಾಟಕ್ಕೂ ಕೃಷ್ಣ ಸಂಪ್ರದಾಯಕ್ಕೂ ಇರುವ ನಂಟನ್ನು ಗಮನಿಸಿದರೆ ದಾಸರ ಹಾಡುಗಳನ್ನು ಇವರು ಕೋಲಾಟಕ್ಕೆ ಬಳಸಿಕೊಂಡಿರುವುದು ಕಾಕತಾಳಿಯವೇನಲ್ಲ ಎನಿಸುತ್ತದೆ. ಉಳಿದಂತೆ ಮಳೆರಾಯ, ತಿಪ್ಪೇಸ್ವಾಮಿ, ಹನುಮಂತ, ಮದಕರಿ ಮೊದಲಾದವರ ಗುಣಗಾನವಿದೆ. ಈ ಭಾಗದ ಪದಗಳಲ್ಲಿ ಪ್ರಣಯದ ಕಥೆಗಳು ಬಹಳಷ್ಟಿವೆ. ಬಳ್ಳಾರಿ, ನಾಯಕನಹಟ್ಟಿ ಮೊದಲಾದ ಊರುಗಳ ವರ್ಣನೆಯಿದೆ. ಕಥಾ ಪ್ರಧಾನವಾದ ಗುಣ ಈ ಭಾಗದ ಎಲ್ಲಾ ಹಾಡುಗಳಿಗೂ ಇದೆ. ಎತ್ತು ಕಡ್ಡಿ ಕೋಲು ಪದಗಳಲ್ಲಿ ಬಳಸಲ್ಪಡುವ ಹಾಡುಗಳು ಕಥಾ ಪ್ರಾಧಾನ್ಯತೆಗಿಂತ ಕುಣಿತದ ಲಯ ತಾಳಕ್ಕೆ ಹೆಚ್ಚಿನ ಮಾನ್ಯತೆ ಇದೆ. ಇನ್ನೂ ಕೊಂಡಾಡುವ ಪದಗಳಲ್ಲಿ ಮ್ಯಾಸಬೇಡರು, ಕಾಡುಗೊಲ್ಲರು ಮೊದಲಾದ ಬುಡಕಟ್ಟುಗಳ ಆರಾಧ್ಯ ದೈವಗಳ ಬಗೆಗಿನ ವಿವರಣೆಗಳಾಗಿವೆ.
ವಡೆಲು
ಮಿಕಿ ದಂಡು ಪೈಣಾಲಾನಾ ತೂರುಪುಂಡೆ ತುಮ್ಮೆತಾಲಾ, 
ಸ್ವಾಗಲೇಟೇ ನೌಲೇ ತಲ್ಲಿರಾ 
ಮೇಲೌರಾ ಜಾಣ, ಸಾಗಿದಾರಾ ಸುಗುಣಲೆತ್ತುರಾ 
ಮುಕ್ಕ ಸುಕ್ಕ ಬಲ್ಲರಾವೇ ಮುನ್ನೂರ‍್ವೇಯ್ಲು ಪಕ್ಕಲಾನಾ,
ತೊಡಸಾರ ಬಲ್ಲನಾವೇರಾ 
ಮೇಲೌರ ಜಾಣ, ತೊಂಬಯ್ವೇಲು ಪಕ್ಕಲಾನಾರಾ

ಕಂಪಳ ದ್ಯಾವರಿ
ಅದಿ ಮಲಾ ಈದೀ ಮಲಾ ನೊಡಿಮಿದಯ್ಯ ಸ್ವಾಮೀಮಲಾ, 
ಸ್ವಾಮಿ ಮಲಾ ಕಿಂದಿವಾಡುರಾ 
ಮೇಲೌರಾ ಜಾಣ, ಸನ್ನ ನಾಮಲು ಚಿನ್ನವಾಡುರಾ 
ಅಡ್ಡಕೊಟ್ಟು ವಡ್ರಿಸಿಂಬ ನೆತ್ತಿಮೀದ ಪೆಟ್ಟಿಕೋನಿ,
ದಂಡುಲಾಕಿ ತಾನೇ ವಚ್ಚೇರಾ
ಮೇಲೌರಾ ಜಾಣ, ಬುದ್ಧಿವಂತಡು ಭೂಮಿರಾಜುರಾ

ಸಿಂತಗುಟ್ಲು ಬೋರುವ
ಬೋರು ಬೋರು ಕಿನ್ನೀರಾಲು ಮಾಯಾಮಯ್ಯ ಮಾಯಗುರು, 
ವಾರಪಾರಪು ಜೆನ್ನೆ ಪಾಲುರಾ
ಮೇಲೌರಾ ಜಾಣಾ, ನ್ಯಾಲಪಾಲು ಸೇಸಿಕೊಂಟೀರಾ 
ಕೀಲು ಕಟ್ಲು ತೇರೂಮಿಂದ ಕಿನ್ನರಾಲೇ ಮೀಕಿ ಜಾಣಾ, ಕಿನ್ನರಾಲೇಕಾಯಲೊಂಪುರಾ
ಮೇಲೌರಾ ಜಾಣ, ಕನ್ನಲೆತ್ತಿ ಮಮ್ಮ ಚೂಡುರಾ

ನಲಗೇತಲು ಮುತ್ತೆಗಾರು 
ಗುಂಡುದಿರುಗ ಬಾರಾನಾವೆ ಗುಮ್ಮಡೇಲು ಸ್ವಾಗೆಲಾನ, 
ದಿಮ್ಮ ತಿರುಗಾ ಬಾರಾನಾವೇರಾ 
ಮೇಲೌರಾ ಜಾಣಾ, ಸೂರೆಗೊಮ್ಮುಲನ್ನಗಾರೂರಾ 
ಆಕಿಲ ಮಾಕಿಲ ಗಂಟೆ ರ‍್ವಾಕಾಲೆತ್ತಿ ದೊಂಚುಲೇದು 
ನೂಕ ಸೇಸಿನಿ ಗುಮ್ಮಲೊಚ್ಚೇರಾ
ಮೇಲೌರಾ ಜಾಣಾ, ರೊಂಡು ಸೇತುಲೆತ್ತ ಮುಕ್ಕುರಾ 

ಚನ್ನಯ್ಯ ಕ್ಯಾಸಯ್ಯ
ಕೂಡುನೌಡು ಕೂಡಿತಿಮ್ಮಯ್ಯ ಕುಂಡಾಲಾನಾ ವಂಡಿತಿಮಯ್ಯ, 
ಚನುಗನಪಲ್ಲಿ ಸೆರುವುಯನಕಾರಾ
ಮೇಲೌರಾ ಜಾಣ  ಪಾಲಕಾಯಿಲು ಇಸುಮುಲಾಯಾರಾ 
ಯಂಡಿ ಕಟ್ಲು ತೇರುಮಿಂದ ಯಾಡಾತಿರಿಗಿತಿಮೇಮಿ 
ಸೇತು ಪಾಲ ಮಕ್ಕುಲು ಕೂಡಾನವ್ಡುರಾ
ಮೇಲೌರಾ ಜಾಣಾ, ಪಾಲಪೋಗುಲು ಪೈನಾ ಪಾರೇರಾ 

ಕಾಟಪ್ಪಡು
ಕೋಟಿಲಿಂಗಾಲೊಡಿಕಟ್ಟೀಕೋನಿ ಕಲ್ಕಧರ್ಮರಾಜು ಯಡ್ಲೆ,
 ಜಂಬು ದೀಪಾಲು ಗಡ್ಡಮಿಂದಾರಾ
ಮೇಲೌರಾ ಜಾಣಾ, ಕೊಟಿ ಮೊಕ್ಕುಲು ಕಲಗ ಮೊಕ್ಕೇರಾ 
ಕುಂದಿಪೆ ಬಂಡಾಮಿಂದ ಏಸಿಂಡಾಡು ಶಾಸನಾಲು 
ಎಂಡಿ ಪತ್ತುರ‍್ಲು ಯಡ್ಲ ಸದುವೇರಾ 
ಮೇಲೌರ ಜಾಣ ದಾನ ಪತ್ರಲು ಸದುವೇರ

ನನ್ನಲು ಮುತ್ತೆಗಾರು
ಮಂಚಿದೀ ಮಲ್ಲೆಲುದಂಡಾ ಮಂಚಮಾಕಿ ತಗಲಾ ಏಸಿ ಮಂಚಿಮಗುಡೇ ದಂಡುಬೋಯೇರಾ 
ಮೇಲೌರಾ ಜಾಣಾ ಮಂಚಮೆಕೆ ಮನಸುರಾದೂರಾ 
ಮದಿರ ರ‍್ಯಾಗಟಿಗಡ್ಡಿ ಕುಸುವು ಸ್ವಾಮಾಲು ಬಂಡಾ ಸಲಮ ನೀಳು ಬೋಡಿಗೊಟ್ಟು ಈದುಲೋನಾ 
ಮೇಲೌರಾ ಜಾಣಾ ದುಂಡು ಮಲ್ಲೆಲು ದುಲ್ಲಬಾರೇರಾ 

ನಲಗೇತಲ ಮುತ್ತೆಗಾರು
ಚಿನ್ನದಯ್ನ ಕ್ವತ್ತಗುಡ್ಡಮು ಸೃಂಗಾರುಮೈನ ವನುಮುಲಾನಾ ತೂಗಿನಿಮ್ಮಲಯ್ಯಿ ತೂಗೇರಾ
ಮೇಲೌರಾ ಜಾಣಾ ಬೂದಿ ಬೆಳವಲಹಿಂಡೇ ಪೋಯೇರಾ
ನಲಗೇತುಲು ನೆಗುರುಮಿಂದ ದಿಮ್ಮದಿರಗ ಬಾರಾನಾವೆ ಮಕಮು ಪಲ್ಲ್ಲಿ ಮಾರಾ ಚಲುವಾಲು
ಮೇಲೌರಾ ಜಾಣ ಸಿಟಿ ಬೆಳವಲು ಹಿಂಡು ಮಡ್ಲೇರಾ 

ದಡ್ಡಿಸೂರನಾಯಕ
ಯರ್ರಮಂಚೀ ರೇವೋಲಾನಾ ಎದುರು ಎಕ್ಕೆ ರಾಜುಮೀನು 
ರಾಜುಮಾನ್ಯಲು ಕೂಡಾನೌಡೂರಾ 
ಮೇಲೌರಾ ಜಾಣಾ ಮಕಿನಿ ಮಕ್ಕಲು ನಾವೇ ಅನ್ನುರಾ 
ನಿಮ್ಮಪಂಡೆ ನಿರ್ವರ್ಣಾಲು ನೀಲದಟ್ಟಿ ಮಾನ್ಯಡುದಾರ
ನಿಡಗಂಟಿ ನ್ಯಾಲಾನಾನಾರಾ 
ಮೇಲೌರಾ ಜಾಣ ಮಕಿನಿ ಮಕ್ಕುಕಿ ತಾನೇ ವಚ್ಚೆರಾ 

ನರಸಿಂಹ ಓಬಿಳಿದ್ಯಾವರಿ
ಅಡ್ಡ ಕಟ್ಟು ವಡ್ರಿಸಿಂಬ ದಡ್ಡಿಲಾಕಿ ವಚ್ಚೆನಾವೇರಾ ಗುಬ್ಬಗುಡುಸುನಾನವಾಡೂರಾ 
ಮೇಲೌರಾ ಜಾಣಾ ಭೂಮಿರಾಜೂರಾ 
ಮುರ್ರಮಲಾ ವನುಮುಲಾನಾ ಯನುಗವೃಕ್ಷಲಾಯಿ ಪುಟ್ಟೇರಾ 
ಆಕ ಚೇಳಲಯ್ಯಿ ಪುಟ್ಟೇರಾ 
ಮೇಲೌರಾ ಜಾಣಾ ಅಡವಿ ಸಂಚಲು ಬತುಮು ಸೆಡಿಪೇರಾ 

ದೊಡ್ಡೋಬಳಿದ್ಯಾವರಿ  
ಉಟ್ಟು ಉಟ್ಟೂ ವಾನಾಲಾನ ವುಂಟೀರಾ ದಾನಿಂಟಿ ಯನಕ ಮುಂಡಸಾಕಿನಿ ಮುಚ್ಚು ಕುಕ್ಕರಾ 
ಮೇಲೌರಾ ಜಾಣ ಪೊಂಡ ಪೋತೆ ಪಕ್ಕಾಗರಿಸೇರಾ 
ಉಂಡಿ ಉಂಡಿ ಊಂಡ್ಯಾಲಾಕ ಪಂಡ್ಲು ದಾನ್ನಿ ಸೇಸುಕೊಂಟಿ ಜಲ್ಲು ತುರುಬೇ ಜಲ್ಲು ಗರಿಸೇರಾ 
ಮೇಲೌರಾ ಜಾಣಾ ನೈಯ್ಯಬೋತೇ ನೆತ್ತಿ ಕುಕ್ಕೆರಾ

ಯರಗಟ್ಟ ನಾಯಕ
ಏಸಿಂಡೆದಿ ವನುಮಲ್ಲೆಲು ದಂಡ ಪುಟ್ಟಿಂಡೇದಿ ಜಗು ಜಂಪುಲು 
ಗೊಡಗು ವಜ್ಜರಾಲೇ ವಾಕೇದುರು ಬೂರಾ
 ಮೇಲೌರ ಜಾಣಾ ತೆಲುವ ಚಪ್ಪಾನ ಜಾನಾಡೈತೀರಾ 
ಗೋಲು ಗರೀ ಕಟ್ಟಿನೊಮ್ಮು ಗುಂಡೆಲಾಕೆ ವಾಲೆನಾರಾ
ಪಂತಗರೀ ಕಟ್ಟೀನಮ್ಮಾರ 
ಮೇಲೌರಾ ಜಾಣ ಹೃದಯಮಾಕೆ ಬ್ರತಮೇ ಸೆಡಿಪೇರ

ಪದಿ ಮುತ್ತೆಗಾರು
ಸಿಂತಮಾನೂ ಸಿಲುಕಾಲಾರಾ ಚಿನ್ನವಾನ್ನಿ ಕಾನೇರೇಮಿ
ಮುರ್ರ ಮಲಾ ವನುಮುಲಾನಾರಾ  
ಮೇಲೌರ ಜಾಣ ಸನ್ನ ಮಲ್ಲೆಲು ದುಲ್ಲ ಬಾರೆರಾ 
ಪಾರಿ ಪಾರಿ ವಚ್ಚೀನಾವೇ ಪಾಲಪೋಗುಲ 
ಗವ್ವಾಲಾಲಾ ಮುರ್ರಮಾನು ವನುಮುಲಾನಾರ 
ಮೇಲೌರಾ ಜಾಣಾ ವಕ್ಕಮಾನೀಕಿ ಸಿಲುಕಲು ವಾಲೇರ

ಗಾದರಿ ದ್ಯಾವರಿ
ಉರುವಕೊಂಡ ಉರ್ತಪಿಲ್ಲಾ ಉಗ್ಗಿಪೋಸಿ ಸಾಕೂದಾಮು
ಪೆನಗೊಂಡ ಲಗುಡ ವಚೈರಾ 
ಮೇಲೌರಾ ಜಾಣಾ ಪಂತಲಾಡಿ ಕೊಂಡಪೋಯೇರಾ
ಉತ್ತರಾಲೆ ಉರುಮಾಲುರುಮೆ ನಾದರಾಲೆ 
ಮೆರಗ ನೆರಸೆ ಗಾದ್ರಯ್ಯ ಕನುವಲಾನಾರ
ಮೇಲೌರ ಜಾಣ ಸನ್ನ ಮುತ್ತುಲೆ ವಾನಗುರೇಸರಾ

ಬೋಸೇದೇವರು
ಎದ್ದುಮೆಟ್ಟೂ ಮೂಲಾನಾ ಉಬ್ಬನಾರಾ ಗುಬ್ಬಾಗೊಡುಗು ಕಿಂದಿವಾಡೂರಾ 
ಮೇಲೌರ ಜಾಣ ಗೆಜ್ಜೆಲೆ ಬ್ರಹ್ಮದಂಡವಾಡೂರ ಭೂಮಿರಾಜರಾ 
ನಲ್ಲಟಿ ನಲ್ಲಟೀವಾಡೂ ನಾಮಾಲೇ ಸಕ್ಕಾಳಿವಾಡು ಬ್ರಹ್ಮದಂಡವಾಡೂರ 
ಮೇಲೌರ ಜಾಣಾ ಗಂಡಿ ಕ್ವಾಟ ತಾಳೆಗಾಡೂರಾ

ದಡ್ಡಿ ಕಾಮನಾಯಕ
ಮುನ್ನೂರುಟ್ಲು ಮುದ್ದಾಬೋನಾ ಜಾರಾಮಡಿಸೆ ರಾಜೂಕಾಮು ಸಾಲಾ ಸಿಂತಾಲು ವನುಮುಲಾನಾರಾ
ಮೇಲೌರಾ ಜಾಣ ಸುತ್ತುಮಲ್ಲೆಲು ಸೆಡಮೊಕ್ಕೆರಾ 
ಪುಲಿ ಉಗುರೆ ಪಚ್ಚಡುಮುಗೊಪ್ಪಿ ಪಂಜರು 
ಬಾಕೇ ಸೇತುಲ ಪೆಟ್ಟಿ ಸಿಂತಗುಟ್ಲು ನೋಮೂಲಾನಾರಾ 
ಮೇಲೌರಾ ಜಾಣಾ ಮುತ್ತುಲೇ ಬಸುವಂತಲಾಡೇರಾ 

ಚಿತ್ತರು ದ್ಯಾವರಿ
ಎದ್ದು ದೊಕ್ಕಿನಿ ಎಜ್ಜೆನಾನಾ ಉಬ್ಬೆನಾರಾ ಗುಬ್ಬಾಗೊಡುಗುಲು ಕಿಂದಿ ವಾಡೂರಾ 
ಮೇಲೌರಾ ಜಾಣಾ ಅಡ್ಡ ಬೊಟ್ಟುಲು ದೊಡ್ಡವಾಡುರ 
ಊಟಕುಂಟಾ ವನುಮುಲಾನಾ ಯಾಡತಿರಿಗಿ ಮೇಮುಚೇತು ಮಿಕುಮಲೇನ ದೊಡ್ಡವನ್ನೇ ದಂಡೂನೆಸೇರಾ  
ಮೇಲೌರಾ ಜಾಣಾ ಆನೆಗಲ್ಲುಕಿ ಏಗಾಬೋಯೇರಾ 

ಮಲ್ಲಿನಾಯಕನ ಬೊಮ್ಮದೇವರು
ಸನ್ನ ಪಂಗು ಪಟ್ಟಿಕೋನಿ ಸಂದಮಾಮ ರಂಗ ಸಂದಮಾಮ 
ಜೆನ್ನಿವಾರಮೇಸಿಕೋನಿ ಸಂದಮಾಮ 
ಮುನ್ನೂರು ಗುಂಚೆಲು ಮುಜುಗುಲೋನಾ ಸಂದಮಾಮ ರಂಗಸಂದಮಾಮ
ಪಂಚಂಗಾಲೆ ಪಾರ ಸದುವೆ ಸಂದ ಮಾಮ

ಜಗಲೂರುಮುತ್ತೆ
ತೂರುಪಾಕಿಲಿ ತೋರಬಡಿಸೆ ಸಂದಮಾಮ ರಂಗ ಸಂದಮಾಮ
ಪಡುಮಟ್ವಾಕಿಲಿ ಪಾರಾಬಡಿಸೆ ಸಂದಮಾಮ 
ಗಂಗಿ ವಾಕಿಲಿ ಯಡ್ಲನವುಡು ಸಂದಮಮ ರಂಗ ಸಂದಮಾಮ 
ಜೋಗಿ ಚಕ್ಕುರ‍್ಲು ಅಡ್ಡಮಯ್ಯ ಸಂದಮಾಮ 

ಮಂದ ಬೊಮ್ಮದೇವರು
ಪುಟ್ಟಮಿಂದ ಚೆಟ್ಟುಪುಟ್ಟಿ ಸಂದಮಾಮ ರಂಗ ಸಂದಮಾಮ 
ಚಟ್ಟುಮಿಂದ ಚಂಡುಪುಟ್ಟಿ ಸಂದಮಾಮ
ಚಂಡುಮಿಂದ ಮುಳ್ಳ್ಳುಬುಟ್ಟಿ ಸಂದಮಾಮ ರಂಗ ಸಂದಮಾಮ
ಮುಳ್ಳುಮಿಂದ ಬಳ್ಳಿಪಾರೆ ಸಂದಮಾಮ

ಸೂರಪ್ಪಡು
ಏಟೆಗಡ್ಡ ಸೇನುವಾಡು ಸಂದಮಾಮ ರಂಗಸಂದಮಾಮ
ಏಡುಮಟ್ಲು ಮೋಜುಗಾಡು ಸಂದಮಾಮ 
ಎನ್ನ ಮಿಂದ ಗುವಲ್ವಾಲೆ ಸಂದಮಾಮ ರಂಗ ಸಂದಮಾಮ 
ಮರುಮುಮಿಂದ ನೇಯಬಾರೆ ಸಂದಮಾಮ

ಬಂಗಾರು ದೇವರು
ದಿನ್ನಮಿಂದ ದಾನಿನೆಗರು ಸಂದಮಾಮ ರಂಗ ಸಂದಮಾಮ
ದಿಯ್ಯಗಂಬಲೆತ್ತುಲಾನ ಸಂದಮಾಮ 
ಏಟುಪಡಿನ ಮಿಕುಮುತಲ್ಲೆ ಸಂದಮಾಮ ರಂಗ ಸಂದಮಾಮ
ಏಗದಂಕ ಗಂಟಬಾರೆ ಸಂದಮಾಮ???

ರಾಜಲು ದ್ಯಾವರಿ
ಸುಕ್ಕಬಟ್ಟು ಸುರೇನಾಲು ಸಂದಮಾಮ ರಂಗ ಸಂದಮಾಮ
ಎಮ್ರಪೆಟ್ರಿ ಕಂದನಾಲು ಸಂದಮಾಮ 
ರಾಜನಾಲು ದೊಂಚನವುಡು ಸಂದಮಾಮ ರಂಗ ಸಂದಮಾಮ
ಕಾಮರಾಜ ಕೊಡುಕು ಪುಟ್ಟೆ ಸಂದಮಾಮ

ನಲಗೇತು ಯರಗಯ್ಯ 
ಸೀಗಿಮಾನು ಸಿಕಳಗಂಟಿ ಸಂದಮಾಮಾ ರಂಗ ಸಂದಮಾಮಾ 
ಬಾಳಮಾನು ಟಿವ್ವಟಾಯ ಸಂದಮಾಮಾ 
ಗರುಡಾಳು ಮಾನುಕಿಂದ ಸಂದಮಾಮಾ ರಂಗಮಾಮಾ 
ದಕ್ಕಲೇದು ಮುಡುವಲಾಯ ಸಂದಮಾಮಾ 

ಕಂಬಲಯ
ಎದ್ದುಮಿಂದ ಆಮದಾಲು ಸಂದಮಾಮಾ ರಂಗ ಸಂದಮಾಮಾ 
ಎದ್ದು ಮಿಂದ ಏಸಿಕೋನಿ ಸಂದಮಾಮಾ 
ತಾನೆ ವಚ್ಚ್ಚೆ ಕ್ವಂಡಲಾಕಿ ಸಂದಮಾಮಾ ರಂಗ ಸಂದಮಾಮಾ 
ಸನ್ನ ಕಂಬಲೆತ್ತುಲಾಕಿ ಸಂದಮಾಮಾ

ದಡ್ಲು ಮಾರವ
ಚಂದ್ರಗಾವಿ ಸನ್ನಜೀರ ಸಂದಮಾಮಾ ರಂಗ ಸಂದಮಾಮಾ 
ಸೊನ್ನು ಪೆಟ್ಟಿದಕ್ಕನಿಯ್ಯ ಸಂದಮಾಮಾ 
ಸಂದಮಾಮಲಂತ ಗುಬ್ಬ ಸಂದಮಾಮಾ ರಂಗ ಸಂದಮಾಮಾ 
ಗೋರಿ ಪೆಟ್ಟಿ ಸದುವಲೇದು ಸಂದಮಾಮಾ

ರಾಗಿಮಾನು ಸೌಡವ
ರಾಗಿಮಾನು ಪುಟ್ಟನವುಡು ಸಂದಮಾಮಾ ರಂಗ ಸಂದಮಾಮಾ 
ನಾನು ಬಟ್ಟ ಕಟ್ಟನೆರಗು ಸಂದಮಾಮಾ 
ರಾಗಿಮಾನು ರಚ್ಚ ಕೊಚ್ಚೆ ಸಂದಮಾಮಾ ರಂಗ ಸಂದಮಾಮಾ 
ರಾಯ್ಲಿ ಮೆಚ್ಚಿನಾಟದೈತಿ ಸಂದಮಾಮಾ ಗಾಲಿಮಾರವ

ಗಾಳಿ ಮಾರವ
ಯರ್ರಗಟ್ಟು ಏಗುತಾದೆ ಸಂದಮಾಮಾ ರಂಗ ಸಂದಮಾಮಾ 
ಏಪಕ್ವಮ್ಮ ತೂಗುತಾದೆ ಸಂದಮಾಮಾ 
ಯನಕ ವಚ್ಚುನು ಯರ್ರ ಬುಡುಸು ಸಂದಮಾಮಾ ರಂಗ ಸಂದಮಾಮಾ 
ನಿದ್ದರೆಕ್ಕಿ ತೂಗುತಾದೆ ಸಂದಮಾಮಾ

ಗಾಳಿ ಮಾರವ
ಪುಟ್ಟಮಿಂದ ಕವಿಳಿ ಚಟ್ಟು ಸಂದಮಾಮಾ ರಂಗಸಂದಮಾಮಾ 
ಕಾಯಿಗಾಸಿ ಜಗ್ಗುತಾದೆ ಸಂದಮಾಮಾ 
ದೊಡ್ಡಿನಾನ ರೊಡ್ಡಿಬುಟುಸು ಸಂದಮಾಮಾ ರಂಗ ಸಮದಮಾಮಾ 
ನಿದ್ದರೆಕ್ಕಿ ತೂಗುತಾದೆ ಸಂದಮಾಮಾ

ಮುತ್ತೆಗಾರ ಮಾರವ
ಕ್ವಂಡಕಿ ಮಾಯಾವುಲರ್ರೆ ಸಂದಮಾಮಾ ರಂಗ ಸಂದಮಾಮಾ 
ಕೋಗಿಲ್ಯಾಲ ಕುಯ್ಯಲೇದು ಸಂದಮಾಮಾ 
ಕ್ವಂಟಮಿಂದ ಕ್ವಬರಿ ಬಡಸು ಸಂದಮಾಮಾ ರಂಗಸಂದಮಾಮಾ 
ಕೋಗಿಲಯ್ಯಿ ತಾನುಗಿಸೆ ಸಂದಮಾಮಾ 

ಕೆಂಚವ ಕಾಮವ
ಸಲ್ಲ ಕಡವ ಸಂಕದಾಡು ಸಂದಮಾಮಾ ರಂಗ ಸಂದಮಾಮಾ 
ಅರವಸೀಮ ಗೊಲ್ಲದಾಸಿ ಸಂದಮಾಮಾ 
ಮುದ್ರ ಮಾಲಡ ಕ್ಯಾದಿಗೆನ್ನು ಸಂದಮಾಮಾ ರಂಗ ಸಂದಮಾಮಾ
ಮುಡುವಲಕ್ಕೆ ಜಾಮುಲಯ್ಯ ಸಂದಮಾಮಾ


ದ್ಯಾವರಿಗುದ್ದ ಗಂಗವ
ಕಟ್ಟಮಿಂದ ಕವಿಳಿ ಚಟ್ಟು ಸಂದಮಾಮಾ ರಂಗ ಸಂದಮಾಮಾ
ಕಾಯಲೆಕ್ಕಿ ಜಗ್ಗುತಾದೆ ಸಂದಮಾಮಾ 
ಎದ್ದುಮಿಂದ ರೆಟ್ಟಿಬದುಸು ಸಮದಮಾಮಾ ರಂಗ ಸಂದಮಾಮಾ 
ನಿದ್ದರೊಚ್ಚಿ ತೋಗುತಾದೆ ಸಂದಮಾಮಾ 

ಸಂಗ್ರಹ ಮತ್ತು ವಿಶ್ಲೇಷಣೆ : ಡಾ.ಎಸ್.ಎಂ. ಮುತ್ತಯ್ಯ

No comments:

Post a Comment