Monday 9 April 2012

ಬರಹಗಾರರ ಬೌದ್ಧಿಕ ಜವಾಬ್ದಾರಿ : ಕರ್ನಾಟಕದ ಅನುಭವಗಳು

            
                                                                                - ಡಾ.ಎಸ್.ಎಂ. ಮುತ್ತಯ್ಯ

ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು ಬರಹಗಾರನ ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು ಹೀಗೆ ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ ಅಭಿವ್ಯಕ್ತಿಮಾದ್ಯಮಗಳೊಂದಿಗೆ ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ   ಅಥವಾ           ಕೈಗೊಂಬೆಗಳಾಗಿ ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ.
2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ ವಿಷಯಗಳ ಬಗ್ಗೆ         ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು.
3. ಸತ್ಯಾಂಶ ತಿಳಿಸುವುದು ಎಂದರೆ  ಕುಕೃತ್ಯಗಳನ್ನು  ಕೇವಲ  ಖಂಡಿಸುವುದು ಮಾತ್ರವಲ್ಲ ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ ಯಾವ ಮಹತ್ವವು ಇರುವುದಿಲ್ಲ.
4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು ಹೇಳಿ' ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ ಅವರಿಗೆ ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ ಸತ್ಯವನ್ನು ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು.
5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು  ಮುಚ್ಚಿಟ್ಟರೆ ಅಥವಾ ಸಮಥರ್ಿಸಿಕೊಂಡರೆ ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ ಟೀಕಿಸಿದರೆ ಅದಕ್ಕೆ ಯಾವ ಮಹತ್ವವು ಇರುವುದಿಲ್ಲ.
ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ ಈಸ್ಟ್ ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ ವಿದ್ಯಾಮಾನಗಳು) ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ  ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ, ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು ಮೆರೆಯುವಂತಹ ಸ್ಥಿತಿಯಾಗಿದೆ.
ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು ಕ್ರಿಮಿನಲ್ ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ ಕ್ರೂರ ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು  ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ, ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ  ನಮ್ಮ ನೆಲದ ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ.  ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು ವಿಚಾರಗಳನ್ನು ಗಮನಿಸಬಹುದಾಗಿದೆ.
1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು  ಕಾಣಬಹುದಾಗಿದೆ.   ಉದಾ : ನಮ್ಮ ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು ಆಸಕ್ತಿ ; ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ ಬಗ್ಗೆ ಇಲ್ಲ. ಹಾಗೆಯೇ ಸಮಸ್ಯೆಗಳನ್ನು  ಅವುಗಳ ಹೊರವಲಯದಲ್ಲಿ  ನಿಂತು ವಿಶ್ಲೇಷಿಸಿರುವುದೇ ಹೆಚ್ಚು. ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ ಅಪರೂಪವೆಂದೆ ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ.
2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ. ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು ಸಮಸ್ಯೆಗೆ ಪರಿಹಾರ ಸೂಚಿಸಬಾರದೆಂಬ ಚಚರ್ೆಗಳನ್ನು ನಾವಿಲ್ಲಿ ಸ್ಮರಿಸಬೇಕು.ಈ ಚರ್ಚೆಗಳೊಂದಿಗೆ ಚಾಮ್ಸ್ಕಿ ಅವರ ಮೇಲಿನ ಮಾತನ್ನು ಮುಖಾ-ಮುಖಿಗೊಳಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ.
ಇವುಗಳನ್ನು ಗಮನಿಸದ ನಂತರ ಕನ್ನಡ ಸಂದರ್ಭದೊಳಗೆ ನಾವು ಗಮನಿಸಲೇಬಾಕಾದ ಪ್ರಮುಖ ಅಂಶವೆಂದರೆ ನಮ್ಮ ಬಹುತೇಕ ಬರಹಗಳು ಸಮಸ್ಯೆಗಳನ್ನು ಚಚರ್ಿಸುವಾಗ ಪ್ರಭುತ್ವದ ಪಾತ್ರದ ಬಗ್ಗೆ ಹೆಚ್ಚಿನ ಗಮನಕೊಡದೇ ಇರುವುದು ಎದ್ದು ಕಾಣುತ್ತದೆ.ವಿಶೇಷವೆಂದೆ ಪತ್ರಿಕೆಗಳಲ್ಲಿ ಆಯಾ ಸಂದರ್ಭದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬರುವ ಲೇಖನಗಳನ್ನು ಹೊರತುಪಡಿಸಿದರೆ ಇನ್ನುಳಿದ ಬುದ್ಧಿಜೀವಿಗಳ ಬಹುತೇಕ ಬರಹಗಳು ತಾವು ಚಿಂತಿಸಿದ ಸಂಗತಿಗಳು ಸಮಕಾಲೀನ ಮಹತ್ವವನ್ನು ಕಳೆದುಕೊಂಡ ನಂತರ ಪ್ರಕಟಗೊಳ್ಳುತ್ತವೆ.ಇದಕ್ಕೆ ಚಾಮ್ಸ್ಕಿ ಹೇಳುವಂತೆ ಇದೊಂದು ಪ್ರಭುತ್ವದ ಹುನ್ನಾರ ಎಂದು ಹೇಳಲು ಬರುವುದಿಲ್ಲವೇನೋ.ಹಾಗಾಗಿ ಬರಹಗಾರ ಬುದ್ಧಿಜೀವಿಗಳು ಇದರ ನೇರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
                         ಕೊನೆಯದಾಗಿ ಹೇಳಬೇಕೆಂದರೆ ನಮ್ಮಲ್ಲಿ ಎಚ್ಚರದಿಂದ ಇರುವ ಕೆಲವು ಬುದ್ಧಿವಿಗಳು ನೇರವಾಗಿ ಪ್ರಭುತ್ವದ ಕ್ರೂರ ನಡೆಗಳ ಬಗ್ಗೆ ಖಂಡಿಸಿ ಬರೆಯುವವರು ಒಂದು ಕಡೆ ಇದ್ದಾರೆ.ಇನ್ನೋಂದು ಕಡೆ ಪ್ರಭುತ್ವದ ಪಾತಕಗಳನ್ನು ಅಭಿವೃದ್ಧಿಯ ನಡೆಗಳೆಂದು ಪ್ರಶಂಸಿ ಬರೆಯುವ ಮುಖವಾಡದ ಬುದ್ಧಿಜೀವಿಗಳುಇದ್ದಾರೆ.ಈ ಎರಡೂ ಗುಂಪಿನ ಬರಹಗಾರರಿಗೆ-ಸರಕಾರಗಳು ಮೊದಲನೇ ಗುಂಪಿನ್ನು ಮನಸ್ಸಿನ ಅಂತರಾಳದಲ್ಲಿ ಶತೃಗಳೆಂದು ಭಾವಿಸಿ ಅವರನ್ನು ಕಾನೂನಿನ ಬೆಂಬಲದಿಂದ ಶಿಕ್ಷೆಗಳ ಮುಖಾಂತರ ಮಟ್ಟಹಾಕುತ್ತಿವೆ.ಎರಡನೇ ಗುಂಪಿನ ಮುಖವಾಡದ ಬುದ್ಧಿಜೀವಿಗಳಿಗೆ ಹಾರ-ತುರಾಯಿ ಪದವಿ-ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿವೆ. ಇಂಥ ಸಂದರ್ಭದೊಳಗೆ ನಿಜವಾದ ಬುದ್ಧಿಜೀವಿಗಳಿಗೆ ತಮ್ಮ ಅಭಿವ್ಯಕ್ತಿ ಸಾಮಥ್ಯಕ್ಕೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂಥ ಈ ಕಾಲದೊಳಗೆ    ಚಾಮ್ಸ್ಕಿ ನಿರೀಕ್ಷಿಸುವ ಬೌದ್ಧಿಕ ಜವಾಬ್ದಾರಿಗಳನ್ನು ಪ್ರಕಟಪಡಿಸಲು ಇರುವ ಸವಾಲುಗಳ ಬಗ್ಗೆ ನಾವೆಲ್ಲರೂ ಮತ್ತೊಮ್ಮೆ ತಣ್ಣಗೆ ಚಿಂತಿಸುವ ಅಗತ್ಯವಿದೆ.
      



ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ

ಸಾರಲೇಖ

ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ 
          (ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ)              

ಊರಿನಲ್ಲಿ ಶಾಲೆಯೊಂದು ತೆರೆದರೆ ಅಲ್ಲಿನ ಜಾನಪದ ಸಂಪತ್ತು ಸಂಪೂರ್ಣ ನಾಶವಾಯಿತೆಂದೆ ಅರ್ಥ
ಡಾ. ಚಂದ್ರಶೇಖರ ಕಂಬಾರ
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಕಂಬಾರರ ಮೇಲಿನ ಮಾತು ನಮಗೆ ವಿಚಿತ್ರವಾಗಿ ಕಂಡರು ಸತ್ಯವಾದುದು. ಅಂದರೆ ಶಾಲೆಗಳಲ್ಲಿ ಹೇಳಿಕೊಡುವ ಶಿಕ್ಷಣ ನಮ್ಮ ಜಾನಪದ ಬದುಕಿಗೆ ಮಾರಕ. ಉದಾಹರಣೆಗೆ ಶಾಲೆಗಳಿಗೆ ಹೋಗಿ ಕಲಿತ ಹೆಣ್ಣು ಪಾರಂಪರಿಕವಾಗಿ ಅವರ ತಾಯಿ ಹೇಳಿಕೊಂಡು ಬಂದಿರುವ ಸೋಬಾನೆ ಪದಗಳನ್ನು ಹಾಡಲಾರಳು. ಕಾರಣ ಸೋಬಾನೆ ಪದ ಹಾಡುವುದು ಅವಮಾನದ, ಮುಜುಗರದ  ಸಂಗತಿ. ಅದೇ ಚಿತ್ರ ಗೀತೆಯನ್ನೋ , ಭಾವಗೀತೆಯನ್ನೋ ಯಾವುದೇ ಎಗ್ಗಿಲ್ಲದೇ  ಹಾಡಬಲ್ಲಳು. ಇದು ಗೌರವದ ಸಂಗತಿ.ಹಾಗೆಯೇ ಶಾಲೆಯಲ್ಲಿ ಕಲಿತ ಒಬ್ಬ ಹುಡುಗ ಹೊಲದಲ್ಲಿ ಕೆಲಸ ಮಾಡುವುದಿಲ್ಲ.ಪೇಟೆಯಲ್ಲಿ ಯಾರದಾದರೂ ಪಾದ ಸೇವೆ ಬೇಕಾದರೆ ಮಾಡಬಲ್ಲ. ಹೊಲದಲ್ಲಿ ಕೆಲಸ ಮಾಡುವುದು ಅಥವಾ ಯಾವುದಾದರು  ನಮ್ಮ ಪಾರಂಪರಿಕ ವೃತ್ತಿಯನ್ನು ಮಾಡುವುದಕ್ಕಿಂತ ಪೇಟೆಯಲ್ಲಿ ಮಾಡುವ ಕೆಲಸ ಶ್ರೇಷ್ಟ ಎಂಬುದಾಗಿ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮೆಲ್ಲರನ್ನು ನಂಬಿಸಿದೆ.ಇನ್ನೂ ಮುಂದುವರಿದು ಹೇಳುವುದಾದರೆ ದೇಹ ಶ್ರಮವಿಲ್ಲದೆ ಹೆಚ್ಚು ಸಂಪಾದಿಸುವ ವೃತ್ತಿಗಳ ಕಡೆ ಮನುಷ್ಯನ ಮನಸ್ಸನ್ನು ತಿರುಗಿಸಿದ ಕೀರ್ತಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಸಲ್ಲಬೇಕು.ಇದರ ಪರಿಣಾಮವಾಗಿಯೇ ಆಧುನಿಕ ಶಿಕ್ಷಣ ವ್ಯವಸ್ಥೆ ಪಾರಂಪರಿಕ ಬದುಕು ಮತ್ತು ಅದರ ಜ್ಞಾನಗಳಿಗೆ ಮಾರಕವಾಗಿದೆ.ಮೂಲಭೂತವಾಗಿ ಶಿಕ್ಷಣ ಎನ್ನುವುದು ಬದುಕಿಗೆ ಅಗತ್ಯವಿರುವ ವೃತ್ತಿ ಕೌಶಲ್ಯಗಳನ್ನು,ಜೀವನ ಕುಶಲತೆ,ಮೌಲ್ಯಗಳನ್ನು ಅದೆಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ವಿವೇಕವನ್ನು ನೀಡುವಂತಹದ್ದು  ಆಗಿರಬೇಕಿತ್ತು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಬೇಕಿತ್ತು. ಹಾಗಾಗದಿರುವುದು ನಮ್ಮ ಸಮಾಜದ ದುರಂತವೇ ಸರಿ. ಇಲ್ಲಿ ಗಮನಿಸಬೇಕಾಗಿರುವ ಅಂಶ ಯಾವುದೆಂದರೆ ಇಂದು ಶಿಕ್ಷಣ ವ್ಯವಸ್ಥೆ ಎಂದಾಕ್ಷಣ ಔಪಚಾರಿಕ ಶಾಲಾ ಶಿಕ್ಷಣ ಮಾತ್ರ ನೆನಪಿಗೆ ಬರುತ್ತದೆ.ಪಾರಂಪರಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅನೌಪಚಾರಿಕ ಶೈಕ್ಷಣಿಕ ಪದ್ಧತಿಗಳು ವಿಸ್ಮೃತಿಗೊಳಗಾಗಿವೆ.ಇದರಿಂದ ನಮಗೆ ಅನೇಕ ರೀತಿಯ ನಷ್ಟಗಳುಂಟಾಗಿವೆ. ಹಾಗಾಗಿ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಜಾಗೃತಗೊಳಿಸುವ ಕೆಲಸವು ಆಗಬೇಕಿದೆ.
                       ಇಂದಿನ ಶಿಕ್ಷಣ ವ್ಯವಸ್ಥೆಗೆ ಇರುವ ಬಹು ದೊಡ್ಡ ಸವಾಲೆಂದರೆ ಬುಡಕಟ್ಟುಗಳು ಏಕಕಾಲಕ್ಕೆ ಒಂದು ಕೈಯಲ್ಲಿ ಕೋಲು ಇನ್ನೊಂದು ಕೈಯಲ್ಲಿ ಪುಸ್ತಕವನ್ನು ಹಿಡಿಯುವಂತೆ ಮಾಡಬೇಕಾಗಿರುವುದು. ಅಂದರೆ  ಪರಂಪರೆಯನ್ನು ಸಂಪೂರ್ಣ ಕಳೆದುಕೊಳ್ಳದೇ ಹೊಸತನಕ್ಕೆ ಹೊಂದಿಕೊಳ್ಳುವ ಪರಿಜ್ಞಾನವನ್ನು ಶಿಕ್ಷಣ ನೀಡಬೇಕಿದೆ. ಇಂಥ ಆಲೋಚನೆಯ ಹಿನ್ನಲೆಯಲ್ಲಿ ಕನರ್ಾಟಕದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆನಿಂತಿರುವ ಬುಡಕಟ್ಟುಗಳಾದ ಕಾಡುಗೊಲ್ಲರು,  ಮ್ಯಾಸ ಬೇಡರು, ಲಂಬಾಣಿಗರು, ಮೊಂಡರು ಮೊದಲಾದ ಸಮುದಾಯಗಳಲ್ಲಿ ಆಧುನಿಕ ಶಿಕ್ಷಣ ಉಂಟುಮಾಡಿರುವ ಧನಾತ್ಮಕ ಹಾಗು ಋಣಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳುವುದು  ಹಾಗೆಯೆ ಈ ಬುಡಕಟ್ಟುಗಳ ನಿಜವಾದ ಅಭಿವೃದ್ಧಿ ಸೂತ್ರ ಯಾವುದು?ಹಾಗು ಅವುಗಳಿಗೆ ಬೇಕಿರುವ ನಿಜವಾದ ಶಿಕ್ಷಣದ ಸ್ವರೂಪ ಎಂಥದ್ದು?ಅವರಲ್ಲಿರುವ ಪಾರಂಪರಿಕ ಜ್ಞಾನಗಳನ್ನು ಹಾಗೂ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುವುದು ಹೇಗೆ ? ಎಂಬುದನ್ನು ಕಂಡುಕೊಳ್ಳುವುದು ಈ ಪ್ರಬಂಧದ ಪ್ರಧಾನ ಉದ್ದೇಶವಾಗಿದೆ.
ಪ್ರಸ್ತುತ ಸಮುದಾಯಗಳು ಹಾಗೂ ಸಂಬಂಧಿಸಿದ ಪರಿಕಲ್ಪನೆಗಳ ಬಗ್ಗೆ ಈಗಾಗಲೇ ಪ್ರಕಟವಾಗಿರುವ ಬರೆಹಗಳಿಂದ ಹಾಗೂ ಸಮುದಾಯಗಳ ಬದುಕಿನ ಅವಲೋಕನದಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ದೇಸೀವಾದದ ವಿಭಿನ್ನ ಆಯಾಮದ ಚಿಂತನೆಗಳ ಮೂಲಕ ವಿಶ್ಲೇಷಿಸಲಾಗುವುದು.ಸಮುದಾಯಗಳ ಅಭಿವೃದ್ಧಿ ಪರಿಕಲ್ಪನೆಗಳಿಗೆ ಒಂದು ರೀತಿಯ ಸ್ಪಷ್ಟಿಕರಣವನ್ನು ಪಡೆಯುವ ಹಂಬಲವುಳ್ಳ ಈ ಅಧ್ಯಯನಕ್ಕೆ ಸಮಕಾಲೀನ ಮಹತ್ವವಿದೆ.


* ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,

ಮ್ಯಾಸಬೇಡರ ಮಳೆ ಜ್ಞಾನ

 ಫಾಸಿಲ್ಸ್ ನ 19 ನೇ ಅಖಿಲ ಭಾರತೀಯ ವಾರ್ಷಿಕ ಸಮ್ಮೇಳನ, 2012 ಜನವರಿ 27, 28, 29
ಪ್ರಬಂಧದ ವಿಷಯ : ಮ್ಯಾಸಬೇಡರ ಮಳೆ ಜ್ಞಾನ *
 ಸಾರಲೇಖ
                      
                    'ಮ್ಯಾಸಬೇಡ' ಎನ್ನುವುದು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ನೆಲೆಂತಿರುವ ವಿಶಿಷ್ಟವಾದ ಒಂದು ಬುಡಕಟ್ಟಾಗಿದೆ. ಇದು ತನ್ನದೇ ಆದ ಸಂಸ್ಕೃತಿಯ ವೈಲಕ್ಷಣಗಳೊಂದಿಗೆ ಎಲ್ಲರ ಗಮನ ಸೆಳೆಯುವ ಮೂಲಕ ಇಂದಿಗೂ ಬುಡಕಟ್ಟಿನ ಮೂಲ ಗುಣಗಳನ್ನು ಬಿಟ್ಟುಕೊಡದೇ ಬದುಕುತ್ತಿದೆ. ಆಧುನಿಕತೆಯ ಆರ್ಭಟಗಳ ನಡುವೆಯೂ ತನ್ನ ಪರಾಂಪರಿಕ ಜ್ಞಾನಗಳನ್ನು ನಂಬಿ ನಿರ್ವಸಾಹತೀಕರಣ ಪ್ರಕ್ರಿಯೆಯಲ್ಲಿ ಮುನ್ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಮ್ಯಾಸಬೇಡ ಸಮುದಾಯದ ಒಡಲಲ್ಲಿ ಉಸಿರಾಡುತ್ತಿರುವ ಇಂಥ ಪಾರಂಪರಿಕ ಜ್ಞಾನಗಳ ಬಗ್ಗೆ ಈವರೆಗೂ ಈ ಸಮುದಾಯದ ಬಗ್ಗೆ ನಡೆದಿರುವ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಸ್ತಾಪಗಳು ಇಲ್ಲದೇ ಇರುವುದು ಕಂಡುಬರುತ್ತದೆ.ಈ ಹಿನ್ನೆಲೆಯೊಳಗೆ ಪ್ರಸ್ತುತ ಪ್ರಬಂಧದಲ್ಲಿ ಮ್ಯಾಸಬೇಡರ ಪಾರಂಪರಿಕ ಜ್ಞಾನಗಳಲ್ಲಿ ಪ್ರಮುಖ ಶಾಖೆಯಾಗಿರುವ ಮಳೆ ಬಗೆಗಿನ ಜ್ಞಾನದ ಬಗ್ಗೆ ತಿಳಿಯುವ ಪ್ರಯತ್ನಮಾಡಲು ಉದ್ದೇಶಿಸಲಾಗಿದೆ.
                      ಮ್ಯಾಸಬೇಡರ ಬುಡಕಟ್ಟು ಅತೀ ಪ್ರಾಚೀನ ಪರಂಪರೆಯನ್ನು ಹೊಂದಿದ್ದು , ಅಂಥ ದೀರ್ಘಕಾಲದ ಬದುಕಿನಲ್ಲಿ ಅನೇಕ ರೀತಿಯ ಅವಸ್ತಾಂತರಗಳನ್ನು ಕಂಡಿದೆ. ವೃತ್ತಿಯಲ್ಲಿ ಆರಂಭಕ್ಕೆ ಬೇಟೆಗಾರರಾಗಿದ್ದ ಇವರು ನಂತರ ಪಶುಪಾಲಕರಾಗಿದ್ದರೆ, ತದನಂತರ ಕೃಷಿಕರಾಗಿ ಪರಿವರ್ತನೆಗೊಂಡಿದ್ದಾರೆ. ಈ ಮೂರು ವೃತ್ತಿಗಳಿಗೂ ಮತ್ತು ಮಳೆಗೂ ನಿಕಟ ಸಂಬಂಧವಿದ್ದು ನಿರಂತರವಾಗಿ ಮಳೆಯ ಅವಶ್ಯಕತೆಯಲ್ಲಿ ಜೀವನ ಸಾಗಿಸಿರುವ ಈ ಸಮುದಾಯ, ಮಳೆಯನ್ನು ಕುರಿತಂತೆ ತನ್ನದೇ ಆದ ಜ್ಞಾನವನ್ನು ಹೊಂದಿದೆ. ಈ ಜ್ಞಾನದಲ್ಲಿ ಸ್ವಲ್ಪಭಾಗ ಕಾಲ್ಪನಿಕವಾಗಿದ್ದರೆ, ಹೆಚ್ಚಿನ ಭಾಗ ಅನುಭವ ಜನ್ಯವಾದುದಾಗಿದೆ. ಇಲ್ಲಿ ಮುಖ್ಯವಾಗಿ ಮಳೆ ಹೇಗೆ ಬರುತ್ತದೆ? ಮಳೆ ಬರುವ,ಹೋಗುವ ಸೂಚನೆಗಳೇನು? ವಿವಿಧ ಮಳೆಗಳ ಗುಣಗಳು ಮತ್ತು ಅವುಗಳು ನೀಡಿರುವ ಹಾಗೂ ನೀಡುತ್ತಿರುವ ಅನುಭವಗಳೇನು?ಮಳೆ ಬರದೇ ಹೋದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಬೇಡವೆಂದಾಗ ಮಾಡುತ್ತಿರುವ ಆಚರಣೆಗಳು ಮತ್ತು ಅವುಗಳ ಹಿಂದಿರುವ ಲೋಕದೃಷ್ಟಿ ಯಾವುದು? ಮಳೆ ಸಂಬಂಧೀ ಸಾಹಿತ್ಯ, ನಂಬಿಕೆ ಮತ್ತಿತರ ನಿರೂಪಣೆಗಳೇನು ಎಂಬಿತ್ಯಾದಿ ಅಂಶಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ.
                                ಈ ಸಮುದಾಯ  ಮಳೆಬರುವ ಸೂಚನೆಗಳನ್ನು ಹವಾಮಾನದ ಲಕ್ಷಣಗಳ ಮೂಲಕ ಮತ್ತು ಕನಸಿನಲ್ಲಿ ಕಂಡ ಸಂಗತಿಗಳ ಮೂಲಕ ಗುರುತಿಸುತ್ತದೆ.ಸೂರ್ಯ ಹುಟ್ಟುವ ಜಾಗದಲ್ಲಿ ಮಿಂಚಿದರೆ ಮಳೆಬರುತ್ತದೆ ಎಂಬುದು ಅನಭವದ ಸೂಚನೆಯಾದರೆ,ಕನಸಿನಲ್ಲಿ ಕುರಿಗಳು,ಪೊಲೀಸರು ಕಂಡರೆ ಮಳೆಬರುತ್ತದೆ ಎಂಬುದು ಅನುಭಾವದ ಸೂಚನೆಯಾಗಿದೆ.ಹಾಗೆಯೇ ಮಳೆ ಬರದೇ ಹೋದಾಗ ದೇವರನ್ನು ಕೇಳುವ,ಕೋಲಾಟದ ಮೂಲಕ ಪರಮಾತ್ಮನ ಗಮನ ಸೆಳೆಯುವ,ಪುರಾಣ ಓದುವ ದೇವರನ್ನು ಬೇಡುವ ಕಾರ್ಯಗಳ ಹಿಂದೆ ಅಡಗಿರುವ ಈ ಸಮುದಾಯದ ಲೋಕದೃಷ್ಟಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ವರ್ಷದ ಆರಂಭದಲ್ಲೇ ಮಳೆ ಬಗ್ಗೆ ದೇವರಲ್ಲಿ ಭವಿಷ್ಯ ಕೇಳುವ ದೃಷ್ಟಿಯಿಂದ ದೇವಸ್ಥಾನ ಮುಂದೆ ಕೊಡಹಿಡಿಯುವ,ಕೊಳಲೂದುವ ಆಚರಣೆಗಳು ನಿಜವಾಗಿಯೂ ಕತೂಹಲದಾಯಕವಾಗಿದ್ದು ಇವೆಲ್ಲವುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.ಸಮುದಾಯದ ಒಳಗೆ ಇಂಥ ಸಾಕಷ್ಟು ವಿಚಾರಗಳು ಚಾಲ್ತಿಯಲ್ಲ್ಲಿದ್ದು ಇಂಥ ಎಲ್ಲಾ ಅಂಶಗಳನ್ನು ಕ್ಷೇತ್ರಕಾರ್ಯ ಹಾಗೂ ಆನುಷಂಗಿಕ ಆಕರಗಳ ಮೂಲಕ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಪ್ರಯತ್ನದಿಂದ ಹೊರಹೊಮ್ಮುವ ಫಲಿತಗಳು ಪ್ರಸ್ತುತ ಸಮುದಾಯಕ್ಕೆ ಒಂದು ಗೌರವವನ್ನು , ಹೊರಗಿನ ಸಮುದಾಯಗಳಿಗೆ ಅನುಸರಣಾ ಯೋಗ್ಯ ಸ್ಥಿತಿಯನ್ನು,ಸಮುದಾಯ ಅಧ್ಯಯನಗಳಿಗೆ ಒಂದು ಹೊಸ ಆಯಾಮವನ್ನು ತಂದು ಕೊಡಬಲ್ಲವು ಎಂಬುದು ಪ್ರಸ್ತುತ ಅಧ್ಯಯನದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
 * ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,