Monday, 1 October 2012

ಕನ್ನಡ ಜನಪದ ಸಂಸ್ಕೃತಿ-1 ಕನ್ನಡ, ಜನಪದ ಹಾಗೂ ಸಂಸ್ಕೃತಿ



'ಕನ್ನಡ ಜನಪದ ಸಂಸ್ಕೃತಿ' ವಿಷಯದ ಚಚರ್ೆಗೂ ಮುನ್ನ ಇಲ್ಲಿ ಬಳಸಲಾಗಿರುವ ಶಬ್ದಗಳ ಚರಿತ್ರೆ ಮತ್ತು ಅರ್ಥ ವಿಸ್ತಾರತೆಯನ್ನು ತಿಳಿಯುವುದು ಅಗತ್ಯ. 'ಕನ್ನಡ ಜನಪದ ಸಂಸ್ಕೃತಿ' ಎಂಬ ಶೀಷರ್ಿಕೆಯೊಳಗೆ 'ಕನ್ನಡ', 'ಜನಪದ' ಮತ್ತು 'ಸಂಸ್ಕೃತಿ' ಎಂಬ ಮೂರು ಶಬ್ದಗಳಿವೆ. ಇವುಗಳು ಬೆಳೆದು ನಿಂತಿರುವ ಬಗೆಯನ್ನು ಅವಲೋಕಿಸಿದರೆ ಈ ಮೂರು ಶಬ್ದಗಳು 'ಶಬ್ದ' ಎನ್ನುವ ಅರ್ಥದ ಆಚೆಗಿನ ಪರಿಭಾಷೆ, ಪರಿಕಲ್ಪನೆ ಎಂಬ ವಿಶಾಲ ನೆಲೆಯನ್ನು ಪಡೆದುಕೊಂಡಿವೆ. ಇವುಗಳನ್ನು ಕುರಿತಂತೆ ವಿದ್ವತ್ ವಲಯದಲ್ಲಿ ಮಾತ್ರವಲ್ಲ ಜನ ಸಾಮಾನ್ಯರ ವಲಯದಲ್ಲಿ ಕೂಡ ಭಿನ್ನ ಬಗೆಯ ಬೃಹತ್ ಪ್ರಮಾಣದ ಚಚರ್ೆಗಳು ನಡೆದಿವೆ. ಈ ಬಗೆಯ ವೈವಿಧ್ಯಮಯವಾದ ಚಚರ್ೆಗಳ ವಿಫುಲತೆ ಇವುಗಳ ಅರ್ಥ ಗ್ರಹಿಕೆಗೆ ಸಹಕಾರಿಯಾಗುವುದಕ್ಕಿಂತ ಓದುಗರಲ್ಲಿ ಗೊಂದಲ ಮೂಡಿಸುವಂತಾಗಿದೆ. ಹಾಗಾಗಿ ಈ ಪರಿಭಾಷೆಗಳ ಬಗೆಗೆ ಮಾತನಾಡುವಾಗ ಬಂದಿರುವ ವ್ಯಾಖ್ಯಾನಗಳ ವಿವಿಧ ನೆಲೆಗಳಲ್ಲಿ ಯಾವುದಾದರು ಒಂದು ನೆಲೆಯ ಜಾಡನ್ನು ಹಿಡಿದು ಸ್ಪಷ್ಟ ಅರ್ಥಕ್ಕೆ ಬದ್ಧವಾಗದೇ ಹೋದರೆ ಚಚರ್ೆ ನಿದರ್ಿಷ್ಟ ಹಾಗೂ ಸ್ಪಷ್ಟವಾದ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಾಗಲಾರದು. ಆದ್ದರಿಂದ ಇಲ್ಲಿ ಮೊದಲಿಗೆ ಈ ಪರಿಭಾಷೆ-ಪರಿಕಲ್ಪನೆಗಳ ಬಗೆಗೆ ನಡೆದಿರುವ ವಿಸ್ತಾರವಾದ ಚಚರ್ೆಗಳನ್ನು ಆಧರಿಸಿ ನಿದರ್ಿಷ್ಟವಾದ ಅರ್ಥಗಳನ್ನು ಕಂಡುಕೊಳ್ಳಬಹುದಾಗಿದೆ. 
ಕನ್ನಡ ಎಂಬುದು ಬರೀ ಹೆಸರಲ್ಲವೋ 
ಸಾಮಾನ್ಯವಾಗಿ ಇಂದು ನಾವೆಲ್ಲರೂ 'ಕನ್ನಡ'ವನ್ನು ಭಾಷಾವಾಚಿಕೆಯಾಗಿ, 'ಕನರ್ಾಟಕ'ವನ್ನು ಪ್ರದೇಶವಾಚಿಕೆಯಾಗಿ ಬಳಸುತ್ತಿದ್ದೇವೆ. ಆದರೆ ಕನ್ನಡ ಚಿಂತನಾ ಚರಿತ್ರೆಯೊಳಗೆ ಕನ್ನಡ ಮತ್ತು ಕನರ್ಾಟಕಕ್ಕೆ ಈ ರೀತಿಯ ಸ್ಪಷ್ಟ ವ್ಯತ್ಯಾಸಗಳಿದ್ದಂತೆ ಕಾಣುವುದಿಲ್ಲ. ಉದಾ: ಕವಿರಾಜಮಾರ್ಗಕಾರ ಕನ್ನಡ ಶಬ್ದವನ್ನು ಭಾಷೆ ಹಾಗೂ ಪ್ರದೇಶಗಳೆರಡಕ್ಕೂ ಬಳಸಿದ್ದಾನೆ. ಪÙಳಗನ್ನಡ' ಎಂದಾಗ ಭಾಷೆಯನ್ನು ಕುರಿತು ಹೇಳಿದರೆ; 'ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ', 'ಒಕ್ಕುಂದದ ನಡುವಣ ನಾಡೆ ಕನ್ನಡದ ತಿರುಳ್' ಎಂಬಲ್ಲಿ ಪ್ರದೇಶವನ್ನು ಹೇಳಿದ್ದಾನೆ. ಹಾಗೆಯೇ ಆಂಡಯ್ಯ ಹೇಳುವ 'ಕನ್ನಡಮೆನಿಪ್ಪ ನಾಡು ಚಲುವಾಯ್ತು' ಎಂಬಲ್ಲಿ ಪ್ರದೇಶ ಸೂಚಿತವಾದರೆ ಕನ್ನಡ, ಕಮ್ಮೆ, ತೆಲಗ, ತಿಗುಳ ಎಂಬ ನಿಜಗುಣ ಶಿವಯೋಗಿಗಳ ಪ್ರಯೋಗದಿಂದ ಕನ್ನಡ ಶಬ್ದ ಜನಾಂಗ ಅಥವಾ ಕುಲವನ್ನು ಸೂಚಿಸುತ್ತದೆ. ಮೇಲಿನ ಉಲ್ಲೇಖಗಳಿಂದ ಕನ್ನಡ ಎಂಬುದೊಂದೇ ಶಬ್ದ ಭಾಷೆ-ಪ್ರದೇಶ ಹಾಗೂ ಜನಾಂಗದ ಸೂಚಕವಾಗಿ ಬಳಕೆಯಾಗಿರುವುದು ಕಂಡುಬರುತ್ತದೆ. ಹಾಗಾದರೆ ಕನರ್ಾಟಕ ಶಬ್ದ ಬಳಕೆಯಾಗಿರುವ ಕ್ರಮ ಯಾವುದು? ಕನ್ನಡ, ಕನರ್ಾಟಕ ಶಬ್ದಗಳ ಪರಸ್ಪರ ಸಂಬಂಧವೇನು? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳು ಬಯಸುವ ಉತ್ತರಕ್ಕಾಗಿ ಕನ್ನಡ ಭಾಷೆಯ ಪ್ರಾಚೀನ ಇತಿಹಾಸಕ್ಕೆ ಹೋಗಬೇಕಾಗುತ್ತದೆ. ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಾಗ ಮಹಾಭಾರತದ ಸಭಾಪರ್ವ, ಭೀಷ್ಮಪರ್ವಗಳಲ್ಲಿ 'ಕನರ್ಾಟಕ' ಎಂಬ ಹೆಸರು ದೊರೆಯುತ್ತಾದರೂ ಮಹಾಭಾರತಕ್ಕಿಂತ ಮೊದಲಿನ ಪ್ರಾಚೀನ ತಮಿಳು ಶಾಸನ ಮತ್ತು ಕೃತಿಗಳಲ್ಲಿ ಕರುನಾಟರ್, ಕಣರ್ಾಟರ್, ಕನರ್ಾಡು ಎಂಬ ಪದಗಳು ದೊರೆಯುವುದರಿಂದ ಇವೇ ಈ ನಾಡಿನ ಭಾಷೆಯ ಮೂಲ ಹೆಸರುಗಳೆಂಬುದು ವಿದ್ವಾಂಸರ ಅಭಿಮತ. ಇದನ್ನು ಒಪ್ಪುವುದಾದರೆ ಕನರ್ಾಟಕ ಎಂಬ ಶಬ್ದ ರೂಪತಳೆದ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ 'ಕನ್ನಡದ ಹೆಸರುಗಳು ಕನ್ನಡ ಸಾಹಿತ್ಯದಲ್ಲಿ ಪ್ರಯೋಗ ಕಾಣುವುದಕ್ಕೂ ಮೊದಲು ಸಂಸ್ಕೃತ ಶಾಸನಗಳು ಹಾಗೂ ಸಾಹಿತ್ಯದಲ್ಲಿ ಸಂಸ್ಕೃತೀಕರಣವನ್ನು ಪಡೆದು ಗೋಚರವಾಗುತ್ತವೆ' ಎಂಬ ಕಾರಣವನ್ನು ಗಮನಿಸಿದರೆ ಉತ್ತರ ಸಿಗುತ್ತದೆ. ಯಾವುದೇ ಭಾಷೆ ಮೊದಲೋ ಅಥವಾ ಅದನ್ನು ಮಾತನಾಡುವ ಜನಾಂಗ ಮೊದಲೋ ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಿಕೊಳ್ಳಬೇಕು. ಈ ಪ್ರಶ್ನೆಗೆ ಉತ್ತರ ಸುಲಭ. ಯಾವಾಗಲೂ ಜನಾಂಗ ಮೊದಲು ಆನಂತರ ಭಾಷೆ ಹಾಗಾಗಿ 'ಕನ್ನಡ' ಶಬ್ದ ಕನ್ನಡ ಕರುನಾಡರ್ ಎನ್ನುವ ಬಹುನಾಮಗಳಿಂದ ಜನಾಂಗವನ್ನು ಸೂಚಿಸುವ ಶಬ್ದವಾಗಿತ್ತು. ಮೇಲೆ ಹೇಳಿದಂತೆ ಈ ಶಬ್ದ ಸಂಸ್ಕೃತೀಕರಣದಿಂದಾಗಿ ಕಣರ್ಾಟಕ, ಕನರ್ಾಟಕ ಎಂಬ ಪ್ರದೇಶ ಸೂಚಕ ಶಬ್ದವಾಗಿ ಬಳಕೆಯಾಗಿದೆ ಎಂಬ ವಾದ ಸರಿ ಎನಿಸುತ್ತದೆ. ಈ ಶಬ್ದ ಈಚಿನ ದಿನಗಳಲ್ಲಿ ಹಿಂದಿಗಿಂತಲೂ ಇನ್ನೂ ವಿಶಾಲ ನೆಲೆಗೆ ತನ್ನ ಅರ್ಥವನ್ನು ವಿಸ್ತರಿಸಿಕೊಂಡಿದೆ. ಕನ್ನಡ ಮನಸ್ಸು, ಕನ್ನಡ ಸಂಸ್ಕೃತಿ, ಕನ್ನಡ ಪ್ರಜ್ಞೆ, ಕನ್ನಡತನ ಎಂಬಿತ್ಯಾದಿ ಶಬ್ದಗಳ ಬಳಕೆಯನ್ನು ಕಂಡರೆ ಇದು ಸ್ಪಷ್ಟವಾಗುತ್ತದೆ. ಒಟ್ಟಾರೆ ಕನ್ನಡ, ಕನರ್ಾಟಕ ಎಂಬ ಶಬ್ದಗಳು ಈ ನೆಲಕ್ಕೆ, ಈ ಭಾಷೆಗೆ ಇರುವ ಬರೀ ಹೆಸರುಗಳಲ್ಲ ಅದರಾಚೆಗಿನ ವಿಶಾಲ ನೆಲೆಯ ಭಾವನೆಗಳಾಗಿವೆ. ಹಾಗಾಗಿ ಇಲ್ಲಿ ಕನ್ನಡ ಎಂಬುದನ್ನು ಕೇವಲ ಭಾಷೆಯ ಹೆಸರೆಂದು ಭಾವಿಸದೆ ಕನ್ನಡ ಎಂದರೆ ಒಂದು ಮನಸ್ಸು, ಕುಲ, ಪ್ರಜ್ಞೆ, ವ್ಯಕ್ತಿತ್ವ ಎಂಬ ವಿಶಾಲ ಅರ್ಥವನ್ನು ಒಪ್ಪಿಕೊಳ್ಳಬಹುದಾಗಿದೆ. 
ಜನಪದ ಎಂಬ ಪರಂಪರೆಗಳು
ಈ ಪರಿಕಲ್ಪನೆ ಕನ್ನಡ ಸಂದರ್ಭದಲ್ಲಿ ಬಳಕೆಗೆ ಬಂದಿರುವ ಎರಡು ಪ್ರಮುಖ ಮಾರ್ಗಗಳಿವೆ. ಇವುಗಳಲ್ಲಿ ಒಂದು ಸಂಸ್ಕೃತ ಮಾರ್ಗ. ಮತ್ತೊಂದು ಜರ್ಮನ್ ಮತ್ತು ಇಂಗ್ಲಿಷ್ ಮೂಲದ ಪಾಶ್ಚಾತ್ಯಮಾರ್ಗ. ಸಂಸ್ಕೃತ ಭಾಷೆಯಲ್ಲಿ ಜನಪದ ಎಂಬ ಶಬ್ದ ಬಳಕೆಯಲ್ಲಿದ್ದು ಅಲ್ಲಿ ಅದರ ಅರ್ಥ ಗ್ರಾಮೀಣ, ಹಳ್ಳಿಗ ಎಂಬುದಾಗಿದೆ. ಸಂಸ್ಕೃತದ ಈ ಶಬ್ದ ಕೇವಲ ಒಂದು ಪದವೆಂಬಂತೆ ಮೇಲೆ ಸೂಚಿಸಿದ ಅರ್ಥಕ್ಕೆ ಸೀಮಿತಗೊಂಡು ಕನ್ನಡ ಸಾಹಿತ್ಯದಲ್ಲಿ ಬಳಕೆಗೊಂಡಿರುವಂತೆ ಕಂಡುಬರುತ್ತದೆ. ಉದಾ: ಕವಿರಾಜಮಾರ್ಗದಲ್ಲಿ ಬರುವ '................ ಭಾವಿಸಿದ ಜನಪದಂ' ಸಾಲನ್ನು ಗಮನಿಸಬಹುದು. ಒಟ್ಟಾರೆ ಸಂಸ್ಕೃತದ ಈ ಮಾರ್ಗದಲ್ಲಿ ಜನಪದ ಎಂಬ ಶಬ್ದಕ್ಕೆ ಹೆಚ್ಚಿನ ಅರ್ಥವ್ಯಾಪ್ತಿಯೇನೂ ದೊರೆಯದೆ ಸೀಮಿತ ಅರ್ಥದಲ್ಲಿ ಮಾತ್ರ ಮುಂದುವರೆಯುವಂತಾಯಿತು. 
ಪಾಶ್ಚಾತ್ಯ ಮಾರ್ಗದಲ್ಲಿ ಮಾತ್ರ 'ಜನಪದ' ಶಬ್ದ ಕೇವಲ ಶಬ್ದವಲ್ಲ. ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅರ್ಥಗಳನ್ನು ಕೊಡುವ ಕಠಿಣ ಶಬ್ದ ಮಾತ್ರವಲ್ಲ. ಇವುಗಳಾಚೆಗೆ ಒಂದು ಪರಿಭಾಷೆಯಾಗಿ ಅದರಾಚೆಗೆ ಒಂದು ಪರಿಕಲ್ಪನೆಯಾಗಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಕನ್ನಡದಲ್ಲಿ ಈಗ ಜಾನಪದ ಅಧ್ಯಯನಗಳ ಸಂದರ್ಭದಲ್ಲಿ ಜನಪದ ಎನ್ನುವ ಪರಿಭಾಷೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಕನ್ನಡಿಗ ಈ ಜನಪದ ಶಬ್ದ ಇಂಗ್ಲಿಷ್ ಭಾಷೆಯ ಈಠಟಞ ಎನ್ನುವ ಶಬ್ದ ಕನ್ನಡ ಅನುವಾದವಾಗಿದೆ. ಇಂಗ್ಲಿಷ್ನ ಈಠಟಞ ಎನ್ನುವ ಶಬ್ದಕ್ಕೆ ಜರ್ಮನ್ ಭಾಷೆಯ 'ಆಚಿ ಗಿಠಟಞ' ಎಂಬ ಶಬ್ದ ಮೂಲ. ಇದನ್ನು ರಮ್ಯ ರಾಷ್ಟ್ರೀಯವಾದದ ಪ್ರವರ್ತಕ ಗಾಟ್ ಪ್ರೀಡ್ಮನ್ ಹರ್ಡರ್ 18ನೇ ಶತಮಾನದ ಮಧ್ಯಯುಗದಲ್ಲಿ (1744-1802) ಬಳಸುತ್ತಾನೆ. ಹರ್ಡರ್ನ ಪ್ರಕಾರ 'ಆಚಿ ಗಿಠಟಞ' ಎಂದರೆ 'ಮಣ್ಣಿಗೆ ಹತ್ತಿರವಾಗಿ ಬದುಕುವ ಗ್ರಾಮೀಣ ಜನರ ಗುಂಪು'. ಇದನ್ನೇ ಮುಂದೆ ಇಂಗ್ಲೆಂಡಿನ ಡಬ್ಲ್ಯೂ.ಜೆ. ಥಾಮ್ಸ್ (1846) ಖಿಜ ಈಠಟಞ ಎಂದು ಕರೆದ. ಇವುಗಳ ಪ್ರಭಾವದಿಂದಾಗಿ ಜನಪದ ಎಂಬ ಶಬ್ದವನ್ನು ಬಳಕೆಗೆ ತಂದರು. ಈ ಶಬ್ದ ಬಳಕೆಯ ಚರಿತ್ರೆಯಲ್ಲಿ ಬಳಸಿದವರು ನೀಡಿದ ಅರ್ಥಗಳನ್ನು ಇಲ್ಲಿ ಗಮನಿಸಬೇಕು. ಈಗಾಗಲೇ ಹೇಳಿದಂತೆ ಜರ್ಮನಿಯ ಹರ್ಡರ್ 18ನೇ ಶತಮಾನದ ಮಧ್ಯೆಭಾಗದಲ್ಲಿ ಜರ್ಮನಿಯೊಳಗೆ ನಡೆದ 'ಜರ್ಮನಿ ಏಕೀಕರಣ'ದ ಸಲುವಾಗಿ 'ರಮ್ಯ ರಾಷ್ಟ್ರೀಯವಾದ' ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ. ಈ ವಾದದಲ್ಲಿ 'ಯಾವ ಎರಡು ರಾಷ್ಟ್ರಗಳು ಭೌಗೋಳಿಕ ಮತ್ತು ಐತಿಹಾಸಿಕ ಗುಣವೂ ಕೂಡ ಒಂದೇ ಆಗಿರುವುದಿಲ್ಲ.... ಆಯಾ ರಾಷ್ಟ್ರದ ಸಾಂಸ್ಕೃತಿಕ ವೈಶಿಷ್ಟ್ಯ ಆ ದೇಶದ ಜನ ಸಾಮಾನ್ಯರ ಸಾಹಿತ್ಯದಲ್ಲಿ, ಆಚಾರ-ವಿಚಾರಗಳಲ್ಲಿ ವ್ಯಕ್ತವಾಗುತ್ತದೆ. ಇಂಥ ಜನ ಸಾಮಾನ್ಯರನ್ನೇ ಹರ್ಡರ್ 'ಆಚಿ ಗಿಠಟಞ' ಎಂದು ಕರೆದ. ಇದರ ನಂತರ ಡಬ್ಲ್ಯೂ.ಜೆ. ಥಾಮ್ಸ್ ಬಳಸಿದ ಖಿಜ ಈಠಟಞ ಎಂಬ ಪಯರ್ಾಯ ಶಬ್ದಕ್ಕೆ ಗ್ರಾಮೀಣ ವಲಯಕ್ಕೆ ಸೇರಿದ ಅವಿದ್ಯಾವಂತ, ಅನಕ್ಷರಸ್ಥ, ಕೆಳಸ್ಥರದ ಜನ ಎಂಬರ್ಥವಿದೆ. ಕನ್ನಡದಲ್ಲಿ  ಈಠಟಞ ಗೆ ಸಂವಾದಿಯಾಗಿ ಬಳಕೆಯಾದ ಜನಪದ ಶಬ್ದಕ್ಕೆ ಥಾಮ್ಸ್ ಅವರು ನೀಡಿದ ಅರ್ಥವೇ ಪ್ರಧಾನವಾಗಿತ್ತು. ಹಾಮಾನಾ ಅವರು ವಿವರಿಸಿದಂತೆ ಜನಪದವೆಂದರೆ ಗ್ರಾಮೀಣ ಅನಕ್ಷರಸ್ಥ ಮಣ್ಣಿಗೆ ಹತ್ತಿರವಾಗಿ, ಪ್ರಕೃತಿಯ ಭಾಗವಾಗಿ ಬದುಕುವ ಜನರ ಗುಂಪು. ಈ ವ್ಯಾಖ್ಯಾನಗಳು 20ನೇ ಶತಮಾನದ ಕೊನೆಯ ಹೊತ್ತಿಗೆ ಈಠಟಞ ಎನ್ನುವ ಈ ಪದ ಅಮೇರಿಕಾದ ವಿದ್ವಾಂಸರ ದೃಷ್ಟಿಕೋನದಲ್ಲಿ ತನ್ನ ಅರ್ಥ ವ್ಯಾಪ್ತಿಯನ್ನೂ ಬದಲಾಯಿಸಿಕೊಂಡಿರುವುದನ್ನು ಗುರುತಿಸಬಹುದು. ಉದಾ: ಅಲನ್ ಡಂಡಸ್ ಎಂಬ ಅಮೆರಿಕಾದ ಜಾನಪದ ವಿದ್ವಾಂಸ ಈಠಟಞ ಎಂಬುದಕ್ಕೆ ಕೊಡುವ ಅರ್ಥ ಹೀಗಿದೆ. 'ಒಂದು ಸಮಾನ ಅಂಶವುಳ್ಳ ಜನರ ಗುಂಪೇ ಜನಪದ. ಆ ಸಮಾನ ಅಂಶ ಭಾಷೆ, ವೃತ್ತಿ, ಧರ್ಮ, ವಯಸ್ಸು ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಅದಕ್ಕಿಂತ ಹೆಚ್ಚು ಅಂಶಗಳಾಗಿರಬಹುದು' ಈ ವ್ಯಾಖ್ಯಾನದ ಪರಿಣಾಮವಾಗಿ ಜನಪದ ಎಂದರೆ ಗ್ರಾಮೀಣರು, ಮಣ್ಣಿಗೆ ಹತ್ತಿರವಾಗಿ ಬದುಕುವ ಅನಕ್ಷರಸ್ಥ ಜನರು ಎಂಬ ಅಭಿಪ್ರಾಯಗಳ ಬದಲಾಗಿ ಆದಿವಾಸಿಗಳು, ನಗರವಾಸಿಗಳು, ಗ್ರಾಮವಾಸಿಗಳು ಎಲ್ಲರೂ ಜನಪದರು ಎಂಬ ಕಲ್ಪನೆ ರೂಪಗೊಂಡಿತು. ಈ ಬದಲಾವಣೆಯ ಪರಿಣಾಮ ನಗರ ಜಾನಪದ, ಕೈಗಾರಿಕಾ ಜಾನಪದ, ವಿದ್ಯಾಥರ್ಿ ಜಾನಪದ ಎಂಬಂತಹ ಚಚರ್ೆಗಳು ಶುರುವಾದವು. ಇಂದಿಗೆ ಮೇಲಿನ ಎಲ್ಲಾ ವ್ಯಾಖ್ಯಾನಗಳೂ ಬಳಕೆಗೊಳ್ಳುತ್ತಿದ್ದು, ಅರ್ಥಗ್ರಹಿಕೆಗೆ ಸಾಕಷ್ಟು ತೊಡಕುಂಟಾಗಿದೆ. ಭೂತ ಮತ್ತು ವರ್ತಮಾನಗಳನ್ನು ಭವಿಷ್ಯದ ದೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡುವ ಅಮೆರಿಕಾದ ವಿದ್ವಾಂಸರ ಹೊಸ ಕ್ರಮದಿಂದ ಈ ಕ್ಷೇತ್ರದ ಗೊಂದಲಗಳು ಇನ್ನೂ ಹೆಚ್ಚಾಗಿವೆ. ಹಾಗಾಗಿ ಈ ಬಗ್ಗೆ ನಡೆದ ಚಚರ್ೆಗಳಲ್ಲಿ ದೊರೆಯುವ ಮಾಹಿತಿಗಳಿಂದ ಜನಪದ ಎಂದರೆ ಹಳ್ಳಿಯ, ಮಣ್ಣಿನ ಮಕ್ಕಳ ಗುಂಪು; ಪರಂಪರೆಯನ್ನು ಮೌಲ್ಯಾಧಾರಿತವಾಗಿ ಮುಂದುವರೆಸಿಕೊಂಡು ಬಂದಿರುವ ಗುಂಪು. ಇಂಥ ಗುಂಪುಗಳು ಒಂದಲ್ಲ ಹಲವು ಎಂಬುದಾಗಿ ಅರ್ಥವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡು ಮುಂದುವರೆಯಬಹುದು. 
ಸಂಸ್ಕೃತಿ ಎಂಬ ಜೀವನ ವಿಧಾನ
'ಸಂಸ್ಕೃತಿ' ಎಂಬ ಶಬ್ದ ಬಳಕೆಗೆ ಬಂದಿದ್ದು 20ನೇ ಶತಮಾನದಲ್ಲಿ. ಆದರೆ ಇದನ್ನು ಬೇರೆ ಬೇರೆ ಹೆಸರಲ್ಲಿ ಕರೆಯುವ ಪ್ರಯತ್ನ ಆದಿಯಿಂದಲೂ ಚಾಲ್ತಿಯಲ್ಲಿತ್ತು. ಕನರ್ಾಟಕದ ಮಟ್ಟಿಗೆ ಹೇಳುವುದಾದರೆ ಕಳೆದ 85 ವರ್ಷಗಳ ಹಿಂದೆ ಸಂಸ್ಕೃತಿ ಎಂಬ ಶಬ್ದದ ಬಳಕೆ ಇರಲಿಲ್ಲ. ಬದಲಿಗೆ ಸಂಸ್ಕಾರ, ಸದಾಚಾರ, ಸೌಜನ್ಯ, ಸಾತ್ವಿಕತೆ, ಮಯರ್ಾದೆ ಎಂಬ ಪದಗಳು ಬಳಕೆಯಲ್ಲಿದ್ದವು. ಇವುಗಳನ್ನೆ ಮುಂದೆ ಸಂಸ್ಕೃತಿ ಎಂಬ ಪರಿಕಲ್ಪನೆ ಒಳಗೊಳ್ಳುತ್ತಾ ಸಾಗಿದೆ. ಹಾಗಾಗಿ ಸಂಸ್ಕೃತಿ ಶಬ್ದ ತನ್ನ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಇಂದು ಯಾವ ಅರ್ಥದಲ್ಲಿ ಬಳಕೆಗೊಳ್ಳುತ್ತಿದೆ ಎಂಬುದನ್ನು ಮುಂದಿನಂತೆ ಸ್ಥೂಲವಾಗಿ ವಿವೇಚಿಸಬಹುದು; ಈಗಾಗಲೇ ಹೇಳಿದಂತೆ ಸಂಸ್ಕೃತಿ ಎಂದರೆ ಬಹಳಷ್ಟು ವರ್ಷಗಳ ಕಾಲ ಮನುಷ್ಯನ ಮನಸ್ಸಿನ ಪರಿಪಕ್ವತೆಯ ಸ್ಥಿತಿಯನ್ನು ಸೂಚಿಸುವ ಪರಿಕಲ್ಪನೆಯಾಗಿತ್ತು. ಅದರಲ್ಲೂ ಈ ಮನಸ್ಥಿತಿಗೆ ಹಾಗೂ ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆಗೂ ನಿಕಟ ಸಂಬಂಧವಿದೆ ಎಂಬಂತೆ ಬಿಂಬಿಸಲಾಗಿತ್ತು. ಅಂದರೆ ಮೇಲ್ವರ್ಗಗಳ ಜನರ ಮನಸಲ್ಲಿ ಮಾತ್ರ ಪರಿಪಕ್ವತೆ ಇರುತ್ತೆ ಎಂಬ ಭಾವನೆ ಅಚಲವಾಗಿ ಬೇರೂರಿತ್ತು. ಇದರ ನಂತರ ಪ್ರಕೃತಿಯ ಸಾಮಾನ್ಯ ಸ್ಥಿತಿಯಿಂದ ಉನ್ನತ ಸ್ಥಿತಿಗೆ ತಲುಪಿದ ಭೌತಿಕ-ಭೌದ್ಧಿಕ ಸಂಗತಿಗಳೆಲ್ಲವೂ ಸಂಸ್ಕೃತಿ ಎಂಬ ಹೊಸ ವ್ಯಾಖ್ಯಾನ ಕಾಣಿಸಿಕೊಳ್ಳುತ್ತದೆ. ಈ ವ್ಯಾಖ್ಯಾನಕಾರರು ಹೇಳುವಂತೆ ಕಾಡಿನಲ್ಲಿರುವ ಕಲ್ಲು ಪ್ರಕೃತಿ; ಆ ಕಲ್ಲು ಶಿಲ್ಪಿಯ ಕೈಯಿಂದ ಪೆಟ್ಟು ತಿಂದು ಮೂತರ್ಿ ರೂಪ ಪಡೆದಾಗ ಅದು ಸಂಸ್ಕೃತಿ ಹಾಗೆಯೇ ಮನುಷ್ಯನ ಬರೀ ಮಾತು ಪ್ರಕೃತಿ; ಸಂಗೀತದಿಂದ ಕೂಡಿದ ಹಾಡು ಸಂಸ್ಕೃತಿ. ಇದರ ನಂತರದ ಸಂಸ್ಕೃತಿ ಅಧ್ಯಯನಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಮಾನವಶಾಸ್ತ್ರದ ಹಿನ್ನೆಲೆಯ ಚಿಂತನೆಗಳು. ಈ ಚಿಂತನೆಗಳು 'ಮನುಷ್ಯನು ಪರಂಪರೆಯಿಂದ ಪಡೆದ ಬದುಕಿನ ಮೌಲ್ಯಗಳ ಮೊತ್ತ' 'ಮನುಷ್ಯನ ಜೀವನ ವಿಧಾನವೇ ಸಂಸ್ಕೃತಿ' ಎನ್ನುವ ವ್ಯಾಖ್ಯಾನಗಳನ್ನು ನೀಡಿದವು. ಇಂಥ ಪ್ರಯತ್ನಗಳ ಫಲವಾಗಿ ಸಂಸ್ಕೃತಿ ಪರಿಕಲ್ಪನೆ ತನ್ನ ಅರ್ಥ ಸಾಧ್ಯತೆಗಳನ್ನು ವಿಸ್ತರಿಸಿಕೊಂಡಿತು. ಇಲ್ಲಿನ 'ಜೀವನ ವಿಧಾನವೇ ಸಂಸ್ಕೃತಿ' ಎನ್ನುವುದನ್ನು ಒಪ್ಪುವುದಾದರೆ; ಪ್ರತಿಯೊಂದು ವ್ಯಕ್ತಿ, ಸಮೂಹ, ಕುಟುಂಬ, ಜಾತಿ, ಜನಾಂಗಗಳಿಗೆ ತನ್ನದೇ ಆದ ಜೀವನ ಕ್ರಮವಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಜೀವನ ಕ್ರಮ ಎಂದರೆ ಬದುಕಿನ ಧರ್ಮ, ಆಥರ್ಿಕತೆ, ವೃತ್ತಿಗಳು, ರೀತಿ-ನೀತಿಗಳು, ನಂಬಿಕೆ-ಸಾಂಪ್ರದಾಯ-ಆಚರಣೆಗಳು, ಆಹಾರ ಪಾನಿಯಾಗಳು, ಸಾಹಿತ್ಯಾದಿ ಕಲೆಗಳು ಇವುಗಳಿಗೆ ಪೂರಕವಾದ ಭೌತಿಕ ವಸ್ತುಗಳು, ಬೌದ್ಧಿಕ ಚಿಂತನೆಗಳು ಇವೆಲ್ಲವೂ ಸಂಸ್ಕೃತಿ ಎಂಬ ಪರಿಕಲ್ಪನೆಯೊಳಗೆ ಸೇರುತ್ತವೆ. 
ಇಲ್ಲಿಯವರೆಗೂ ಕನ್ನಡ, ಜನಪದ, ಸಂಸ್ಕೃತಿ ಎಂಬ ಪರಿಕಲ್ಪನೆಗಳ ಬಗ್ಗೆ ಈವರೆಗೂ ದೀರ್ಘವಾದ ಚಚರ್ೆಗಳು ನಡೆದಿದ್ದು ಅದರ ಆಧಾರದ ಮೇಲೆ ಇವುಗಳ ಅರ್ಥವ್ಯಾಪ್ತಿಯನ್ನು ಹೀಗೆ ಸಂಕ್ಷೇಪಿಸಬಹುದು:
ಕನ್ನಡ ಎಂದರೆ ಭಾಷೆ/ಪ್ರದೇಶಕ್ಕಿರುವ ಹೆಸರು ಮಾತ್ರವಲ್ಲ. ಬದಲಿಗೆ ಒಂದು ಪಾರಂಪರಿಕ ಕುಲ, ಒಂದು ಗುಣ ಒಂದು ಮನೋಧರ್ಮ, ಒಂದು ಮನಸ್ಸು, ಒಂದು ಪ್ರಜ್ಞೆ. ಇಂಥ ಪ್ರಜ್ಞೆಯುಳ್ಳ ಗ್ರಾಮೀಣ ಅಕ್ಷರಸ್ತರಲ್ಲದ, ದುಡಿಯುವ ಜನರ ಗುಂಪಿನ ಅಥವಾ ಗುಂಪುಗಳ ಜೀವನ ವಿಧಾನವೇ ಕನ್ನಡ ಜನಪದ ಸಂಸ್ಕೃತಿ. 
ಡಾ.ಎಸ್.ಎಂ. ಮುತ್ತಯ್ಯ

Friday, 28 September 2012

ವಿಶ್ವ ಸಾಹಿತ್ಯದ ಮಹಾಕವಿ ಕಾಳಿದಾಸ


            ಕಾಳಿದಾಸ ಇಡೀ ಭಾರತೀಯ ಸಾಹಿತ್ಯದಲ್ಲೇ ಶ್ರೇಷ್ಠ ಪ್ರತಿಭೆ. ಭಾರತಕ್ಕೆ ಮಾತ್ರವಲ್ಲ ವಿಶಾಲ ಜಗತ್ತಿಗೆ ಈಗ ಚಿರಪರಿಚಿತ. ಇಂಥ ಮಹಾನ್ ಕವಿಯ ಬಗ್ಗೆ ಸಂಸ್ಕೃತ ವಿದ್ವಾಂಸ ಕೆ. ಕೃಷ್ಣಮೂರ್ತಿ ಅವರು ಹೀಗೆ ಬರೆದಿದ್ದಾರೆ : "ಸರಸ್ವತಿಯ ಅವತಾರ, ಕವಿ ಕುಲಗುರು, ನಾಟಕ ಸಾಮ್ರಾಜ್ಯದ ಅನಭಿಷಿಕ್ತ ದೊರೆ, ಸಾರ್ವಭೌಮ, ಸಾವಿರಾರು ವರ್ಷಗಳ ಸಂಸ್ಕೃತ ನಾಟಕದ ಇತಿಹಾಸದಲ್ಲಿ ಹಿಂದಿನವರ ಕೃತಿಗಳನ್ನು; ಮುಂದಿನವರ ಕೃತಿಗಳನ್ನು ಇಕ್ಕಿ ಮೆಟ್ಟಿದ ಮಹಾಮತಿ. ವಿಶ್ವಸಾಹಿತ್ಯದ ಮಹಾಕವಿ, ಸಾಹಿತ್ಯ ತಾರಾಗಣದಲ್ಲಿ ರಾರಾಜಿಸುವ ಉಜ್ವಲ ನಕ್ಷತ್ರ. ಜೋನ್ಸ್, ಗಯಟೆ, ಟ್ಯಾಗೂರ್, ಅರಬಿಂದೊ, ರಾಧಾಕೃಷ್ಣನ್ ಮುಂತಾದ ಮಹಾ ಮೇಧಾವಿಗಳ ಮುಕ್ತ ಪ್ರಶಂಸೆಗೆ ಮೀಸಲಾಗಿರುವ ನಮ್ಮ ರಾಷ್ಟ್ರಕವಿ, ಭಾರತದ ಷೇಕ್ಸ್ಪಿಯರ್, ಸಂಸ್ಕೃತ ಕಾವ್ಯದ ಅತ್ಯುನ್ನತ ಶಿಖರ, ಈತನಿಗೆ (ಕಾಳಿದಾಸನಿಗೆ) ಕೈ ಮುಗಿಯದ ಕವಿಯಿಲ್ಲ. ಅವನನ್ನು ಮೆಚ್ಚದ ವಿಮರ್ಶಕನಿಲ್ಲ. ಅವನ ಹೆಸರನ್ನು ಗೌರವಿಸದ ಭಾರತೀಯನಿಲ್ಲ." ಈ ಮಾತುಗಳು ಕಾಳಿದಾಸನ ಸಾಹಿತ್ಯ ಪ್ರತಿಭೆಯ ಮಟ್ಟವನ್ನು ಸೂಚಿಸುತ್ತದೆ. ಇದಿಷ್ಟೇ ಅಲ್ಲದೆ ಕಾಳಿದಾಸನ ನಂತರದ ಭಾರತೀಯ ಹಾಗೂ ಪಾಶ್ಚಾತ್ಯ ಲೇಖಕರು ಅನೇಕರು ಈತನ ಬಗ್ಗೆ ಹೆಮ್ಮೆಪಡಬಹುದಾದ ಮಾತುಗಳನ್ನಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು : ಸಂಸ್ಕೃತದ ಹೆಸರಾಂತ ಸಾಹಿತಿ ಬಾಣಭಟ್ಟ ಕಾಳಿದಾಸನ ವಾಕ್ಯಗಳನ್ನು ಕೇಳಿದರೆ ಒಂದು ತರದ ಅನನ್ಯ ಪ್ರೀತಿಭಾವವು ನಮ್ಮಲ್ಲಿ ಚಿಮ್ಮುವುದು ಎಂದಿದ್ದಾರೆ; ಕವಿ ಕುಲ ಗುರು: ಕಾಲಿದಾಸೋ ವಿಲಾಸಃ ಎನ್ನುತ್ತಾನೆ - ಕವಿ ಜಯದೇವ. ಅಲಂಕಾರ ಶಾಸ್ತ್ರಜ್ಞ ರಾಜಶೇಖರ ಶೃಂಗಾರ ಮತ್ತು ಲಾಲಿತ್ಯ ಇವುಗಳಲ್ಲಿ ಕಾಳಿದಾಸನನ್ನು ಯಾರೂ ಗೆಲ್ಲಲಾರರು ಎಂದಿದ್ದಾನೆ. ಟೀಕಾಕಾರ ಮಲ್ಲಿನಾಥನಂತೂ ಕಾಳಿದಾಸನ ಶಬ್ದಗಳ ಸಾರವನ್ನು ಕಾಳಿದಾಸ ಇಲ್ಲವೆ ಸರಸ್ವತಿ ಇಲ್ಲ ಸಾಕ್ಷಾತ್ ಚತುರ್ಮುಖ ಬ್ರಹ್ಮನಲ್ಲದೆ ನನ್ನಂತಹವರು ತಿಳಿದುಕೊಳ್ಳಲಾರರು ಎಂದು ಉದ್ಘರಿಸುತ್ತಾನೆ. ಹೀಗೆ ಭಾರತೀಯ ಶ್ರೇಷ್ಠ ದರ್ಜೆಯ ಕವಿ - ಟೀಕಾಕಾರರಿಂದ ಮಾತ್ರವಲ್ಲದೆ ಪಾಶ್ಚಾತ್ಯ ಕವಿ - ವಿಮರ್ಶಕರಿಂದಲೂ ಪ್ರಶಂಸೆಗೆ ಒಳಗಾದವನು ಕಾಳಿದಾಸ. ಕಾಳಿದಾಸನ ಶಾಕುಂತಲ ನಾಟಕವನ್ನು ಕುರಿತು ವಿಶ್ವಕವಿ ಗಯಟೆ ಸ್ವರ್ಗ ಮತ್ತು ಭೂಮಿಗಳ ಸಂಗಮವಾಗಿದೆ ಶಾಕುಂತಲ ನಾಟಕ ಎಂಬುದಾಗಿ ಕೊಂಡಾಡಿದ್ದಾನೆ. ಹಾಗೆಯೇ ಕಾಳಿದಾಸನ ಕಾವ್ಯದ ಬಗ್ಗೆ ರಾಜರುಗಳ ಬಂಗಾರದಲ್ಲಿ ಇಲ್ಲವೇ ಸ್ಪಟಿಕ ಶಿಲೆಯಲ್ಲಿ ನಿಲ್ಲಿಸಿದ ಯಾವ ಸ್ಮಾರಕವೂ ಈ ಕಾವ್ಯಕ್ಕಿಂತ ಹೆಚ್ಚು ಬಾಳಲಾರವು ಎಂದು ಪ್ರಶಂಸಿದ್ದಾರೆ. ಇಂಗ್ಲೀಷ್ ವಿಮರ್ಶಕರಲ್ಲಿ ಬಹಳಷ್ಟು ಜನ ಕಾಳಿದಾಸನೆಂದರೆ ಭಾರತದ ಷೇಕ್ಸ್ಪಿಯರ್ ಎಂದು ಸಾರಿದರು. ಹೀಗೆ ಹೇಳುವಲ್ಲಿ ಹೋಲಿಕೆಯ ಭಾವ ಮಾತ್ರ ಮುಖ್ಯವಲ್ಲ. ಷೇಕ್ಸ್ಪಿಯರನ ಶ್ರೇಷ್ಠತೆ ಎಂಥದ್ದು ಎಂಬುದನ್ನು ಅರಿತಲ್ಲಿ ಕಾಳಿದಾಸನಲ್ಲಿ ಅಂತಹ ಶ್ರೇಷ್ಠತೆ ಇದೆ ಎಂಬುದು ಮುಖ್ಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಏನೆಂದರೆ, ಪಾಶ್ಚಾತ್ಯರು ಕಾಳಿದಾಸನ ಕೃತಿಗಳ ಬಗ್ಗೆ ಮೆಚ್ಚುಗೆಯ ಮಾತುಗಳಲ್ಲೇ ಅವರ ಮನ್ನಣೆಯ ಭಾವವನ್ನು ಮುಗಿಸಲಿಲ್ಲ. ಬದಲಿಗೆ ಅವರವರ ದೇಶೀ ಭಾಷೆಗಳಲ್ಲಿ ಕಾಳಿದಾಸನ ನಾಟಕಗಳನ್ನು ಸಾರ್ವಜನಿಕರಿಗೆ ಪ್ರದಶರ್ಿಸಿದ್ದಾರೆ. ಒಟ್ಟಾರೆ, ಕಾಳಿದಾಸ ಭಾರತ ದೇಶದ ಮತ್ತು ವಿಶ್ವ ಮಾನ್ಯತೆಯ ಶ್ರೇಷ್ಟಕವಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಪೂರಕವಾದ ಐತಿಹ್ಯವೊಂದು ಹೀಗಿದೆ: ಒಮ್ಮೆ ನಮ್ಮ ದೇಶದಲ್ಲಿ ಶ್ರೇಷ್ಠ ಕವಿಗಳು ಎಷ್ಟು ಜನರಿದ್ದಾರೆ ಎಂಬ ಎಣಿಕೆ ನಡೆಯಿತಂತೆ. ಎಣಿಕೆ ಕಿರುಬೆರಳಿನಿಂದ ಆರಂಭವಾಯಿತು. ಮೊದಲಿಗೆ ಕಾಳಿದಾಸ ಎಂದು ಕಿರುಬೆರಳನ್ನು ಮಡಿಚಲಾಯಿತು. ಆಮೇಲೆ ಆತನಿಗೆ ಸಮಾನಾದ ಇನ್ನೊಬ್ಬ ಕವಿಯೇ ಇಲ್ಲ ಎನ್ನುವುದಕ್ಕೆ ಉಂಗುರದ ಬೆರಳನ್ನು ಮಣಿಸಲಾಯಿತಂತೆ. ಅಂದರೆ ಕಾಳಿದಾಸನ ಮಟ್ಟದ ಇನ್ನೊಬ್ಬ ಕವಿ ಈ ದೇಶದಲ್ಲಿರಲಿಲ್ಲ ಎಂಬರ್ಥ. ಈ ಐತಿಹ್ಯ ಒಂದು ಹಂತಕ್ಕೆ ಉತ್ಪ್ರೇಕ್ಷೆ ಇರಲಾರದು. ಕಾಳಿದಾಸನ ಪ್ರತಿಭೆಯ ಉನ್ನತಿಯೇ ಅಂಥದ್ದು. ಈ ಮಾತಿಗೆ ಪೂರಕವಾಗಿ ಪ್ರಚಲಿತವಿರುವ ಮತ್ತೊಂದು ಐತಿಹ್ಯವನ್ನು ಗಮನಿಸಬಹುದು ಸಂಸ್ಕೃತ ಸಾಹಿತ್ಯದ ಹೆಸರಾಂತ ನಾಟಕಕಾರ ಭವಭೂತಿ ತನ್ನ 'ಉತ್ತರ ರಾಮ ಚರಿತೆ' ನಾಟಕದಲ್ಲಿ ರಾಮ-ಸೀತೆಯರು ವನವಾಸದ ಸಂದರ್ಭದಲ್ಲಿ ನಡೆದುಕೊಂಡ ವರ್ತನೆಯ ಸಂದರ್ಭಗಳನ್ನು ವಿವರಿಸುವುದಕ್ಕೆ ಬರೆದಿದ್ದ ಕೆಲವು ಶ್ಲೋಕಗಳನ್ನು ಕಾಳಿದಾಸನಿಗೆ ತೋರಿಸಿದನಂತೆ ಅದನ್ನೆಲ್ಲ ನೋಡಿದ ಕಾಳಿದಾಸ ಎಲ್ಲ ಸರಿಯಿದೆ ಆದರೆ ಈ ಶ್ಲೋಕದ ಕೊನೆಯಲ್ಲಿ ಒಂದು ಅನಸ್ವರ ಮಾತ್ರ ಹೆಚ್ಚಾಗಿದೆ ಎಂದನಂತೆ. ಇಂಥ ಅಪಾರ ಪಾಂಡಿತ್ಯ ಹಾಗೂ ಸೂಕ್ಷ್ಮ ಪ್ರಜ್ಞೆಯ ಇನ್ನೊಬ್ಬ ಕವಿ ಆ ಕಾಲದಲ್ಲಿ ಇರಲಿಲ್ಲ ಎಂದರೆ ಉತ್ಪ್ರೇಕ್ಷೆ ಏನಲ್ಲ. ಇಂಥ ಹಲವಾರು ಕಾರಣಗಳಿಂದಾಗಿಯೇ ಕಾಳಿದಾಸನನ್ನು ವಿಶ್ವಸಾಹಿತ್ಯಕ್ಕೆ ಸಲ್ಲುವ ಮಹಾನ್ ಕವಿ ಎಂದು ಹೆಸರಿಸಲಾಗಿದೆ. ಈ ಮಾತನ್ನು ಕಾಳಿದಾಸನ ಕೃತಿಗಳನ್ನು ನೋಡಿದವರೆಲ್ಲರೂ ಒಪ್ಪುತ್ತಾರೆ. 
ಕಾಲ - ಜೀವನ - ವ್ಯಕ್ತಿತ್ವ
       ಇಂಥ ಮೇದಾವಿ ಕವಿ ಭಾರತದ ಯಾವ ಭೂಭಾಗದಲ್ಲಿ ಜನಿಸಿದ? ಯಾವ ಕಾಲದಲ್ಲಿ ಬದುಕಿದ್ದ? ಆತನ ಜೀವನದ ವಿವರಗಳೇನು? ಆತನ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತಿಳಿಯುವುದು ಅವಶ್ಯಕವೆನಿಸುತ್ತದೆ. ಕಾಳಿದಾಸನ ಈ ವಿವರಗಳು ಎಲ್ಲಿಯೂ ಪ್ರತ್ಯೇಕವಾಗಿ, ಸ್ಪಷ್ಟವಾಗಿ ಮತ್ತು ನಿದರ್ಿಷ್ಟವಾಗಿ ದೊರೆಯುವುದಿಲ್ಲ. ಸ್ವತಃ ಕವಿಯಾಗಲಿ ಅಥವಾ ಸಾಹಿತ್ಯ ಚರಿತ್ರೆಕಾರರಾಗಲಿ ಈ ಬಗ್ಗೆ ಎಲ್ಲಿಯೂ ದಾಖಲಿಸಿಲ್ಲ. ಹಾಗಾದರೆ ಈ ಬಗ್ಗೆ ಏನೇನೂ ಮಾಹಿತಿ ಇಲ್ಲವಾ? ಎಂದರೆ ಇಲ್ಲ ಎಂದು ಹೇಳಲಾಗದು. ಕಾಳಿದಾಸನ ಸಾಹಿತ್ಯ ಕೃತಿಗಳಲ್ಲಿ ದೊರೆಯುವ ಮಾಹಿತಿಗಳ ಆಧಾರದ ಮೇಲೆ ಇಂಥ ವಿಷಯಗಳನ್ನು ಹೆಕ್ಕಿ ತೆಗೆಯಬಹುದಾಗಿದೆ. ಈ ರೀತಿಯ ಸಾಹಸದ ಪ್ರಯತ್ನವನ್ನು ಹಲವಾರು ಸಂಶೋಧಕರು, ವಿಮರ್ಶಕರು ಮಾಡಿದ್ದಾರೆ. ಅಂಥವರ ವಿಚಾರಗಳ ಆಧಾರದ ಮೇಲೆ ಕಾಳಿದಾಸನ ಕಾಲ-ಜೀವನ ಮತ್ತು ವ್ಯಕ್ತಿತ್ವನ್ನು ತಿಳಿಯಬಹುದಾಗಿದೆ. 
ಕಾಲ
     ಭಾರತೀಯ ಸಾಹಿತ್ಯ ಕ್ಷೇತ್ರದ ಉಜ್ವಲ ನಕ್ಷತ್ರ ಕಾಳಿದಾಸನ ಕಾಲದ ಬಗ್ಗೆ ಒಂದೇ ರೀತಿಯ ಅಭಿಪ್ರಾಯಗಳಿಲ್ಲ. ಇದನ್ನು ಕುರಿತಂತೆ ವಿದ್ವಾಂಸರು ಎಲ್ಲರೂ ಒಂದೊಂದು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಈತನ ಕಾಲ ಕ್ರಿ.ಪೂ. 1ನೇ ಶತಮಾನದಿಂದ ಕ್ರಿ.ಶ. 6ನೇ ಶತಮಾನದವರೆಗೆ ಓಡಾಡುತ್ತಿದೆ. ಕಾಳಿದಾಸನ ಬಗೆಗಿರುವ ಒಂದು ದಂತಕಥೆಯ ಪ್ರಕಾರ ಈತ ವಿಕ್ರಮಾದಿತ್ಯ ರಾಜನ ಆಸ್ಥಾನದಲ್ಲಿದ್ದ ನವರತ್ನ (ಒಂಭತ್ತು ಜನ ಕವಿಗಳು)ಗಳಲ್ಲಿ ಒಬ್ಬ ಆದರೆ ಈ ನವರತ್ನಗಳೆಂದು ಹೆಸರಿಸಲಾಗಿರುವ ಕವಿಗಳಲ್ಲಿ ಕೆಲವರು ಇತ್ತೀಚಿನವರು ಹಾಗಾಗಿ ಈ ಐತಿಹ್ಯದ ಅಭಿಪ್ರಾಯವನ್ನು ಒಪ್ಪಲಾಗುವುದಿಲ್ಲ. ಇನ್ನೂ 16ನೇ ಶತಮಾನದ ಬಲ್ಲಾಳ ಕವಿಯು ತನ್ನ ಭೋಜ ಪ್ರಬಂಧ ಎಂಬ ಗ್ರಂಥದಲ್ಲಿ ಕಾಳಿದಾಸ, ಭಾರವಿ, ಭವಭೂತಿ ಮತ್ತು ದಂಡಿ ಇವರೆಲ್ಲರೂ ಸಮಕಾಲೀನನೆಂದು ಹೇಳಲಾಗಿದೆ. ಆದರೆ ಕಾಳಿದಾಸನ ಪಾಂಡಿತ್ಯ, ಶೈಲಿಯನ್ನು ನೋಡಿದರೆ ಭಾಸನಿಗಿಂತ 2 ಅಥವಾ 3 ಶತಮಾನಗಳ ನಂತರದವನು ಎನಿಸುತ್ತದೆ. ಕೆಲವು ವಿದ್ವಾಂಸರು ಕಾಳಿದಾಸನ 'ಮಾಲವಿಕಾಗ್ನಿಮಿತ್ರ' ನಾಟಕದಲ್ಲಿ ಬಂದಿರುವ ಕ್ರಿ.ಪೂ. 2ನೇ ಶತಮಾನದ ಕೊನೆಯ ಬಾಳಿದ ಅಗ್ನಿಮಿತ್ರನ ಸಮಕಾಲೀನನೆಂದು ವಾದಿಸಿದ್ದಾರೆ. ಈ ವಾದಕ್ಕೂ ಕೂಡ ಸರಿಯಾದ ಗಟ್ಟಿ ತಳಹದಿ ಇಲ್ಲ. ಏಕೆಂದರೆ ಕಾಳಿದಾಸನು ಪ್ರಚುರಕ್ಕೆ ಬಂದಿದ್ದು 3 ಮತ್ತು 4 ನೇ ಶತಮಾನಗಳಲ್ಲಿ ಹಾಗಾದರೆ ಕ್ರಿ.ಪೂ. 2ನೇ ಶತಮಾನದಿಂದ 3-4ನೇ ಶತಮಾನದವರೆಗೆ ಎಲ್ಲಿಯೂ ಉಲ್ಲೇಖಗೊಂಡಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಕಾಳಿದಾಸನ ಕಾಲದ ಬಗ್ಗೆ ವಿಚಾರ ಮಾಡಿದ ಅನೇಕ ವಿದ್ವಾಂಸರು ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿದುದನ್ನು ಪ್ರಸ್ತಾಪಿಸುತ್ತಾರೆ. ಆದರೆ ಭಾರತದ ಚರಿತ್ರೆಯಲ್ಲಿ ಈ ಹೆಸರುಗಳ ಅರಸರು ಬಹಳಷ್ಟು ಜನ ಆಗಿ ಹೋಗಿದ್ದು ಅವರಲ್ಲಿ ಯಾರು ಕಾಳಿದಾಸನ ಆಶ್ರಯದಾತ ಎಂಬುದರ ಬಗ್ಗೆಯೂ ಸಾಕಷ್ಟು ಜಿಜ್ಞಾಸೆಗಳು ಇವೆ. ಇಂಥ ವಾದ-ವಿವಾದಗಳನ್ನು ಗಮನಿಸಿ ನಾವು ಬರಬಹುದಾದ ತೀರ್ನಮಾನ ಇಂತಿರಬಹುದು. ಕಾಳಿದಾಸನ ಕಾಲ ಸುಮಾರು 4ನೇ ಶತಮಾನ. ಇವನ ಕಾಲ ಕ್ರಿ.ಪೂ. ಮೊದಲ ಶತಮಾನವೆಂದು ಕೆಲವರು ಕ್ರಿ.ಶ. 2ನೇ ಶತಮಾನವೆಂದು ಇನ್ನೂ ಕೆಲವರು, ನಾಲ್ಕು ಮತ್ತು ಐದನೇ ಶತಮಾನವೆಂದು ಇನ್ನೂ ಕೆಲವರು ಹೇಳುತ್ತಾರಾದರೂ ಕಾಳಿದಾಸನ ಕಾಲ ನಿಖರವಾಗಿ ಕ್ರಿ.ಶ. 357-413 ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ. ಗುಪ್ತರ ಅರಸ ಚಂದ್ರಗುಪ್ತ ವಿಕ್ರಮಾದಿತ್ಯನ ಆಳ್ವಿಕೆಯ ಕಾಲ ಇದಾಗಿದ್ದು, ಇವನ ಆಸ್ಥಾನದಲ್ಲಿ ಕಾಳಿದಾಸ ಆಸ್ಥಾನ ಕವಿಯಾಗಿದ್ದನು ಎನ್ನಬಹುದು. ಚಂದ್ರಗುಪ್ತನು ಉಜ್ಜಯಿನಿಯನ್ನು ಕೇಂದ್ರವಾಗಿಸಿಕೊಂಡು ಆಳುತ್ತಿದುದು ಹಾಗೂ ಕಾಳಿದಾಸನು ತನ್ನ ಕಾವ್ಯಗಳಲ್ಲಿ ಈ ನಗರದ ಬಗ್ಗೆ ವಿಶೇಷವಾಗಿ ವರ್ಣಿಸಿರುವುದು ತಾಳೆಯಾಗುತ್ತಿದೆ.
ಜೀವನ
        ಕಾಳಿದಾಸನ ಕಾಲದಂತೆ ಜೀವನದ ವಿವರಗಳು ಬೇರೆಲ್ಲಿಯೂ ಒಂದು ಚಿಕ್ಕ ಸಾಲಿನಲ್ಲಿಯೂ ಅಭಿವ್ಯಕ್ತಿಗೊಂಡಿಲ್ಲ. ಕಾಳಿದಾಸನ ಜೀವನ ಕುರಿತಂತೆ ಹುಟ್ಟಿದ ಸ್ಥಳಯಾವುದು? ತಂದೆ-ತಾಯಿಯರು ಯಾರು? ವಿವಾಹವಾಗಿತ್ತೆ? ಆಗಿದ್ದರೆ ಹೆಂಡತಿ-ಮಕ್ಕಳು ಯಾರು? ಈತ ಕೊನೆಗೆ ಏನಾದ? ಇಂಥ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ. ಇವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರವೆಂಬಂತಿರುವ ಐತಿಹ್ಯವೊಂದು ಹೀಗಿದೆ: " ಕಾಳಿದಾಸ ಒಬ್ಬ ಕುರುಬ ಹುಡುಗನಾಗಿದ್ದನಂತೆ ಅವನಿಗೆ ಶಿಕ್ಷಣದ ಗಂಧವೇ ಇರಲಿಲ್ಲ. ಆ ದೇಶದ ರಾಜ ಕುಮಾರಿಯು ಯಾವ ರಾಜಕುಮಾರನನ್ನೂ ಮದುವೆಗಾಗಿ ಮೆಚ್ಚದ್ದರಿಂದ ಮಂತ್ರಿಯು ಆಕೆಯನ್ನು ಒಂದು ತರದಿಂದ ಶಿಕ್ಷಿಸಬೇಕೆಂದು ಯಾವುದೋ ಕುಯುಕ್ತಿಯಿಂದ ಈ ಕುರುಬ ಯುವಕನೊಡನೆ ಆಕೆಯ ಮದುವೆಯನ್ನು ಗೊತ್ತು ಮಾಡಿದನು. ಆಕೆ ಮದುವೆಯ ತರುವಾಯ ವಸ್ತು ಸ್ಥಿತಿಯನ್ನು ಅರಿತುಕೊಂಡು ಮಂತ್ರಿಯ ವಿರುದ್ಧ ತನ್ನ ಹಟವನ್ನು ತೀರಿಸಿಕೊಳ್ಳಲು ಕಾಲಿ (ದೇವಿ)ಯನ್ನು ಪ್ರಾರ್ಥಿಸಿಕೊಂಡಳು. ಕಾಳಿಯ ವರಪ್ರಸಾದದಿಂದ ಸಾಕ್ಷಾತ್ ಸರಸ್ವತಿಯೇ ಇವನ ನಾಲಗೆಯ ಮೇಲೆ  ನರ್ತಿಸತೊಡಗಿದಳೆಂದು  ಅಂದಿನಿಂದ ಅವನಿಗೆ ಕಾಳಿದಾಸ ಎಂಬ ಹೆಸರು ಬಂದಿತು. ಇದಿಷ್ಟು ವಿಚಾರಗಳ ಜೊತೆಗೆ ಇನ್ನೂ ಕೆಲವು ವಿಚಾರಗಳು ಕಾಳಿದಾಸನ ಜೀವನದ ಮೇಲೆ ಬೆಳಕು ಚಲ್ಲುತ್ತವೆ. ಮುಖ್ಯವಾಗಿ ಕಾಳಿದಾಸನು ಪ್ರಾರಂಭದಲ್ಲಿ ಸೂಚಿಸಿದ ದಂತ ಕಥೆಗೆ ವಿರುದ್ಧವಾಗಿ ಬಾಲ್ಯದಿಂದಲೇ ಹೆಚ್ಚಾಗಿ ಶಿಕ್ಷಣವನ್ನು ಪಡೆದುಕೊಂಡವನಾಗಿದ್ದನು ಎಂಬುದು ಅವನ ಕೃತಿಗಳಲ್ಲಿಯ ಬೇರೆ ವಿವರಗಳಿಂದಲೂ ಸ್ಪಷ್ಟವಾಗಿ ಕಂಡ ಬುರುವುದು. ವೇದ, ಬ್ರಾಹ್ಮಣಗಳು, ಉಪನಿಷತ್ತು, ಭಗವದ್ಗೀತಾ, ರಾಮಾಯಣ - ಮಹಾಭಾರತ, ವ್ಯಾಕರಣ - ಅಲಂಕಾರ - ಛಂದಃಶಾಸ್ತ್ರಗಳು ಮುಂತಾಗಿ ವೈದಿಕ ಸಂಪ್ರದಾಯದ ಪೂರ್ತಿ ಶಿಕ್ಷಣವನ್ನು ಕಾಳಿದಾಸನು ಪಡೆದುಕೊಂಡಿದ್ದನು. ಕೃತಿಗಳಿಂದ ತಿಳಿದು ಬರುವ ಇಂಥ ವಿಚಾರಗಳನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಮಾಹಿತಿ ಇಲ್ಲ. ವಿಶ್ವ ಸಾಹಿತ್ಯದಲ್ಲೇ ಮೇರು ಕವಿಯೆನಿಸಿದ ಒಬ್ಬ ಕವಿಯ ವೈಯುಕ್ತಿಕ ಜೀವನದ ವಿವರಗಳು ಇಷ್ಟರ ಮಟ್ಟಿಗೆ ಗೈರು ಹಾಜರಾಗಿರುವುದು ಅನೇಕ ಅನುಮಾನಗಳನ್ನು ಹುಟ್ಟಹಾಕುತ್ತದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಿದರೆ ಹೀಗಾದುದರ ಹಿಂದಿನ ಗುಟ್ಟಾದರೂ ತಿಳಿದೀತು. 
ವ್ಯಕ್ತಿತ್ವ
        ಕಾಳಿದಾಸನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಆತನ ಸಾಹಿತ್ಯ ಸೃಷ್ಠಿಯ ಒಳಗೇ ಆಯ್ದುಕೊಳ್ಳಬೇಕಿದೆ. ಈ ದಿಕ್ಕಿನ ಪ್ರಯತ್ನಗಳನ್ನು ಕೆಲವಾರು ವಿದ್ವಾಂಸರು ಮಾಡಿದ್ದು ಅದರಿಂದ ಹೊರಬಿದ್ದ ಫಲಿತಗಳನ್ನು ಮುಂದಿನಂತೆ ನೋಡಬಹುದು. ಕಾಳಿದಾಸನ ಕುರಿತು ಸಮಗ್ರ ಗ್ರಂಥವೊಂದನ್ನು ಬರೆದ ಶ್ರೀರಂಗ (ಆದ್ಯ ರಂಗಾಚಾರ್ಯ) ಕಾಳಿದಾಸನ ವ್ಯಕ್ತಿತ್ವದ ಬಗ್ಗೆ ಹೀಗೆ ಬರೆಯುತ್ತಾರೆ: ಒಂದೆಡೆ ನಿರುಪದ್ರವಿ ಕಿಡಿಗೇಡಿತನದ ಕುತೂಹಲ, ಇನ್ನೊಂದೆಡೆ ಉದಾತ್ತ ಆದರ್ಶ; ಒಂದೆಡೆ ವೇದಾಂಗ-ವೇದ-ಶಾಸ್ತ್ರ-ಪುರಾಣಗಳ ಪಾಂಡಿತ್ಯ, ಇನ್ನೊಂದೆಡೆ ವಿಶಾಲ ವಿಫುಲ ವಿವಿಧ ಲೋಕಾನುಭವ; ಒಂದೆಡೆ ಸೊಗಸುಗಾರ, ಇನ್ನೊಂದೆಡೆ ಸಹೃದಯ; ಸ್ವಂತಕ್ಕೆ 'ಮಂದಃ ಕವಿಯಶಃ ಪ್ರಾರ್ಥಿ', ಲೋಕಕ್ಕೆ ಕವಿ-ಕುಲಗುರು ಶ್ರೀರಂಗರ ಈ ಮಾತನ್ನು ಗಮನಿಸಿದರೆ ಕಾಳಿದಾಸನ ವ್ಯಕ್ತಿತ್ವ ವಿವಿಧ ಮಜಲುಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಅಂಥ ಮಜಲುಗಳನ್ನು ಗುರುತಿಸುವುದಾದರೆ: ಕಾಳಿದಾಸ ಸಂಪ್ರದಾಯ ನಿಷ್ಠ; ವರ್ಣಾಶ್ರಮ ಧರ್ಮದ ಅಭಿಮಾನಿ; ಕ್ರಾಂತಿಕಾರಿ, ವಿನಯಿ, ವಿನೋದ ಪ್ರಿಯ, ಈ ಮುಖಗಳನ್ನು ಕೆಲವೊಂದು ಉದಾಹರಣೆಗಳ ಮೂಲಕ ಸ್ಪಷ್ಟಗೊಳಿಸಿಕೊಳ್ಳಬಹುದು. 
1. ಸಂಪ್ರದಾಯ ನಿಷ್ಠ 
ಕಾಳಿದಾಸನ ಕಾವ್ಯ-ನಾಟಕಗಳಲ್ಲಿ ಬರುವ ಪಾತ್ರ ಚಿತ್ರಣಗಳನ್ನು ಕಂಡರೆ ಆತನ ಸಂಪ್ರದಾಯ ನಿಷ್ಠತೆ ಅರಿವಾಗುತ್ತದೆ. ಅದರಲ್ಲೂ ವೈದಿಕ ಸಂಪ್ರದಾಯದ ಕಡೆಗೆ ಈತನ ಒಲವು ಜಾಸ್ತಿ. ಕಾಳಿದಾಸನ ರಾಜರು ಹಾಗೂ ಸ್ತ್ರೀಪಾತ್ರಗಳನ್ನು ನೋಡಿದರೆ ಅವರೆಲ್ಲ ಹಿಂದೂ ಧರ್ಮ ಸಂಪ್ರದಾಯದ ಮೂತರ್ಿಗಳಂತೆ ಕಾಣುತ್ತಾರೆ. ಇಲ್ಲಿಯ ರಾಜರು ಧರ್ಮವನ್ನು ಚಾಚೂತಪ್ಪದೆ ಪಾಲಿಸುವವರು. ಸ್ತ್ರೀಯರಂತೂ ಆದರ್ಶಪತ್ನೀ ಧರ್ಮರತರು. ಇನ್ನೂ ಶಾಕುಂತಲೆಯ ನಾಟಕದಲ್ಲಿ ಬರುವ ಸಂದರ್ಭವೊಂದನ್ನು ಇಲ್ಲಿ ಪ್ರಸ್ತುತ ವಿಚಾರಕ್ಕೆ ಪೂರಕವಾಗಿ ಉಲ್ಲೇಖಿಸಬಹುದು. ಅಭಿಜ್ಞಾನ ಶಾಕುಂತಲದ ಮೂರನೇ ಅಂಕದ ಕೊನೆಗೆ ತನ್ನನ್ನು ತಡೆದ ದುಷ್ಯಂತನಿಗೆ ಶಕುಂತಲೆಯು ಬಿಡು ನನ್ನನ್ನು ಎನ್ನುತ್ತಾಳೆ. ಬಿಡುವೆ ನ್ನುವನು ದುಷ್ಯಂತ 'ಯಾವಾಗ?' ಎಂದು ಶಕುಂತಲೆಯು ಕೇಳಲು 'ನಿನ್ನ ಆಧರದ ಸವಿಯನ್ನು ಕಂಡ ಮೇಲೆ ಎನ್ನುತ್ತಾ ದುಷ್ಯಂತನು ಅವಳ ಮುಖವನ್ನೆತ್ತಲು ಹೋಗುವುದು; ಅಷ್ಟರಲ್ಲಿ ಒಳಗಿನಿಂದ ಆರ್ಯಗೌತಮಿಯ ದನಿ ಕೇಳಿ ಬರುವುದು. ಇದಕ್ಕೆ ಮುಖ್ಯ ಕಾರಣವೆಂದರೆ ರಂಗಸ್ಥಲದಲ್ಲಿ ಚುಂಬನವು ನಿಷಿದ್ಧ' ಹಾಗಾಗಿ ಕಾಳಿದಾಸನ ಕಾಲಕ್ಕೆ ತಕ್ಕಂತೆ ಮಾತ್ರವಲ್ಲದೆ ವೈದಿಕ ಸಂಪ್ರದಾಯಕ್ಕೆ ತಕ್ಕಂತೆ ಇದ್ದನು ಎಂದೂ ಅವನ ಕೃತಿ ವಿಮರ್ಶೆಯಿಂದ ಹೇಳಬಹುದಾಗಿದೆ. ಋತು ಸಂಹಾರ ಮತ್ತು ಮೇಘದೂತಗಳಲ್ಲಿ ಅವನು ಸಂಪ್ರದಾಯಗಳಿಗೆ ಬದ್ಧನಾಗಿದ್ದಾನೆ. ಹಾಗೆಯೇ ಅವನು ತನ್ನ ಜೀವನ ಮತ್ತು ವಿಚಾರಗಳಲ್ಲಿ ಕೂಡ ಪೂರ್ತಿಯಾಗಿ ಸಂಪ್ರದಾಯಕ್ಕೆ ಬದ್ಧನಾಗಿದ್ದಾನೆ ಎನ್ನಬಹುದು.
2. ವರ್ಣಾಶ್ರಮ ಧರ್ಮದ ಅಭಿಮಾನಿ
 ಭಾರತೀಯ ಸಮಾಜದ ವ್ಯವಸ್ಥೆಯಲ್ಲಿ ಹುಣ್ಣಿನಂತೆ ಕಾನುವ ವಣರ್ಾಶ್ರಮಧರ್ಮದ ಪದ್ಧತಿ ಒಂದು ಹಂತದವರೆಗೆ ಮುಕ್ತ ಹಾಗೂ ಸ್ವತಂತ್ರ ವ್ಯವಸ್ಥೆಯಾಗಿತ್ತು. ಆನಂತರದ ದಿನಗಳಲ್ಲಿ ನಿರ್ಬಂಧಿತ, ಏಣಿಶ್ರೇಣಿ ವ್ಯವಸ್ಥೆಯಾಗಿ ಮಾಪರ್ಾಡಾಯಿತು. ಇದರಿಂದ ಈ ಪದ್ಧತಿಗೆ ಇದ್ದ ಶ್ರಮ ವಿಭಜನೆಯ ಮೂಲತತ್ವಕ್ಕೆ ಧಕ್ಕೆಯಾಯಿತು. ಹಾಗೆಯೇ ಆರಂಭಕ್ಕೆ ಎಲ್ಲರ ಉದ್ಧಾರವನ್ನು ಬಯಸುತ್ತಿದ್ದ ವಣರ್ಾಶ್ರಮ ಧರ್ಮ ಕೆಲವೇ ಕೆಲವರ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಸೀಮಿತವಾಯಿತು. ಹಾಗಾದರೆ ಇಲ್ಲಿ ಕಾಳಿದಾಸ ಅಭಿಮಾನಿಯಾಗಿರುವುದು ಯಾವ ಹಂತದ ವಣರ್ಾಶ್ರಮ ಧರ್ಮಕ್ಕೆ? ಎಂದು ಪ್ರಶ್ನಿಸಿಕೊಂಡರೆ ಇದಕ್ಕೆ ಉತ್ತರ ಖಂಡಿತವಾಗಿ ಆರಂಭದ ಹಂತದ ವ್ಯವಸ್ಥೆಗೆ ಎಂದೆನ್ನಬಹುದು. ಇದಕ್ಕೆ ಪೂರಕವಾಗಿ ಕಾಳಿದಾಸ ತನ್ನ ಕೃತಿಗಳಲ್ಲಿ ಪ್ರತಿಪಾದಿಸಿರುವ ಪ್ರಮುಖ ತತ್ವವೆಂದರೆ ತನಗೆ ಯೋಗ್ಯವಾದ ಕರ್ಮವನ್ನು ಪ್ರತಿಯೊಬ್ಬನು ಮಾಡುವಾಗ ಯಾವನೂ ಶ್ರೇಷ್ಠನಲ್ಲ. ಯಾವನೂ ಕನಿಷ್ಟನಲ್ಲ; ಇಷ್ಟೇ ಅಲ್ಲ, ಯಾವ ಕರ್ಮವೂ ಹೆಚ್ಚಿನದಲ್ಲ ಯಾವುದೂ ಕೀಳು ಅಲ್ಲ. ಈ ತತ್ವ ಪ್ರತಿಪಾದನೆ ಅಭಿಜ್ಞಾನ ಶಾಕುಂತಲ ನಾಟಕ ಆರನೇ ಅಂಕದ ಪ್ರಾರಂಭಿಕ ದೃಶ್ಯವನ್ನು ಗಮನಿಸಬೇಕು. ದೃಶ್ಯದ ಆರಂಭಕ್ಕೆ ನಗರ ರಕ್ಷಕರು ಮೀನುಗಾರನೊಬ್ಬನನ್ನು ಬಂಧಿಸಿದ್ದಾರೆ (ಅವನು ಹಿಡಿದ ಮೀನಿನ ಹೊಟ್ಟೆಯಲ್ಲಿ ಕಳೆದ ಉಂಗುರ ಸಿಕ್ಕಿತ್ತು) ಈ ಉಂಗುರ ನಿನಗೆ ಹೇಗೆ ದೊರಕಿತು ನೀನು ಸದ್ಬ್ರಾಹ್ಮಣ ಎಂದು ರಾಜನು ಇದನ್ನು ನಿನಗೆ ಕೊಟ್ಟನೆ? ಎಂಬುದಾಗಿ ರಕ್ಷಕರಲ್ಲಿ ಒಬ್ಬ ಕೇಳುತ್ತಾನೆ. ಆಗ 'ನಾನು ಮೀನುಗಾರ ಜಾತಿಯವ' ಎನ್ನುತ್ತಾನೆ ಮೀನುಗಾರ. ಆಗ ಇನ್ನೊಬ್ಬ ನಗರ ರಕ್ಷಕ ತಿರಸ್ಕಾರದಿಂದ ಅಹಹ! ಎಂದು ಪರಿಶುದ್ಧವಾದ ವ್ಯವಸಾಯ' ಎನ್ನುತ್ತಾನೆ. ಇದಕ್ಕೆ ಮೀನುಗಾರ ಹೀಗೆ ಉತ್ತರಿಸುತ್ತಾನೆ. 'ಹೇಸಿ ಕೆಲಸ ಎಂಬ ಕಾರಣಕ್ಕಾಗಿ ಯಾವನೂ ತನಗೆ ಸಹಜವಾದ ಕೆಲಸವನ್ನು ಬಿಟ್ಟುಕೊಡಬಾರದು ಪಶುವದೆಯು ಹೇಸಿ ಕೆಲಸವೆ ಅಲ್ಲವೆ? ಆದರೂ ಯಜ್ಞಕ್ಕಾಗಿ ಅದನ್ನು ಕೊಲ್ಲುವ ಬ್ರಾಹ್ಮಣನು ಕರುಣೆಯ ಹೃದಯವುಳ್ಳವನಾಗಿದ್ದಾನೆ ಹೀಗಾಗಿಯೇ ಕರ್ಮದ ಬಾಹ್ಯ ಸ್ವರೂಪಕ್ಕಾಗಿ ಯಾರನ್ನು ಹೊಗಳಬೇಕಿಲ್ಲ, ತೆಗಳಬೇಕಿಲ್ಲ ಎಂಬುದು ಕಾಳಿದಾಸನ ಸ್ಪಷ್ಟ ಅಭಿಪ್ರಾಯ. 
3. ವಿನಯವಂತ
ಇಡೀ ಪ್ರಪಂಚದ ಸಾಹಿತ್ಯ ಲೋಕದ ದೃವತಾರೆಯಾಗಿರುವ ಕಾಳಿದಾಸ ಎಲ್ಲಾ ವಿಷಯದಲ್ಲಿ ಸಮರ್ಥ. ಪಾಂಡಿತ್ಯದಲ್ಲಂತೂ ಅಪ್ರತಿಮ. ಆದರೆ ಈತನ ಬರವಣಿಗೆಗಳಲ್ಲಿ ಪಾಂಡಿತ್ ಅಹಂಕಾರವಾಗಿ ಕಾಣದೆ ವಿನಯ ಮತ್ತು ಆತ್ಮ ವಿಶ್ವಾಸವಾಗಿ ಕಾಣುತ್ತದೆ. ಉದಾಹರಣೆಗೆ: 'ರಘುವಂಶ'ದ ಪ್ರಾಸ್ತಾವಿಕ ಶ್ಲೋಕಗಳಿಂದ ವ್ಯಕ್ತವಾಗುವ ಅರ್ಥದ ಸಾಲುಗಳನ್ನು ಗಮನಿಸಿ ಸೂರ್ಯನಿಂದ ಹುಟ್ಟಿದ ವಂಶವೆಲ್ಲಿ? ಅಲ್ಪಜ್ಞನಾದ ನನ್ನ ಬುದ್ಧಿ ಎಲ್ಲಿ? ವಿಶಾಲವಾದ ಸಾಗರವನ್ನು ದೋಣಿಯಲ್ಲಿ ಕುಳಿತು ದಾಟಬಯಸುವ ಹೆಡ್ಡ ನಾನು! ಕವಿ ಯಶಸ್ಸಿನ ನನ್ನ ಈ ಹುಚ್ಚು ಆಸೆಗಾಗಿ ನಾನು ಜನರಿಗೆ ಅಪಹಾಸ್ಯನಾಗುವೆ. ಗಿಡದ ಎತ್ತರದಲ್ಲಿದ್ದ ಹಣ್ಣನ್ನು ಬಯಸಿ ಜೊಲ್ಲು ಸುರಿಸುತ್ತ ನೆಗೆ ನೆಗೆ ಅದನ್ನು ಕಿತ್ತುಕೊಳ್ಳಬಯಸಿದ ಕುಳ್ಳನನ್ನು ಕಂಡರೆ ಯಾರು ನಗರು? ಕವಿತ್ವಶಕ್ತಿ, ವಿದ್ಯೆ ಇವು ಎಷ್ಟು ಅಪಾರವಾಗಿವೆ ಎಂಬುದನ್ನು ಅನುಭವದಿಂದ ಕಂಡುಕೊಂಡ ಮೇದಾವಿಯ ವಿನಯವಿದೆ. 
4. ವಿನೋದಪ್ರಿಯ
ಕಾಳಿದಾಸ ತನ್ನ ನಾಟಕಗಳಲ್ಲಿ ವಿದೂಷನ ಪಾತ್ರದ ಮೂಲಕ ವಿನೋದ ಪ್ರಿಯತೆಯನ್ನು ಎಂದು ನಾವ್ಯಾರ್ಯಾದರೂ ಸಾಮಾನ್ಯವಾಗಿ ಊಹಿಸುವುದಾದರೆ ಅದು ತಪ್ಪಾಗುತ್ತದೆ. ಹಾಗೆ ನೋಡಿದರೆ ಎಲ್ಲಾ ನಾಟಕಕಾರರೂ ಸಾಮಾನ್ಯವಾಗಿ ಚಿತ್ರಿಸುವಂತೆ ವಿದೂಷಕ ಇಲ್ಲಿ ಹಾಸ್ಯ ಪಾತ್ರವಲ್ಲ ಗಂಭೀರ ಚಿಂತನೆ ಮಾಡಬಲ್ಲ. ವ್ಯಕ್ತಿ ಜೊತೆಗೆ ಸ್ವಲ್ಪ ಹಾಸ್ಯವೂ ಇದೆ. ಉದಾ: ಮಾಲವಿಕಾಗ್ನಿಮಿತ್ರದ ನಾಲ್ಕನೇ ಅಂಕದಲ್ಲಿ ಅರಮನೆಯ ಅಂತಃಪುರಕ್ಕೆ ಕಪಿ ದಾಳಿಯಿಡುತ್ತದೆ. ದಾಳಿಯಲ್ಲಿ ರಾಜ ಹಾಗೂ ವಿದೂಷಕ ಇಬ್ಬರೂ ಪಾರಾಗುತ್ತಾರೆ ಆಗ ವಿದೂಷಕ 'ಭಲೆ! ಕಪಯೇ! ನಿನ್ನ ಬಾಂಧವನನ್ನು ಒಳ್ಳೆ ಸಂಕಟದಿಂದ ಉಳಿಸಿದೆ. ಹಾಗೆಯೇ ಅಭಿಜ್ಞಾನ ಶಾಕುಂತಲದ ಮೊದಲ ಅಂಕದಲ್ಲಿ ಭ್ರಮರವು ಶಕುಂತಲೆಯ ಕಪೋಲವನ್ನು ಮುಟ್ಟಿದಾಗ 'ಎಲ! ಕಳ್ಳ! ನೀನೇ ಧನ್ಯ ಇಲ್ಲಿ ನೋಡು, ಇದು ಸರಿಯಾದೀತೆ ಇಲ್ಲವೆ ಎಂದು ತತ್ವಶೋಧನೆಯಲ್ಲಿ ಬರೀ ನಮ್ಮ ತುಟಿಯನ್ನು ಸದರಿಕೊಳ್ಳುತ್ತಿದ್ದೇವೆ ಎಂಬ ದುಷ್ಯಂತನ ಮಾತು ಓದುಗರನ್ನು / ನೋಡುಗರನ್ನು ನಗಸದೇ ಇರದು. ಹಾಗಾಗಿ ಇಂಥ ಪ್ರಸಂಗಗಳ ಮೂಲಕ ಕಾಳಿದಾಸನನ್ನು ಉತ್ತಮ ಹಾಸ್ಯ ಪ್ರಜ್ಞೆ ಇರುವ ಕವಿಯೆಂದು ನಿಸಂಶಯವಾಗಿ ಹೇಳಬಹುದು. 
ಕ್ರಾಂತಿಕಾರಿ
 ಕಾಳಿದಾಸ ತನ್ನ ಸಾಹಿತ್ಯದಲ್ಲಿ ಅನಾವರಣಗೊಂಡಿರುವ ಬಗೆಗಳಲ್ಲಿ ಒಂದು ಬಗೆ ಕ್ರಾಂತಿಕಾರಿ ಸ್ವರೂಪದ್ದು. ಈ ಕ್ರಾಂತಿಕಾರಿ ತನ ಸಮಯ ಸಂದರ್ಭಕ್ಕನುಗುಣವಾಗಿ ಸೌಮ್ಯವೂ, ಕಾರ್ಯವು ಆಗಿ ರೂಪು ಪಡೆದಿರುವುದನ್ನು ಗಮನಿಸಬಹುದು. ಉದಾ: ವಿಕ್ರಮೋರ್ವಶಿಯ ನಾಟಕದಲ್ಲಿ ರಾಜನು ಊರ್ವಶಿಯನ್ನು (ಮಗನನ್ನು ಪಡೆದುಕೊಂಡ ನಂತರ) ಕಳೆದುಕೊಂಡನು ಈ ಪ್ರಸಂಗದಲ್ಲಿ ವಿಕ್ರಮನ ಕಾಮುಖತನದ ಬಗ್ಗೆ ತೀವ್ರವಾದ ವಿರೋಧ ಹೊಂದಿರುವ ಕವಿ ಕಾಳಿದಾಸ ಆ ವಿರೋಧವನ್ನು ನಾರದರ ಪಾತ್ರವನ್ನೂ ಸೃಷ್ಟಿಸಿ ಆ ಪಾತ್ರದ ಮೂಲಕ ಹೇಳಿಸುತ್ತಾನೆ. ಹಾಗೆಯೇ ಎರಡನೇ ಚಂದ್ರಗುಪ್ತ ತನ್ನ ಸೋದರನನ್ನು ಕೊಂದುದು, ಅವನ ಹೆಂಡತಿಯನ್ನು ಅಪಹರಿಸಿದ್ದನ್ನು 'ಇದು ಕ್ಷತ್ರಿಯನ, ರಾಜನ ಧರ್ಮವಲ್ಲ' ಎಂದು ನೇರವಾಗಿ ಸ್ಪಷ್ಟವಾಗಿ ಸಾರಿದ್ದಾನೆ. ಇಂಥ ಅನೇಕ ಪ್ರಸಂಗಗಳನ್ನು ಕಂಡಾಗ ಕಾಳಿದಾಸನ ಕ್ರಾಂತಿಕಾರಿತನ ಎದ್ದು ಕಾಣುತ್ತದೆ. 
ಕೃತಿಗಳು
ಕಾಳಿದಾಸನು ರಚಿಸಿರುವ ಕೃತಿಗಳ ಸಂಖ್ಯೆ: 07. ಇವುಗಳಲ್ಲಿ ಋತು ಸಂಹಾರ ಮತ್ತು ಮೇಘ ಸಂದೇಶ ಎಂಬ ಎರಡು ಖಂಡಕಾವ್ಯಗಳು; ಕುಮಾರ ಸಂಭವ ಮತ್ತು ರಘುವಂಶ ಎನ್ನುವ ಎರಡು ಮಹಾಕಾವ್ಯಗಳು; ಮಾಲವಿಕಾಗ್ನಿಮಿತ್ರ, ವಿಕ್ರಮೋವಶರ್ಿಯಾ ಹಾಗೂ ಅಭಿಜ್ಞಾನ ಶಾಕುಂತಲ ಎಂಬ ಮೂರು ನಾಟಕಗಳು. ಸಾಹಿತ್ಯ ಕ್ಷೇತ್ರದಲ್ಲಿ ಕಂಡು ಬರುವ ಒಂದು ಸಾಮಾನ್ಯ ಸಂಗತಿ ಎಂದರೆ ಯಾವುದಾದರೂ ಒಂದೋ ಎರಡೋ ಪ್ರಕಾರಗಳ ಸಾಹಿತ್ಯ ಮಾತ್ರ ಶ್ರೇಷ್ಠವಾಗಿರುತ್ತದೆ. ಆದರೆ ಕಾಳಿದಾಸ ಬರೆದಿರೋ ಎಲ್ಲಾ ಪ್ರಕಾರಗಳಲ್ಲಿ ಸಮರ್ಥವಾಗಿ ಬರೆದಿದ್ದಾರೆ. ಈತನ ಸಾಹಿತ್ಯದ ಬಗ್ಗೆ ಹೇಳಬಹುದಾದ ಮೆಚ್ಚುಗೆಯ ಮಾತುಗಳು ಹೀಗಿವೆ: ಕಾಳಿದಾಸನ ಕೃತಿಗಳು ಸರ್ವತೋ ಪೂರ್ಣವಾಗಿದೆ, ಸರ್ವಾಂತ ಸುಂದರವಾಗಿವೆ. ಇದು ಹೆಚ್ಚು ಇದು ಕಡಿಮೆ ಎನ್ನುವಂತಿಲ್ಲ. ಸಾಹಿತ್ಯಕ್ಕೆ ಬೇಕಾದುದೆಲ್ಲಕ್ಕೂ ಇವನಲ್ಲಿ ಉದಾಹರಣೆಗಳಿವೆ. ಯಾವುದು ಅತಿಯಾಗಿಲ್ಲ. ವಸ್ತು ವಿನ್ಯಾಸ, ಪಾತ್ರ ಸೃಷ್ಠಿ, ತಕ್ಕಷ್ಟು ಮಾತು, ತಕ್ಕ ಶಬ್ದ ಜಾಲ ಎಲ್ಲದರಲ್ಲೂ ಪರಸ್ಪರ ಔಚಿತ್ಯ ತಾನೆ ತಾನಾಗಿದೆ. ಇಂಥ ಅದ್ಭುತ ಪ್ರತಿಭಾಪೂರ್ಣವಾದ್ದರಿಂದಲೇ ಕಾಳಿದಾಸ ಭಾರತದ ಪ್ರಾಚೀನ ಹಾಗೂ ಆಧುನಿಕ ವಿಮರ್ಶಕರಿಂದ ಮಾತ್ರವಲ್ಲದೆ ವಿಶ್ವದ ಪಂಡಿತರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾನೆ. ಇಂಥ ಮಹತ್ವದ ಕಾಳಿದಾಸನ ಕೃತಿಗಳನ್ನು ಈ ಮುಂದಿನಂತೆ ಸ್ಥೂಲವಾಗಿ ಪರಿಚಯಿಸಿಕೊಳ್ಳಬಹುದು.
1. ಋತು ಸಂಹಾರ
ಹೆಸರೇ ಸೂಚಿಸುವಂತೆ ಈ ಕಾವ್ಯ ಋತುಗಳ ವರ್ಣನೆಯ ಖಂಡಕಾವ್ಯ. ಇದರಲ್ಲಿ ಯಾವುದೇ ಕಥೆಯಿಲ್ಲ. ಇದು ಕಾಳಿದಾಸನು ಬರೆದ ಕಾವ್ಯಗಳಲ್ಲಿ ಮೊದಲನೆಯದು. ಪ್ರತೀ ಋತುವಿಗೆ ಒಂದು ಅಧ್ಯಾಯದಂತೆ ಆರು ಋತುಗಳನ್ನು ಆರು ಅಧ್ಯಾಯಗಳಲ್ಲಿ ವಣರ್ಿಸಲಾಗಿದೆ. ಒಟ್ಟು 144 ಶ್ಲೋಕಗಳಿದ್ದು ಇಡೀ ಕಾವ್ಯದ ತುಂಬ ಪ್ರಿಯ-ಪ್ರೇಯಸಿಯರ ದೃಷ್ಟಿಯಿದೆ. ಪ್ರಿಯ-ಪ್ರೇಯಸಿಗೆ ಹೇಳಿದ ರೀತಿಯಲ್ಲಿ ಕಾವ್ಯ ರಚನೆಯಾಗಿರುವುದು ವಿಶೇಷ. ಈಗಾಗಲೇ ಹೇಳಿದಂತೆ ಕಾಳಿದಾಸನ ಮೊದಲ ಕಾವ್ಯವಿದಾದರೂ ಇದರೊಳಗೆ ನಿರೀಕ್ಷಣಾ ಸಾಮಥ್ರ್ಯ, ಯಾವುದೇ ವಸ್ತುವಿನ ಅಂತಸತ್ವವನ್ನು ಗುರುತಿಸಿ ಸ್ವಲ್ಪದರಲ್ಲೇ ಅದನ್ನು ಸೂಚಿಸುವ ನೈಪುಣ್ಯತೆ, ಪ್ರಕೃತಿ-ಪ್ರಾಣಿ ಸ್ವಭಾವದ ನಿಕಟ ಪರಿಚಯ ಇಂಥ ಲಕ್ಷಣಗಳು ಸ್ಪಷ್ಟವಾಗಿವೆ. ವರ್ಣನಾ ಪದ್ಯಗಳಂತೂ ಓದುಗರ ಗಮನ ಸೆಳೆಯುತ್ತವೆ. 
2. ಮೇಘದೂತ
 ಹೆಂಡತಿಯನ್ನು ಕಳೆದುಕೊಂಡು ವಿರಹಿಯಾದ ಯಕ್ಷನೊಬ್ಬನ ಮನಸ್ಥಿತಿಯನ್ನು ಚಿತ್ರಿಸಿರುವ ಮತ್ತೊಂದು ಖಂಡಕಾವ್ಯವಿದೆ. ಇದರಲ್ಲಿ ಪೂರ್ವ-ಮೇಘ ಮತ್ತು ಉತ್ತರ-ಮೇಘವೆಂದೂ ಎರಡು ಭಾಗಗಳಿವೆ. ಈ ಕಾವ್ಯದಲ್ಲಿ 115 ಶ್ಲೋಕಗಳಿವೆ. ತಾನು ಮಾಡಿದ ಒಂದು ತಪ್ಪಿಗಾಗಿ 'ನೀನು ನಿನ್ನ ಹೆಂಡತಿಯಿಂದ ಒಂದು ವರ್ಷದವರೆಗೆ ದೂರದಲ್ಲಿರು' ಎಂದು ಕುಬೇರನ ಶಾಪಕ್ಕೆ ಗುರಿಯಾದ ಯಕ್ಷನೊಬ್ಬನು ವಿಂದ್ಯಾಪರ್ವತದ ರಾಮಗಿರಿಯ ಆಶ್ರಮ ಪ್ರದೇಶದಲ್ಲಿ ವಿರಹ ದುಖಿಃಯಾಗಿ ಕಾಲ ಕಳೆಯುತ್ತಿದ್ದ. ಎಂಟು ತಿಂಗಳು ಕಳೆದು ಮಳೆಗಾಲ ಮೊದಲಾಯಿತು. ಆಗ ಉತ್ತರ ದಿಕ್ಕಿಗೆ ಓಡುತ್ತಿದ್ದ ಮೋಡವೊಂದನ್ನು ಯಕ್ಷನು ಸ್ವಾಗತಿಸಿ ತನ್ನ ಕ್ರಿಯೆಗೆ ಸಂದೇಶ ತಲುಪಿಸಬೇಕೆಂದು ಬೇಡುತ್ತೇನೆ. ತನ್ನ ಊರಾದ ಅಲಕಾವತಿಯ ಪ್ರಯಾಣದ ಹಾದಿ ಹಾಗೂ ಗುರುತುಗಳ ವರ್ಣನೆ ಮತ್ತು ಅಲಕಾವತಿಯ ತನ್ನ ಮನೆಯ ಗುರುತು ಪ್ರಿಯೆ ಇರಬಹುದಾದ ಸ್ಥಿತಿಯ ವರ್ಣನೆ; ತಲುಪಿಸಬೇಕಾದ ಸಂದೇಶಗಳನ್ನು ಮೋಡಕ್ಕೆ ವಿವರಿಸುತ್ತಾನೆ. ಪ್ರಸ್ತುತ ಕಾವ್ಯದ ಬಗ್ಗೆ ವಿದ್ವಾಂಸರ ಪ್ರಶಂಸೆ ಹೀಗಿದೆ: ಈ ಕಾವ್ಯದ ಪ್ರತಿಯೊಂದು ಶ್ಲೋಕವು ರತ್ನಪ್ರಾಯವಾಗಿದೆ. ಇಡೀ ಗೀತಾ ಒಂದು ಭವ್ಯ ರತ್ನಮಾಲಿಕೆಯಂತಿದೆ. ಇಲ್ಲಿ ಬಳಕೆಯಾಗಿರುವ ವಾಗರ್ಥಗಳು ಛಂದಸ್ಸು ಕಾಳಿದಾಸನ ಅದ್ಭುತ ಕಲಾ ಪ್ರೌಢಿಮೆಗೆ ನಿದರ್ಶನವಾಗಿದೆ. ಆದುದರಿಂದಲೇ ಪ್ರಪಂಚದಲ್ಲಿಯೇ ಈ ಲಘು ಕಾವ್ಯ ವಿಸ್ಮಯಕಾರಕ ಪ್ರಣಯಗೀತೆಯೆಂದು ಪ್ರಸಿದ್ಧಿ ಪಡೆದಿದೆ. 
3. ಕುಮಾರ ಸಂಭವ
 ಕಾಳಿದಾಸನಿಗೆ ಸಂಸ್ಕೃತ ಮಹಾಕವಿ ಪರಂಪರೆಯಲ್ಲಿ ಸ್ಥಾನ ಗಳಿಸಿಕೊಟ್ಟ ಮಹಾಕಾವ್ಯ ಇದು. ಈ ಕಾವ್ಯದಲ್ಲಿ 17 ಅಧ್ಯಾಯಗಳಿದ್ದು ಇವುಗಳಲ್ಲಿ 8 ಅಧ್ಯಾಯಗಳನ್ನು ಮಾತ್ರ ಕಾಳಿದಾಸ ಬರೆದಿದ್ದು, ನಂತರದ ಅಧ್ಯಾಯಗಳನ್ನು ಯಾರೋ ಅಜ್ಞಾತ ಕವಿ ಬರೆದು ಸೇರಿಸಿರಬಹುದೆಂದು ಊಹಿಸಲಾಗಿದೆ. ಪ್ರಸ್ತುತ ಕಾವ್ಯದ ಕಥೆ ತಾರಕಾಸುರನ ವಧೆ, ಇದಕ್ಕಾಗಿ ಕಾತರ್ಿಕೇಯ ಜನಿಸಿದುದಕ್ಕೆ ಸಂಬಂಧಿಸಿದೆ. ಪಾರ್ವತೀ-ಪರಮೇಶ್ವರರ ಈ ಕಥೆ ರಾಮಾಯಣ, ಶಿವ, ಸ್ಕಂದ ಪುರಾರಣಗಳಲ್ಲಿ ಬಂದಿದೆ. ಇವುಗಳಲ್ಲಿ ಕಾಳಿದಾಸ ಯಾವುದರಿಂದ ಆಯ್ದುಕೊಂಡ ಎಂಬುದರ ಬಗ್ಗೆ ಸ್ಪಷ್ಟವಿಲ್ಲ. ವಿಶೇಷವೆಂದರೆ ಮೂಲ ವಸ್ತುವಿಗೇ ಜೊತು ಬೀಳದೆ ತನ್ನ ವಿಶಿಷ್ಟ ಪ್ರತಿಭೆಯ ಸ್ಪರ್ಷದಿಂದ ತನ್ನದೇ ಆದ ವೈಶಿಷ್ಯಪೂರ್ಣವಾದ ಮಹಾಕಾವ್ಯವನ್ನು ನೆಯ್ದಿದ್ದಾನೆ. ವಟು ವೇಷದ ಶಿವನಿಗೂ ಪಾರ್ವತಿಗೂ ನಡೆಯುವ ಸಂವಾದ, ಮನ್ಮಥನ ಪ್ರತಾಪ, ರತಿ ವಿಲಾಪ, ಶಿವ ಪಾರ್ವತೀ ವಿಲಾಸ ಇತ್ಯಾದಿ ವರ್ಣನೆಗಳು ಕಾಳಿದಾಸನ ಕವಿ ಪ್ರತಿಭೆಯ ಶ್ರೇಷ್ಟತೆಗೆ ಸಾಕ್ಷಿಯಾಗಿವೆ. ಈ ಕಾವ್ಯದಲ್ಲಿ ಕಾಶ್ಮೀರದ ಭೂ ಪ್ರದೇಶದ ವರ್ಣನೆ ಎಷ್ಟೊಂದು ಚೇತೋಹಾರಿಯಾಗಿದೆ, ಅಂದರೆ ಇದನ್ನೂ ಓದಿದ ಅನೇಕರು ಕಾಶ್ಮೀರವೇ ಕಾಳಿದಾಸನ ಜನ್ಮದೇಶವಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ತಾರಕಾಸುರನೆಂಬ ರಾಕ್ಷಸ ಬ್ರಹ್ಮನ ವರಗಳಿಂದ ಕೊಬ್ಬಿ ಇಂದ್ರಾದಿ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ, ದೇವತೆಗಳ ಶಕ್ತಿಯೆಲ್ಲ ತಾರಕಾಸುರನ ಮುಂದೆ ಉಡುಗಿದ್ದವು. ಆಗ ದೇವತೆಗಳೆಲ್ಲ ಬೃಹಸ್ಮತಿಯ ನೇತೃತ್ವದಲ್ಲಿ ಬ್ರಹ್ಮನ ಬಳಿಗೆ ಬಂದು ಗೋಳಿಡುತ್ತಾರೆ. ಆಗ ಬ್ರಹ್ಮನು ಶಿವ ಪಾರ್ವತಿಯರಿಗೆ ವಿವಾಹವಾದರೆ ಅವನ ಮಗನಿಂದ ತಾರಕಾಸುರನ ವಧೆಯಾಗುವುದೆಂದು ದೇವತೆಗಳನ್ನು ಸಂತೈಯಿಸಿ ಕಳುಹಿಸುವನು. ಶಿವ - ಪಾರ್ವತಿಯರಿಗೆ ವಿವಾಹ ಮಾಡಿಸಲು ಮನ್ಮಥನೇ ಯೋಗ್ಯವೆಂದು ಇಂದ್ರ ಅವನಿಗೆ ಮರ್ಯಾದೆಮಾಡಿ ಈ ಕಾರ್ಯವನ್ನು ವಹಿಸಿಕೊಡುತ್ತಾರೆ. ಆದರೆ ಮನ್ಮಥನ ಕಾರ್ಯ ಸಫಲವಾಗುವುದಿಲ್ಲ. ಸ್ವತಃ ಆತನೇ ಶಿವನ ಮೂರನೇ ಕಣ್ಣಿಗೆ ಸಿಕ್ಕು ಉರಿದು ಹೋಗುತ್ತಾನೆ. ಕೊನೆಗೆ ಪಾರ್ವತಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾಳೆ. ಆನಂತರ ಶಿವ - ಪಾರ್ವತಿಯರ ವಿವಾಹ ಹಾಗೂ ಶೃಂಗಾರದ ವಿವರಗಳು ಇಲ್ಲಿಗೆ ಮುಕ್ತಾಯ. 'ಭಾರತಿಯ ಸಂಸ್ಕೃತಿಯ ತಿರುಳಾದ ಪುರುಷಾರ್ಥಗಳ ಉಜ್ವಲ ಸಮನ್ವಯ ದೃಷ್ಟಿ, ಸಂವಾದಗಳಲ್ಲಿ ತಿಳಿಹಾಸ್ಯ, ತಪ್ಪದೆ ನಾಟಕೀಯತೆ ಮೊದಲಾದ ಉತ್ತಮ ಸಾಹಿತ್ಯಿಕ ಸಾಂಸ್ಕೃತಿಕ ಗುಣಗಳನ್ನು ಹೊಂದಿರುವ ಕುಮಾರ ಸಂಭವ ಕಾಳಿದಾಸನ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. 
4. ರಘುವಂಶ
 ಭಾರತೀಯ ಚರಿತ್ರೆಯಲ್ಲಿ - ಪುರಾಣಲೋಕದಲ್ಲಿ ವಿರಾಜಮಾನವಾಗಿರುವ ರಘುವಂಶದ ಚರಿತ್ರೆಯನ್ನು ವಿವರಿಸುವ ಮಹಾ ಕಾವ್ಯವಿದು. 19 ಅಧ್ಯಾಯಗಳ ಈ ಕಾವ್ಯದಲ್ಲಿ ದಿಲೀಪ ರಾಜನಿಂದ ಆರಂಭವಾಗಿ ಇವನ ಮಗ ರಘು; ರಘುವಿನ ಮಗ ಅಜ' ಅಜನ ಮಗ ದಶರಥ; ದಶರಥನ ಮಗ ರಾಮ; ರಾಮನ ಮಗ ಕುಶ ಇವರ ಚರಿತ್ರೆಯನ್ನು ದೀರ್ಘವಾಗಿ ವಿವರಿಸಲಾಗಿದೆ. ಕುಶನಿಂದ ಮುಂದಿನ ವಂಶಾವಳಿಯನ್ನು ಸಂಕ್ಷಿಪ್ತವಾಗಿ ಸೂಚಿಸಿ ಅಗ್ನಿವರ್ಣನ ಕತೆಯೊಂದಿಗೆ ಕಾವ್ಯ ಮುಕ್ತಾಯವಾಗುತ್ತದೆ. 11ನೇ ಅಧ್ಯಾಯದಿಂದ 5 ಅಧ್ಯಾಯಗಳು ವಾಲ್ಮೀಕಿ ರಾಮಾಯಣದ ಸಂಗ್ರಹ. ಇಲ್ಲಿ ಕಾಳಿದಾಸ ಆರಿಸಿಕೊಂಡಿರುವ ಅರಸರೆಲ್ಲರೂ ಅರಸೆಲ್ಲರೂ ಆದರ್ಶಗಳೆನಿಸಿರುವವರೆ. ಇಲ್ಲಿ ಬರುವ ದಿಲೀಪ ಆದರ್ಶರಾಜ, ಗುರುಭಕ್ತ ಶಾಸ್ತ್ರವಿಧಿಗಳನ್ನು ಆಚರಿಸುವುದರಲ್ಲಿ ಬಹಳ ಆಸಕ್ತಿಯುಳ್ಳವ ಗುರುವಿನ ಆಜ್ಞೆಗೆ ಅಡ್ಡಿ ಬರುವುದಾದರೆ ತನ್ನ ಜೀವನವನ್ನೇ ಅಪರ್ಿಸುವಷ್ಟು ದಾಢ್ರ್ಯವುಳ್ಳವ; ರಘು ಅಪ್ರತಿಮ ವೀರ, ಬೇಡಿದ್ದರ ಬಯಕೆಗಿಂತ ಹೆಚ್ಚಾಗಿಯೇ ಕೊಡುವವನೆಂದು ಬಿರುದು ಹೊತ್ತ ಮಹಾಪುರುಷ. ಅಜ, ಸತಿ ಇಲ್ಲದಿದ್ದರೆ ಪತಿ ನಿಜರ್ೀವ ಎಂದು ನಂಬಿದ ಆದರ್ಶ ಪ್ರೇಮಿ ದಶರಥ ಅಪಾರ ಪುತ್ರ ಪ್ರೇಮಿ, ರಾಮ ಅನಂತಗುಣನಿಧಿ, ಧರ್ಮ ಪರಿಪಾಲಕನಾಗಿ ಎಲ್ಲವನ್ನೂ ತ್ಯಜಿಸಬಲ್ಲವ. ಏಕ ಪತ್ನಿ ವ್ರತಸ್ಥ, ಇಂಥ ಅನೇಕ ಆದರ್ಶಗಳನ್ನು ಬಿಂಬಿಸುವ ಕಾವ್ಯ ಈ ರಘುವಂಶ.
5. ಮಾಲವಿಕಾಗ್ನಿಮಿತ್ರ
 ಕಾಳಿದಾಸ ರಚಿಸಿರುವ ಮೂರು ನಾಟಕಗಳಲ್ಲಿ ಒಂದು ಈ ಮಾಲವಿಕಾಗ್ನಿ ಮಿತ್ರ. ಇದು 5 ಅಂಕಗಳ ನಾಟಕ. ಅರಮನೆಯೊಂದರಲ್ಲಿ ನಡೆದ ಪ್ರಣಯ ವೃತ್ತಾಂತ ಇದರ ವಸ್ತು. ಅಗ್ನಿ ಮಿತ್ರನೆಂಬ ದೊರೆ ಮಾಲವಿಕ ಎಂಬ ರಾಜಪುತ್ರಿಯನ್ನು ಕಂಡು ಮೋಹಿಸಿ ಅವಳನ್ನು ವಿವಾಹವಾದುದು ಇಲ್ಲಿನ ಮುಖ್ಯ ಕಥೆ. ಇವರುಗಳ ವಿವಾಹಕೆಕ ಅನೇಕ ಅಡ್ಡಿಗಳು ಎದುರಾಗಿ ಅನಂತರ ಅವೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ನಿವಾರಣೆಯಾಗಿ ಸುಖಾಂತ್ಯವಾಗುತ್ತದೆ. 
6. ವಿಕ್ರಮೋರ್ವಶೀಯ
 ಐದು ಅಂಕಗಳಿರುವ ಈ ನಾಟಕವು ಋಗ್ವೇದದ ಕಾಲದಿಂದ ಪ್ರಚುರವಾದ ಪುರೂರವಸ್ ಮತ್ತು ಊರ್ವಶಿಯರ ಪ್ರೇಮದ ಕಥೆಯನ್ನು ವಸ್ತುವಾಗಿ ಚಿತ್ರಿಸಿದೆ. ಈ ಪುರೂರುವ-ಊರ್ವಶಿಯರ ಕಥೆ ಪದ್ಮಪುರಾಣ ಭಾಗವತ. ಕಥಾ ಸರಿತ್ಸಾಗರ ಮತ್ತು ಬೃಹತ್ಕತೆಗಳಲ್ಲಿ ಬರುತ್ತದೆ. ಈ ಕಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅನೇಕ ಕವಿಗಳು ಬಳಸಿಕೊಂಡಿದ್ದಾರೆ. ಅದೇ ರೀತಿ ಕಾಳಿದಾಸನು ತನ್ನ ಕಾವ್ಯಕ್ಕೆ ಈ ಕಥೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದಾನೆ. ಇಲ್ಲಿ ಬರುವ 'ಅನುಕೂಲ' ಪದ ಸ್ವಾರ್ಥ ರಹಿತವಾದ ಸರ್ವಜನಹಿತವಾದುದಾಗಿದೆ. ಕಥೆ ಹೇಳುವಂತೆ 'ಕೇಶಿ' ಎಂಬ ದಾನವನ ಬಂಧನಕ್ಕೊಳಗಾಗಿದ್ದ ಅಪ್ಸರೆ ಊರ್ವಶಿಯನ್ನು ಪುರೂರವ ಬಿಡಿಸಿದ್ದರಿಂದ ಆ ರಾಜನಲ್ಲಿ ಅವಳಿಗೆ ಅನುರಾಗ ಹುಟ್ಟಿ ಪ್ರಣಯಕ್ಕೆ-ತಿರುಗುತ್ತದೆ. ಈ ಮಧ್ಯೆ ಊರ್ವಶಿ ಪ್ರಣಯ ಕೋಪದಿಂದ ಕುಮಾರ ವನವನ್ನು ಪ್ರವೇಶಿಸಿ ದೇವತೆಯಾಗಿ ಪರಿವತರ್ಿತಳಾಗುತ್ತಾಳೆ. ಆಗ ಅವಳನ್ನು ಅರಸುತ್ತ ರಾಜ ಅಲೆಯುವ ಪ್ರಸಂಗವನ್ನು ಕವಿ ಹೃದಯಸ್ಪರ್ಷಿಯಾಗಿ ವಿವರಿಸಿದ್ದಾರೆ. 
7. ಅಭಿಜ್ಞಾನ ಶಾಕುಂತಲ
 ಕಾಳಿದಾಸನ ಬಹುಜನಪ್ರಿಯ ನಾಟಕವಿದು. ಕಾಳಿದಾಸನಿಗೆ ಸಿಕ್ಕಿರುವ ಪ್ರಸಿದ್ಧಿಯಲ್ಲಿ ಈ ನಾಟಕದ ಪಾತ್ರ ಬಹಳಷ್ಟು ಇದೆ. ಇದರ ಸಾಹಿತಿಕ ಗುಣ ಕೂಡ ಅಷ್ಟೇ ಮಹತ್ವದ್ದು. ಈ ಬಗ್ಗೆ ಕಾವೇಷು ನಾಟಕಂ ರಮ್ಯಂ, ತತ್ರಾಪಿ ಚ ಶಕುಂತಲಾ' ಎನ್ನುವ ಶ್ಲೋಕ ಪ್ರಚಲಿತವಿದ್ದು ಶಾಕುಂತಲ ನಾಟಕದ ಶ್ರೇಷ್ಟತಯನ್ನು ಸರಿಯಾಗಿಯೇ ಬಿಂಬಿಸುತ್ತದೆ. ಸಾರಂಗವನ್ನು ಬೇಟೆಯಾಡುತ್ತಾ ಬಂದ ದುಷ್ಯಂತ ಕಣ್ವರ ಆಶ್ರಮ ತಲುಪುವುದು ಅಲ್ಲಿ ಕಣ್ವರ ಸಾಕುಮಗಳು ಶಾಕುಂತಲೆಯನ್ನು ನೋಡುವುದು ಇಬ್ಬರು ಪರಸ್ಪರ ಅನುರಾಗಕ್ಕೆ ಒಳಗಾಗುವುದು ಅನಂತರ ಗಾಂಧರ್ವ ವಿವಾಹವಾಗುವುದು ಅನಂತರ ಶಾಕುಂತಲೆಯನ್ನು ಆಶ್ರಮದಲ್ಲಿಯೇ ಬಿಟ್ಟು ರಾಜಧಾನಿಗೆ ಮರಳಿದ್ದು, ಶಾಕುಂತಲೆ ಗರ್ಭಿಣಿಯಾದದ್ದು, ಅನಂತರ ದೂರ್ವಾಸನ ಶಾಪ ಕೊನೆಗೆ ಉಂಗುರದ ಪ್ರಸಂಗ ಹಾಗೂ ದುಷ್ಯಂತ - ಶಕುಂತಲೆಯರು ಒಂದಾಗಿದ್ದು ಇದಿಷ್ಟು ಕಥೆಯನ್ನು ಕಾಳಿದಾಸ ತನ್ನ ಅಪೂರ್ವ ಕಾವ್ಯ ಪ್ರತಿಭೆಯಿಂದ ಅದ್ಭುತವಾಗಿ ಚಿತ್ರಿಸಿದ್ದಾನೆ. 
ಕಾಳಿದಾಸನಿಗೆ ಸಂದ ಎರಡು ಶ್ರೇಷ್ಠ ಗೌರವಗಳು
ಕಾಳಿದಾಸ ಸಾಹಿತ್ಯಿಕ ಪ್ರತಿಬೆಯನ್ನು ಹಾಡಿಹೊಗಳಿದ ನೂರಾರು ವರ್ಷಗಳಿಂದ ಹೊತ್ತು ಮರೆಸಿದ ಹೊರತಾಗಿಯೂ ಪ್ರತ್ಯೇಕವಾಗಿ ಹೆಸರಿಸಲೇಬೇಕಾದ ಎರಡು ಗೌರವಗಳಿವೆ. ಅವುಗಳೆಂದರೆ:
1. ಕಾಳಿದಾಸ ಸಮ್ಮಾನ ಪ್ರಶಸ್ತಿ
2. ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ
ಸಂಸ್ಕೃತ ಜ್ಞಾನ ಪರಂಪರೆಗಳನ್ನು ಅಧ್ಯಯನ ಮಾಡಲೆಂದೇ ಮಹಾರಾಷ್ಟ್ರ ರಾಜ್ಯದ ನಾಗಪುರ ಎಂಬಲ್ಲಿ ಒಂದು ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದ್ದು, ಆ ವಿಶ್ವವಿದ್ಯಾನಿಲಯಕೆಕ ಕವಿ ಕುಲಗುರು ಕಾಳಿದಾಸನ ಹೆಸರಿಡಲಾಗಿದೆ. ಒಬ್ಬ ಶ್ರೇಷ್ಠ ಸಾಹಿತಿಯನ್ನು ಸಮಾಜ ಸದಾ ಕಾಲ ನೆನಪಿನಲ್ಲಿಡುವ ಪ್ರಯತ್ನ ಒಂದು ಭಾಗ ಇದಾಗಿದ್ದು ಗಮನಾರ್ಹ.
ಹಾಗೆಯೇ ಕಾಳಿದಾಸನ ಪ್ರತಿಭೆ ಸ್ಫೂರ್ತಿದಾಯಕವೆಂದು ಭಾವಿಸಿದ ಮಧ್ಯಪ್ರದೇಶ ಸಕರ್ಾರ; ಸಾಹಿತ್ಯ, ನಾಟಕ, ಕಲೆ (ಸಂಗೀತ, ನೃತ್ಯ, ರಂಗಭೂಮಿ)ಗಳ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಬರಹಗಾರರು ಮತ್ತು ಕಲಾವಿದರಿಗೆ ಕಾಳಿದಾಸನ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ನೀಡುತ್ತಿದೆ. 'ಕಾಳಿದಾಸ ಸಮ್ಮಾನ್' ಎಂಬ ಈ ಪ್ರಶಸ್ತಿಯನ್ನು 1980 ರಿಂದ ನೀಡಲಾಗುತ್ತಿದೆ. ಇಲ್ಲಿಯವರೆಗೂ ಅನೇಕ ಕಲಾವಿದರು, ನಾಟಕಕಾರರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನರ್ಾಟಕದಿಂದ ಮಲ್ಲಿಕಾಜರ್ುನ ಮನ್ಸೂರ್, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಕೆ.ವಿ. ಸುಬ್ಬಣ್ಣ ಮೊದಲಾದವರು ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದಿದ್ದಾರೆ. ಇಂದು 2 ಲಕ್ಷ ರೂಪಾಯಿಗಳ ಮೊತ್ತವನ್ನು ಹೊಂದಿರುವ ಈ ಪ್ರಶಸ್ತಿ ಕೇವಲ ಹಣದ ಕಾರಣಕ್ಕೆ ಮಾತ್ರವಲ್ಲದೆ ಅದು ಹೊಂದಿರುವ ಕವಿಯ ಹೆಸರಿನಿಂದಲ್ಲಿ ಭಾರತದ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದೆನಿಸಿದೆ. 
ಕನ್ನಡದಲ್ಲಿ ಕಾಳಿದಾಸ
ಕಾಳಿದಾಸ ಭಾತ ಭಾಷೆಗಳಿಗೆ ಮಾತ್ರವಲ್ಲ; ಜಗತ್ತಿನ ಬೇರೆ ಬೇರೆ ಭಾಷೆಗಳಿಗೂ ಚಿರಪರಿಚಿತರು. ಸಂಸ್ಕೃತ ಭಾಷೆಯಲ್ಲಿ ಬರೆದ ಕಾಳಿದಾಸ ಬೇರೆ ಭಾಷೆಗಳ ಬರಹಗಾರರನ್ನು ಪ್ರಭಾವಿಸಿದ್ದಾನೆ. ಈತನ ಪ್ರಭಾವ ಎರಡು ರೀತಿಯಲ್ಲಿ ಆಗಿರುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಕಾಳಿದಾಸನ ಕೃತಿಗಳನ್ನು ತಮ್ಮ ತಮ್ಮ ಭಾಷೆಗಳಿಗೆ ಅನುವಾದಿಸಿಕೊಂಡಿದ್ದು. ಮತ್ತೊಂದು ಕೃತಿಗಳ ಭಾಷೆ-ಸಾಹಿತ್ಯ-ದರ್ಶನಗಳಿಂದ ಪ್ರಭಾವಿತರಾಗಿ ಸ್ವಂತ ರಚನೆ ಮಾಡುವುದು. ಇವೆರಡೂ ಪ್ರಭಾವಗಳಲ್ಲಿ ಮೊದಲನೆಯದು ಪಾಶ್ಚಾತ್ಯ ಭಾಷೆಗಳಲ್ಲಿ ಕಂಡುಬರುತ್ತದೆ ಎನ್ನಬಹುದು. ಭಾರತೀಯ ಭಾಷೆಗಳಲ್ಲಿ ಸಂಸ್ಕೃತದ ಒಡನಾಟದಲ್ಲಿ ಹೆಚ್ಚು ಬೆಳೆದ ಭಾಷೆ ಕನ್ನಡ. ಮೇಲೆ ಉಲ್ಲೇಖಿಸಿದ ಎರಡೂ ರೀತಿಯ ಪ್ರಭಾವಗಳು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿಯೇ ಆಗಿವೆ. ಅಂಥ ಕೆಲವು ವಿವರಗಳನ್ನು ಇಲ್ಲಿ ನೋಡಬಹುದು. 
ಕನ್ನಡದ ಪ್ರಾಚೀನ ಸಾಹಿತ್ಯ ಪರಂಪರೆಯಲ್ಲಿ ಬರುವ ನೃಪತುಂಗ ಪಂಪ, ಪೊನ್ನ, ಹರಿಹರ, ದುರ್ಗಸಿಂಹ ಹಾಗೂ ನಾಗವರ್ಮ ಅವರುಗಳ ಸಾಹಿತ್ಯದಲ್ಲಿ ಕಾಳಿದಾಸನ ದಟ್ಟ ಪ್ರಭಾವವಿದ್ದು, ಅನೇಕ ವಿಷಯಗಳಲ್ಲಿ ಕಾಳಿದಾಸನಿಗೆ ಋಣಿಯಾಗಿದ್ದಾರೆ. ಇವರಲ್ಲಿ ಕೆಲವರಂತೂ ಕಾಳಿದಾಸನನ್ನೂ ಮೀರಿಸುತ್ತೇವೆ ಎಂಬ ಆಶಯದೊಂದಿಗೆ ಬರೆದಿರುವುದುಂಟು. ಪೊನ್ನ ಹೇಳಿರುವ 'ಕಾಳಿದಾಸಂಗೆ ನೂರ್ಮಡಿ' ಎಂದಿರುವ ಮಾತು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆಧುನಿಕ ಆಯಾಮಗಳು ಕಾಣಿಸಿಕೊಳ್ಳುವ 19ನೇ ಶತಮಾನದವರೆಗು ಕನ್ನಡದಲ್ಲಿ ಕಾಳಿದಾಸನ ಪ್ರಭಾವ ಹೀಗಿದ್ದರೆ ಅಲ್ಲಿಂದ ಮುಂದೆ ಸಂಪೂರ್ಣ ಬದಲಾಗಿ ಕಾಳಿದಾಸನ ನಾಟಕ ಹಾಗೂ ಕಾವ್ಯಗಳನ್ನು ಕನ್ನಡ ಭಾಷೆಗೆ ಭಾಷಾಂತರ ಹಾಗೂ ಭಾವಾಂತರಗಳ ಮೂಲಕ ತರಲಾಯಿತು. ಇಂಥ ಪ್ರಯತ್ನಗಳಲ್ಲಿ 19ನೇ ಶತಮಾನದ ಆರಂಭಕ್ಕೆ ಮೈಸೂರು ಅರಮನೆಯ ಬರೆಹಗಾರರಿಂದ ನಡೆದ ಅನುವಾದಗಳು ಬಹಳ ಪ್ರಮುಖ. ಅದರಲ್ಲಿ ಬಸವಪ್ಪ ಶಾಸ್ತ್ರಿ, ಸೋಸಲೆ ಅಯ್ಯಶಾಸ್ತ್ರಿಗಳು ಕ್ರಮವಾಗಿ ಶಾಕುಂತಲ, ವಿಕ್ರಮೋರ್ವಶೀಯ ನಾಟಕಗಳನ್ನು ಅನುವಾದಿಸಿದ್ದು ಅವು ಇಂದಿಗೂ ಮಾಸ್ಟರ್ಪೀಸ್ಗಳಾಗಿವೆ. ಇನ್ನೂ ನಂತರದ ದಿನಗಳಲ್ಲಿ ಶಾಂತಕವಿ, ಶೇಷಗಿರಿ ರಾಮಚಂದ್ರ ಚುರಮುರಿ, ಅವರುಗಳು ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನೂ ಕನ್ನಡಕ್ಕೆ ತಂದಿದ್ದು ಕನ್ನಡದ ನಾಟಕ ರಚನೆಗೆ ಬುನಾದಿಯಾದವು. ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ ಅವರ ಮೇಘದೂತ ಹಾಗೂ ಎಸ್.ಜಿ. ನರಸಿಂಹಚಾರ್ಯರ ದಿಲೀಪ ಚರಿತೆ ಗಮನಿಸಬೇಕಾದ ಪ್ರಯತ್ನಗಳಾಗಿವೆ. ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡದ ಗದ್ಯ ಬರೆಹದಲ್ಲಿ ತರಲು ಹಿಂದೆ ಬೀಳದ ಕನ್ನಡ ಸಾಹಿತ್ಯ ಲೋಕ ಈ ದಿಕ್ಕಿನಲ್ಲಿ ಸಾಕಷ್ಟು ಉತ್ತಮ ಕೆಲಸ ನಡೆದಿದೆ. ಅವುಗಳಲ್ಲಿ ಎಸ್.ವಿ. ಪರಮೇಶ ಭಟ್ಟ ಅವರು ಕಾಳಿದಾಸನ ಎಲ್ಲಾ ಕೃತಿಗಳನ್ನು ಗದ್ಯದಲ್ಲಿ ತಂದ ಪ್ರಯತ್ನ ಬಹಳ ಮುಖ್ಯವಾದುದು. ಅದರಂತೆ 3ನೇ ಕೃಷ್ಣರಾಜ ಒಡೆಯರ ಶಾಕುಂತಲ ನಾಟಕ-ನವೀನ ಟೀಕೆ, ಬಿ. ಕೃಷ್ಣಪ್ಪನವರ ಕನ್ನಡ ಶಾಕುಂತಲ ಗಮನಿಸಲೇಬೇಕಾದ ಇತರೆ ರಚನೆಗಳಾಗಿವೆ. ಇಂಥ ಅನುವಾದಗಳಿಂದಲ್ಲದೆ ವಿಮರ್ಶಾ ಬರೆಹಗಳ ಮೂಲಕವೂ ಕನ್ನಡದಲ್ಲಿ ಕಾಳಿದಾಸ ಕಾಣಿಸುತ್ತಾನೆ. ವಿಮರ್ಶೆಯ ಮೂಲಕ ಕಾಳಿದಾಸನನ್ನು ಪರಿಚಯಿಸಿದ ವಿಮರ್ಶಕರೆಂದರೆ ಮಾಸ್ತಿ, ತೀ.ನಂ.ಶ್ರೀ. ದ.ರಾ. ಬೇಂದ್ರೆ, ಎಸ್.ವಿ. ರಂಗಣ್ಣ, ಶ್ರೀರಂಗ, ಲಕ್ಷ್ಮೀನರಸಿಂಹಚಾರ್ಯ, ಸಿ.ಕೆ. ವೆಂಕಟರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಕೆ. ಕೃಷ್ಣಮೂರ್ತಿ ಇನ್ನೂ ಮೊದಲಾದವರು. ಒಟ್ಟಾರೆ ಹೇಳುವುದಾದರೆ ಅನುವಾದ, ಗದ್ಯ ಅನುವಾದ ಹಾಗೂ ವಿಮರ್ಶೆಯ  ಮೂಲಕ ಕಾಳಿದಾಸ ಕನ್ನಡಕ್ಕೆ ಎಷ್ಟರ ಮಟ್ಟಿಗೆ ಪರಿಚಯವೆಂದರೆ ಆತ ಸಂಸ್ಕೃತದ ಕವಿ ಅಲ್ಲವೇ ಅಲ್ಲ ಬದಲಿಗೆ ಕನ್ನಡದ ಕವಿಯೇ ಆಗಿದ್ದಾನೆ. 
ಕೊನೆಗೆ ಉಳಿಯುವ ಅನುಮಾನಗಳು
ಕಾಳಿದಾಸನ ಸಾಹಿತ್ಯಿಕ ಪ್ರತಿಭೆಯ ಔನತ್ಯದ ಸ್ಥಿತಿಯನ್ನು ಕಂಡಾಗ ನಮ್ಮೆದುರಿಗೆ ಅನೇಕ ಪ್ರಶ್ನೆ ಹಾಗೂ ಅನುಮಾನಗಳು ಕಾಣಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು:
1. ಕಾಳಿದಾಸನ ಕಾಲ 4 ಹಾಗೂ 5ನೇ ಶತಮಾನಗಳಿಗೂ ಹಿಂದಿನ ಕವಿಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವಾಗ ಈ ಶತಮಾನಗಳಲ್ಲೇ ಬದುಕಿದ ಕಾಳಿದಾಸನ ವೈಯುಕ್ತಿಕ ಮಾಹಿತಿಗಳಿಲ್ಲ ಯಾಕೆ?
2. ಕಾಳಿದಾಸನ ಕಾವ್ಯ-ನಾಟಕಗಳಲ್ಲಿ ಕಂಡುಬರುವ ಸ್ಥಾಯಿಭಾವ ಪ್ರೇಮಕ್ಕೂ ಆತನ ವೈಯುಕ್ತಿಕ ಬದುಕಿಗೂ ಸಂಬಂಧವಿದೆಯೆ?
3. ರಾಜಮನೆತನದಲ್ಲಿ ಕಾಳಿದಾಸನ ವಿವಾಹ ಸಂಬಂಧ ಕುದುರಿದ್ದಕ್ಕೂ ಆತನ ವೈಯುಕ್ತಿಕ ವಿವರಗಳು ಯಾವುದೇ ರೂಪದಲ್ಲಿ ಲಭ್ಯವಿಲ್ಲದಿರುವುದಕ್ಕೂ ಏನಾದರೂ ಸಂಬಂಧವಿದೆಯೆ?
4. ಕಾಳಿದಾಸನ ವೈಯುಕ್ತಿಕ ವಿವರಗಳನ್ನು ತಿಳಿಯಬೇಕಾದರೆ ನಾವು ಅವಲಂಭಿಸಬಹುದಾದ ಆಕರಗಳ್ಯಾವುವು.
ಕಾಳಿದಾಸನ ಅಧ್ಯಯನಗಳು ಇಂದು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳಿವು. ಈ ಪ್ರಶ್ನೆಗಳು ಕವಿಕಾಳಿದಾಸನ ಅಧ್ಯಯನಗಳಿಗೆ ಒಂದು ಹೊಸ ಆಯಾಮ ನೀಡಬಲ್ಲವು. ಇಂಥ ಪ್ರಯತ್ನಗಳು ಈಗಾಗಲೇ ನಮ್ಮೊಳಗೆ ಶುರುವಾಗಿರುವುದು ಉತ್ತಮ ಬೆಳವಣಿಗೆ ಕನ್ನಡದಲ್ಲಿ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಿದೆ ಎಂಬುದು ಗಮನಾರ್ಹ ಸಂಗತಿ. ಈ ರೀತಿಯ ಹೊಸ ಚಚರ್ೆಗಳು ಪ್ರಧಾನವಾಗಿ ಪರಿಗಣಿಸಿರುವ ಅಂಶವೆಂದರೆ ಕಾಳಿದಾಸನ ವೈವಾಹಿಕ ಸಂಬಂಧ ರಾಜಮನೆತನದಲ್ಲಿ ಬೆಳೆದ ಕಾರಣದಿಂದಲೇ ಆತನ ವಿವರಗಳು ಮಾಯವಾಗಿರಬಹುದೆಂಬ ಊಹೆ. ಇದನ್ನು ಕನ್ನಡದ ಜನಪ್ರಿಯ ಸಿನಿಮಾ 'ಕವಿರತ್ನ ಕಾಳಿದಾಸ' ಸರಿಯಾದ ಕ್ರಮದಲ್ಲೇ ಪ್ರಸ್ತುತ ಪಡಿಸಿತು. ಈ ಪ್ರಯತ್ನದ ನಂತರ ಕೋಲಾರ ಜಿಲ್ಲೆಯ ಜನಪದ ಕಥಾನಕದಲ್ಲಿ ದೊರೆಯುವ ಸುಳಿವುಗಳ ಮೂಲಕ ಕೆ.ವೈ. ನಾರಾಯಣಸ್ವಾಮಿ ಹಾಗೂ ಶ್ರೀನಿವಾಸ ಮೊದಲಾದವರು ಇನ್ನಷ್ಟು ಹೊಸ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಕಾಳಿದಾಸ ಮೂಲತಃ ತಂದೆ-ತಾಯಿಯನ್ನು ಕಳೆದುಕೊಂಡು 'ಕಾಳಿ' ಗುಡಿಯಲ್ಲಿ ಸಿಕ್ಕವನು. ಹಾಗಾಗಿಯೇ ಅವನ ಮೂಲ ಹೆಸರು 'ಕಾಳಿ' ಕಾಶ್ಮೀರದ ಬುಡಕಟ್ಟಿನ ಹಟ್ಟಿಯ ಜನರೆಲ್ಲರು ಈತನನ್ನು ತಮ್ಮ ಮಗನೆಂದೇ ಸಾಕಿ ಸಲಹುತ್ತಾರೆ. ಇಂಥ ಸಮಯದಲ್ಲಿ ಆ ಪ್ರದೇಶದ ನದಿಯ ಮರಳಿನ ದಿಬ್ಬಗಳ ಮೇಲೆ ಅಲ್ಲಿನ ಅರಸರ ಮಕ್ಕಳಿಗೆ ಪಾಠ ಕಲಿಸಲಾಗುತ್ತದೆ. ಮರಳಿನ ಮೇಲೆ ಅಕ್ಷರ ತಿದ್ದಿಸುತ್ತಿದ್ದರು ಹಾಗೂ ಬಾಯಿ ಪಾಠಮಾಡಿಸುತ್ತಿದ್ದರು. ಈ ಸಮಯದಲ್ಲಿ ಬಾಯಿಪಾಠವನ್ನು ಮರೆಯಲ್ಲಿ ನಿಂತು ಕೇಳಿಸಿಕೊಳ್ಳುವುದು ಹಾಗೂ ರಾಜರ ಮಕ್ಕಳು ಮರಳಿನ ಮೇಲೆ ತಿದ್ದಿ ಬಿಟ್ಟ ಅಕ್ಷರ ಗುರುತುಗಳ ಮೇಲೆ ತಿದ್ದುವುದರ ಮೂಲಕ ಕಾಳಿ ವಿದ್ಯೆ ಕಲಿಯುತ್ತಾನೆ. ಇದಷ್ಟೇ ಅಲ್ಲದೆ ಅತ್ಯುತ್ತಮ ಹಾಡುಗಾರನೂ ಆಗಿದ್ದ. ಒಮ್ಮೆ ಸಂಪ್ರದಾಯದಂತೆ ಅರಸನ ಪ್ರತಿನಿಧಿಗಳು ಸುಂಕ ವಸೂಲಿಗಾಗಿ ಆಗಮಿಸಿದಾಗ ಹಟ್ಟಿಯ ಜನರ ಪರವಾಗಿ ಹಾಡು ಹಾಡಿ ಸಂತೃಪ್ತಿಪಡಿಸುತ್ತಾನೆ. ಈ ಕಾಳಿಯ ಪ್ರತಿಭೆಯನ್ನು ಕಂಡ ಅರಸ ರಾಜಾಸ್ಥಾನಕ್ಕೆ ಆಹ್ವಾನಿಸುತ್ತಾನೆ. ಈ ಮಧ್ಯೆ ಹಾಡಿನಲ್ಲಿ ಗಂದರ್ವಕನ್ಯೆಯೊಡನೆ ಪ್ರೇಮವಾಗಿರುತ್ತದೆ. ಇದನ್ನು ತೊರೆದು ರಾಜಾಸ್ತಾನಕ್ಕೆ ಹೋಗಲೇ ಬೇಕಾಗುತ್ತದೆ. ಹಾಗಾಗಿ ಕಾಳಿ ರಾಜಾಸ್ತಾನಕ್ಕೆ ಹೋಗುತ್ತಾನೆ. ಅಲ್ಲಿ ರಾಜಕುಮಾರಿಯು ಈತನನ್ನು ಮೆಚ್ಚಿ ವಿವಾಹವಾಗುವಂತೆ ಕೇಳುತ್ತಾಳೆ ಇದರಿಂದ ರಾಜಕುಮಾರಿ ಕಾಳಿಯನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿಡುತ್ತಾಳೆ. ಹೀಗೆ ಕೊನೆಗೆ ಕಾಳಿದಾಸನ ಸಾವಿನ ಸುದ್ದಿ ತಲುಪುತ್ತದೆ. ಈ ಸಾವಿಗೆ ಒಬ್ಬ ವೇಶ್ಯೆ ಕಾರಣವೆಂಬ ಸುದ್ದಿಯೂ ಹರಡುತ್ತದೆ.
ಮೇಲಿನ ಕಥೆ ಜಾನಪದ ಕಥನಗಳಲ್ಲಿ ಆಗುವಂತಹದ್ದು. ಈ ಲೇಖನದ ಆರಂಭಕ್ಕೆ ಉಲ್ಲೇಖಿಸಿದ ಐತಿಹ್ಯ ಇದಕ್ಕಿಂತ ಭಿನ್ನವಾದ ಕಥೆಯನ್ನು ಹೇಳಿದೆ. ಇವೆರಡೂ ಕೂಡ ಒಂದೇ ವಿಷಯದ ಭಿನ್ನ ಅಭಿಪ್ರಾಯಗಳಾಗಿವೆ. ಇಲ್ಲಿ ಗಮನಿಸಬೇಕಾದುದೆಂದರೆ ಕಾಳಿದಾಸ ರಾಜಮನೆತನದಿಂದ ಒದಗಿಬಂದ ಪ್ರೇಮಕ್ಕೆ ಬಲಿಯಾದ ವ್ಯಕ್ತಿ ಎಂಬ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತದೆ. ಪ್ರತಿಭೆಯನ್ನು - ದೇಹವನ್ನು ಒಂದೇ ಎಂಬಂತೆ ಕಾಣುವ ಪ್ರೇಮ ಹಾಗೂ ಇವೆರಡೂ ಬೇರೆ ಎಂಬಂತೆ ಕಾಣುವ ಪ್ರಭುತ್ವದ ಬಗೆಗಿನ ಒಳಮರ್ಮಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ನಮ್ಮ ಚಿಂತನಾ ವಲಯ ಕಾಳಿದಾಸನ ಸಾಹಿತ್ಯದ ಚರ್ಚೆಗಿಂತ ಆತನ ಜೀವನ ವಿವರಗಳ ಬಗೆಗಿನ ಚರ್ಚೆಯನ್ನು ಬೆಳಸಬೇಕಾಗಿದೆ. 

*******
ಪರಾಮರ್ಶನ
1. ಕಾಲಿದಾಸ, ಆದ್ಯರಂಗಾಚಾರ್ಯ (ಶ್ರೀರಂಗ), 2007, ಅಭಿನವ ಪ್ರಕಾಶನ, ಬೆಂಗಳೂರು 
2. ಕಾಳಿದಾಸನ ನಾಟಕಗಳು,2010, ಕೆ. ಕೃಷ್ಣಮೂತರ್ಿ ಸಂಸ್ಕೃತ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರು
3. ಅನಭಿಜ್ಞ ಶಾಕುಂತಲ ನಾಟಕ (ಅಪ್ರಕಟಿತ), 2012, ಕೆ.ವೈ. ನಾರಾಯಣ ಸ್ವಾಮಿ, ಬೆಂಗಳೂರು
4. ಕನ್ನಡ ವಿಷಯ ವಿಶ್ವಕೋಶ, ಸಂಪುಟ-4

    ಡಾ. ಎಸ್.ಎಂ. ಮುತ್ತಯ್ಯ

Wednesday, 18 July 2012

ಒಡಲಾಳ : ಅಪೂರ್ವ ಶೋಭೆಯ ಕಥನ

                                                                                                                                      
              ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ದೇವನೂರು ಒಬ್ಬರು. ತಮ್ಮ ಅಪಾರ ಜೀವನಾನುಭವದೊಂದಿಗೆ ಬರೆದ ದೇವನೂರು ಮಹದೇವ ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಲಿತರ ಬದುಕಿನ ಸಮರ್ಥವಾದ ಅನಾವರಣ ಮಾಡಿದವರು. ಇವರು ಕಥನ ಸಾಹಿತ್ಯವನ್ನು ನಂಬಿ ಮುಖ್ಯವಾದ ಮೂರು ಕೃತಿಗಳನ್ನು ಮಾತ್ರ ರಚಿಸಿದ್ದಾರೆ. ಅವುಗಳೆಂದರೆ ದ್ಯಾವನೂರು (ಕಥಾಸಂಕಲನ); ಒಡಲಾಳ (ಕಿರುಕಾದಂಬರಿ); ಕುಸುಮಬಾಲೆ (ಕಾದಂಬರಿ). ಈ ಮೂರು ಕೃತಿಗಳು ಅನುಕ್ರಮವಾಗಿ 53, 52, 77 ಪುಟಗಳಷ್ಟು ಮಾತ್ರವಾಗುತ್ತದೆ. ಈ ಬಗ್ಗೆ ಡಾ. ಹಾ.ಮಾ. ನಾಯಕರು ತಮ್ಮ ಅಂಕಣ ಬರಹವೊಂದರಲ್ಲಿ ಹೀಗೆ ಹೇಳಿದ್ದಾರೆ: ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿಮರ್ಿಸಿಕೊಂಡಿರುವ ದೇವನೂರು ಮಹದೇವ ಅವರು ಬರೆದಿರುವುದು ಬಹಳವಲ್ಲ. ಇವರಷ್ಟು ಸ್ವಲ್ಪವೇ ಬರೆದು, ಇಷ್ಟೊಂದು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ. ಈ ಮಾತು ದೇವನೂರು ಅವರ ಸಾಹಿತ್ಯ ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಮಹತ್ವದ್ದು ಎಂಬುದನ್ನು ನೆನಪಿಸುತ್ತದೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯಲ್ಲಿದ್ದ ಇತರೆ ಸಹ ಬರಹಗಾರರಿಗೆ ಸಿಗದಷ್ಟು ಮಾನ್ಯತೆ, ಪ್ರಸಿದ್ಧಿ ಇವರಿಗೇಕೆ ಸಿಕ್ಕಿತು? ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಒಂದೇ: ಅದೆಂದರೆ ದೇವನೂರು ಅವರು ತಮ್ಮದೇ ವಿಶಿಷ್ಟವಾ ದೃಷ್ಟಿಯಲ್ಲಿ ದಲಿತ ಲೋಕವನ್ನು ಗಮನಿಸುವುದರಿಂದ ಹಿಡಿದು ಅದರ ಅಭಿವ್ಯಕ್ತಿಯವರೆಗೂ ಅದನ್ನು ಅನನ್ಯವಾಗಿಯೇ ಧ್ಯಾನಿಸುತ್ತಾರೆ. ಹಾಗಾಗಿಯೇ ಅಗಾಧ ಸಂಖ್ಯೆಯ ಓದುಗರು ಹಾಗೂ ಅಭಿಮಾನಿಗಳನ್ನು ಪಡೆದರು. ಇಂಥ ಜನಪ್ರಿಯತೆಗೆ ಸಾಕ್ಷಿಯೆಂಬಂತೆ ರಾಜ್ಯಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವದಂತಹ ಪ್ರತಿಷ್ಠತೆ ಪ್ರಶಸ್ತಿಗಳು ಬಂದಿವೆ. ಇವೆಲ್ಲವಕ್ಕೂ ಕಳಸವಿಟ್ಟಂತೆ 2011 ರಲ್ಲಿ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದೆ. ಇವರ ಮೂರು ಕೃತಿಗಳಲ್ಲಿ ಕುಸುಮಬಾಲೆ ಕಾದಂಬರಿ ತನ್ನ ವಸ್ತು, ವಿಶೇಷವಾಗಿ ಅಭಿವ್ಯಕ್ತಿ ವಿಷಯದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದೊಳಗೆ ತೀವ್ರವಾದ ಟೀಕೆ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಇನ್ನೂ ಒಡಲಾಳ ಹಾಗೂ ದ್ಯಾವನೂರು ಕೃತಿಗಳು ಎಲ್ಲಾ ರೀತಿಯ ಓದುಗರನ್ನು ತಮ್ಮೆಡೆಗೆ ಆಕಷರ್ಿಸಿವೆ. ಮಹದೇವ ಅವರು ಹೀಗೆ ಸಾಹಿತ್ಯ ಕೃತಿಗಳಿಂದ ಮಾತ್ರವೆ ಗಮನಾರ್ಹವೆನಿಸದೆ ತನ್ನ ಬದುಕಿನ ರೀತಿ-ನೀತಿಗಳ ವಿಷಯದಲ್ಲೂ ಅನನ್ಯವೆನಿಸಿದ್ದಾರೆ. ಅತೀ ಕೆಟ್ಟ ಬಡತನದಿಂದ ಬಂದ ಇವರು ಹಾಸ್ಟೆಲ್ ಸೌಲಭ್ಯಗಳ ಸಹಕಾರದೊಂದಿಗೆ ವಿದ್ಯಾಭ್ಯಾಸ ಆರಂಭಿಸಿ, ಓದು-ಬರಹದ ಕಡೆ ಆಸಕ್ತಿ ತೋರಿದವರು. ಗಾಂಧಿ-ಅಂಬೇಡ್ಕರ್-ಲೋಹಿಯಾ ಅವರಂಥ ಸಾಮಾಜವಾದಿಗಳ ಬರಹಗಳಿಂದ ಆಲೋಚನೆ ಹಾಗೂ ಬದುಕಿನ ಕ್ರಮಗಳನ್ನೇ ಬದಲಾಯಿಸಿಕೊಂಡರು. ಈ ಹಿನ್ನೆಲೆಯೊಳಗೆ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಮತ್ತು ಹೋರಾಟಗಳ ಕಡೆ ಆಸಕ್ತಿ ಬೆಳೆಸಿಕೊಂಡು ಅಂಥ ಕಾರ್ಯಗಳಲ್ಲಿ ಮಗ್ನರಾದರು. ಹೋರಾಟಕ್ಕೆ ಸ್ಪೂರ್ತಿ ಹಾಗೂ ಬೆನ್ನೆಲುಬಾಗಿದ್ದ ಮಾನವ,  ಸುದ್ದಿ ಸಂಗಾತಿ, ಪಂಚಮ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳೊಮದಿಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಒಬ್ಬರಾದರು. ಇಂಥ ಸಾಮಾಜಿಕ ಚಟುವಟಿಕೆಗಳ ಪರಿಣಾಮವಾಗಿ ಅವರ ವೈಯುಕ್ತಿಕ ಬದುಕಿನಲ್ಲಿಯೂ ಗಮನಿಸಲೇಬೇಕಾದ ಎರಡು ಘಟನೆಗಳು ಜರಗಿವೆ. ಅವುಗಳಲ್ಲಿ ಒಂದು: ಭಾರತೀಯ ಹಿಂದೂ ಸಾಂಪ್ರದಾಯಿಕ ಸಮಾಜದಲ್ಲಿ ಬದುಕನ್ನೇ ಕಳೆದುಕೊಂಡಿದ್ದ ವಿದವೆಯೊಬ್ಬರನ್ನು ವಿವಾಹವಾಗಿದ್ದು. ಎರಡು: ಮೈಸೂರಿನ ಪ್ರತಿಷ್ಠಿತ ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಐ.ಎಲ್.)ದಲ್ಲಿ ಸಿಕ್ಕಿದ್ದ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ರೈತನಾದುದು. ಹೀಗೆ ಇಡೀ ಕನರ್ಾಟಕದ ದಲಿತರ ಬೌದ್ಧಿಕ ನಾಯಕನಾಗಿ ಬೆಳೆದು ನಿಂತ ದೇವನೂರು ಮಹದೇವ ಅವರಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಮಾನ್ಯತೆ ಮತ್ತು ಅವಕಾಶಗಳು ದೊರೆತವು. ಈ ಅವಕಾಶಗಳ ಗುಂಗಿನಲ್ಲಿ ದೇವನೂರು ಅಪ್ಪಟ ಸ್ವಾರ್ಥ ರಾಜಕಾರಣಿಯಂತೆ ವರ್ತಿಸಿದರು ಎಂಬಂಥಹ ಅಪವಾದಗಳೂ ಇವರ ಮೇಲಿವೆ. ಇವೆಲ್ಲ ಸಂಗತಿಗಳ ನಡುವೆ ಮತ್ತೆ ಮತ್ತೆ ಚರ್ಚೆಗೆ ಬಂದದ್ದು ಗಮನಿಸಲೇಬೇಕಾದ ಸಂಗತಿ. ಇಂಥ ರೋಚಕ ಬೆಳವಣಿಗೆಯನ್ನು ಗಮನಿಸಿದಂತಹ ಎಂತಹವರೂ ದೇವನೂರು ಅವರ ಸಾಹಿತ್ಯವನ್ನು ಓದುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಇಂಥ ಅಭಿಲಾಷೆಗಳ ಭಾಗವಾಗಿ ಪ್ರಸ್ತುತ ಲೇಖನದಲ್ಲಿ ಒಡಲಾಳ ಕಿರು ಕಾದಂಬರಿಯ ವಿವೇಚನೆಯನ್ನು ನಡೆಸಲಾಗಿದೆ. 
         1978ರಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ 52 ಪುಟಗಳ ಕಿರು ಕಾದಂಬರಿ ಒಡಲಾಳ. ದಲಿತ ಕುಟುಂಬದ ಕಥೆಯೊಂದರ ಮೂಲಕ ಇಡೀ ದಲಿತ ಲೋಕದ ವಾಸ್ತವವನ್ನು ನೈಜವಾಗಿ ದಾಖಲಿಸುತ್ತಲೇ ಅವರ ಬಿಡುಗಡೆಯ ಹಾದಿಗಳ ಬಗ್ಗೆ ಚಿಂತಿಸುವಂತೆ ಮಾಡುವ ಈ ಕೃತಿ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನಗಳಿಸಿದೆ. ಇಡೀ ಈ ಕಿರು ಕಥನವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಿ ಚಚರ್ಿಸಬಹುದಾಗಿದೆ. ಈ ಭಾಗಗಳ ವಿವರಗಳನ್ನು ನೋಡುವಾಗ ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ ಹಾಗೂ ಕುಟುಂಬದ ಸದಸ್ಯರ ವೈಯುಕ್ತಿಕ ಪರಿಚಯವೂ ಕೃತಿಯ ಅರ್ಥ ಗ್ರಹಿಕೆಗೆ ಅನಿವಾರ್ಯವಾಗುತ್ತದೆ. ಹಾಗೆಯೇ ಈ ಎಲ್ಲಾ ವಿಷಯಗಳನ್ನು ದಾಖಲಿಸುವ ಲೇಖಕರು ತನ್ನ ಅಭಿವ್ಯಕ್ತಿಗೆ ತುಂಬಿರುವ ಅರ್ಥ ಮತ್ತು ಆಶಯಗಳನ್ನು ಗಮನಿಸಬೇಕಾಗುತ್ತದೆ. ಕೊನೆಯಲ್ಲಿ ಕೃತಿಯ ಮತ್ತೊಂದು ಅನನ್ಯ ಸಂಗತಿಯಾಗಿರುವ ಭಾಷೆಯ ಬಗೆಗೆ ವಿಚಾರ ಮಾಡಬೇಕಾಗುತ್ತದೆ. ಆದ್ದರಿಂದ ಮೇಲೆ ಉಲ್ಲೇಖಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಾದಂಬರಿಯ ಹಲವಾರು ವಿಚಾರಗಳನ್ನು ವಿವರಿಸಬಹುದಾಗಿದೆ. 
ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ
         ನಾಲ್ಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ಸಾಕವ್ವನ ಹಟ್ಟಿ. ಇದರ ಯಜಮಾನಿ ಸಾಕವ್ವ. ಇವರ ಮನೆಯಲ್ಲಿ ಯಜಮಾನಿಯಾಗಿ ಸಾಕವ್ವ: ಕಾಳಣ್ಣ, ಸಣ್ಣಯ್ಯ, ಗುರುಸಿದ್ಧ ಎನ್ನುವ ಮೂರು ಜನ ಗಂಡುಮಕ್ಕಳು; ಗೌರಮ್ಮ, ಪುಟ್ಟಗೌರಿ ಎಂಬ ಇಬ್ಬರು ಹೆಣ್ಣು ಮಕ್ಕಳು: ಅಷ್ಟೇ ಅಲ್ಲದೆ ಕಾಳಣ್ಣನ ಹೆಂಡತಿ; ಸಣ್ಣಯ್ಯನ ಹೆಂಡತಿ ಚಲುವಮ್ಮ ಹಾಗೂ ಈಕೆಯ ಮಕ್ಕಳಾದ ದುಪ್ಪಟೀಕಮೀಷನರ್ ಮತ್ತು ಶಿವು. ಇಷ್ಟೊಂದು ಸದಸ್ಯರ ಈ ಕುಟುಂಬ ಹೆಂಚು ಹೊದಿಸಿದ ಒಂದು ಮನೆ; ಹುಲ್ಲು ಹೊದಿಸಿದ ಮತ್ತೊಂದು ಮನೆ. ಇವುಗಳ ಜೊತೆಗೆ ಒಂದು ನೆರಕೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಕ್ಕಿರುವ ಆಸ್ತಿ 4 ಎಕರೆ ಜಮೀನು. ಒಂದಿಷ್ಟು ಕೋಳಿಗಳು. ಮನೆಯಲ್ಲಿ  ಆರ್ಥಿಕವಾಗಿ ಯಾವುದೇ ಭದ್ರತೆಯಿಲ್ಲ. ಕುಟುಂಬದ ಸದಸ್ಯರೆಲ್ಲರಿಗೆ ಉದ್ಯೋಗವೂ ಇಲ್ಲ. ಜಮೀನಿದ್ದರೂ ಮಳೆಗಳಿಲ್ಲದ ಕಾರಣ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಹಾಗಾಗಿ ಒಂದೊತ್ತಿನ ಕೂಳಿಗೂ ಒದ್ದಾಡುವಂತಹ ಸ್ಥಿತಿ. ಅಂದಿನ ಆಹಾರವನ್ನು ಅಂದೇ ಸಂಪಾದಿಸುವ ಒತ್ತಡ ಇಲ್ಲಿದೆ. ಮಂಡಕ್ಕಿ  ಕಾಪಿ ನೀರು ಈ ಕುಟುಂಬದ ಸಾಮಾನ್ಯ ಆಹಾರ. ಮನೆಯಲ್ಲಿ ಎಣ್ಣೆ ಕ್ಯಾನು, ಹಿಟ್ಟಿನ ಡಬ್ಬಿ, ಕಾಳಿನ ಚೀಲಗಳು ಇವೆಯಾದರೂ ಇವೆಲ್ಲವೂ ಖಾಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೊಟ್ಟೆಗಿಲ್ಲದ ಈ ಕುಟುಂಬದ ಸದಸ್ಯರಲ್ಲಿ ಕೆಲವರು ಅನಿವಾರ್ಯವಾಗಿ ಕಳವು ಮಾಡುವಂತಹ ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವರು ಇಂಥ ದುಸ್ಥಿತಿಯಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾರೆ. ಆಧುನಿಕ ಕಾಲದ ಮಹತ್ವದ ಬೆಳವಣಿಗೆಗಳಿಂದಾಗಿ ಈ ಕುಟುಂಬದ ಪ್ರಾಚೀನ ದುಡಿಮೆಯ ಮಾರ್ಗಗಳು ಮೂಲೆಗುಂಪಾಗಿವೆ. ಇದಕ್ಕೆ ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು ಎಂಬ ಕಾದಂಬರಿಯ ಮಾತು ಸಮರ್ಥನೆಯನ್ನು ಒದಗಿಸುತ್ತದೆ. ಈ ಎಲ್ಲಾ ವಿವರಗಳು ಸಾಕವ್ವನ ಕುಟುಂಬ   ಆರ್ಥಿಕವಾಗದ  ದುಸ್ಥಿತಿಯನ್ನು ದರ್ಶಿಸುತ್ತವೆ ಕುಟುಂಬದ ಈ ಸ್ಥಿತಿಗೆ ಕಾಲದ ಮಹಿಮೆ ಹಾಗೂ ಆ ಸಮಾಜದಲ್ಲಿದ್ದ ಜಮೀನ್ದಾರಿ ಪದ್ಧತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೇ ಕಾರಣ ಎಂಬುದನ್ನು ಮಾರ್ಮಿಕವಾಗಿ ಸೂಚಿಸಲಾಗಿದೆ. 
ಸಾಕವ್ವನ ಕೋಳಿ ಕಳವು
          ಇಡೀ ಕಾದಂಬರಿಯ ಕೇಂದ್ರ ಸಮಸ್ಯೆಯೆ ಸಾಕವ್ವನ ಕೋಳಿ ಕಳವಿನ ಪ್ರಸಂಗ. ಕಾದಂಬರಿ ಶುರುವಾಗುವುದೇ ಈ ಘಟನೆಯಿಂದ. ಸಾಕವ್ವ ತನ್ನ ಮನೆಯಲ್ಲಿದ್ದ ಕೋಳಿಗಳಲ್ಲಿ ಒಂದು ಕೋಳಿಯನ್ನು ದೇವರಿಗೆಂದು ಬಿಟ್ಟಿದ್ದು, ಅದೇ ಕೋಳಿಯನ್ನು ಯಾರೋ ಕದ್ದೊಯ್ಯುತ್ತಾರೆ. ಇದು ಸಾಕವ್ವನ ಮನಸ್ಸಿನಲ್ಲಿ ಹಲವಾರು ಆತಂಕಗಳನ್ನು ಹುಟ್ಟು ಹಾಕುತ್ತದೆ. ಇದ್ದ ಆಸ್ತಿಯ ಭಾಗವಾಗಿದ್ದ ಕೋಳಿ ಕಳುವಾಯಿತಲ್ಲ ಎಂಬ ಸಂಕಟ. ದೇವರಿಗೆ ಬಿಟ್ಟ ಕೋಳಿಯಾದ್ದರಿಂದ ದೇವರ ಅವಕೃಫೆಯಾಗುವುದೆಂಬ ಭಯ. ಈ ಹಿನ್ನೆಲೆಯ ಒಳಗೆ ಸಾಕವ್ವ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾಳೆ. ಅವುಗಳಲ್ಲಿ ನನ್ನ ಕೋಳಿ ಕದ್ದು ತಿಂದವರ ಮನೆ ಹಾಳಾಗಲಿ ಎಂಬುದು ಒಂದು. ಮತ್ತೊಂದು ದೇವರು ತನ್ನ ಪಾಲನ್ನು ತಾನು ರಕ್ಷಿಸಿಕೊಳ್ಳಲಾಗಲಿಲ್ಲ ಎಂಬ ದೇವರ ಅಸ್ತಿತ್ವವನ್ನು ಪ್ರಶ್ನಿಸುವಂಥ ಭಾವನೆ. ಅನಂತಮೂರ್ತಿ ಅವರು ತಮ್ಮದೊಂದು ಲೇಖನದಲ್ಲಿ ವಿವರಿಸಿರುವಂತೆ ಸಾಕವ್ವನ ಇಲ್ಲಿನ ನೋವು ಹುಂಜ ದೇವರದ್ದು ಎನ್ನುವುದಾಗಲಿ, ಬಾಳ ಬೆಲೆ ಬಾಳುವಂತಹದ್ದು ಎನ್ನುವುದಾಗಲಿ ಮುಖ್ಯವಾಗದೆ ಹುಂಜ ನನ್ನದು ಎನ್ನುವ ಹಕ್ಕುಸ್ವಾಮ್ಯ ಸೂಚಕ ಸಂಬಂಧಿಯಾದುದು. 
           ಕಳೆದ ಹುಂಜದ ಬಗ್ಗೆ ಸಾಕವ್ವನನ್ನು ಬಿಟ್ಟರೆ ಕುಟುಂಬದ ಮತ್ಯಾರು ತಲೆಕೆಡಿಸಿಕೊಂಡವರಿಲ್ಲ. ಹುಂಜ ಕಳೆದ ದಿನದಿಂದಲೇ ಸಾಕವ್ವ ತನ್ನ ಮಗನೋ, ಮಗಳೋ ಕಳೆದುಕೊಂಡವಳಂತೆ ವತರ್ಿಸುತ್ತಾಳೆ. ಮೊದಲ ದಿನ ಬರಬಹುದು ಎಂಬ ಆಶಾ ಭಾವನೆ ಸುಳ್ಳಾದ ನಂತರ ಸಾಕವ್ವ ಹುಚ್ಚಳಂತೆ ಕೊ... ಕೊ... ಬಾ... ಬಾ... ಎಂದು ಕೂಗುತ್ತಾ ಊರ ತುಂಬಾ ತಿರುಗುತ್ತಾಳೆ. ಸಿಕ್ಕ ಸಿಕ್ಕವರ ಮೇಲೆ ಅನುಮಾನ ಪಡುತ್ತಾಳೆ. ವಿಶೇಷವಾಗಿ ಸವತಿ ಕೆಂಪಮ್ಮನ ಮೇಲೆ ಬಲವಾದ ಅನುಮಾನ ಪಟ್ಟು ಅವಳ ತಿಪ್ಪೆಯನ್ನು ಕೆದರಿ ನೋಡುತ್ತಾಳೆ. ಮೊಮ್ಮಗ ಶಿವುನನ್ನು ಜೊತೆಗೆ ಕರೆದುಕೊಂಡು ಊರಿನ ಮನೆ ಮನೆಯಲ್ಲಿ ಏನು ಸಾರು ಮಾಡಿದ್ದಾರೆ ಎಂಬುದನ್ನು ಪರೀಕ್ಷಿಸುತ್ತಾಳೆ. ಸದಾ ಹುಂಜದ ಧ್ಯಾನನದಲ್ಲೇ ಇರುವ ಸಾಕವ್ವ ಕಳೆದ ಹುಂಜನನ್ನು ಪಡೆಯುವ ಹಂಬಲದಲ್ಲಿದ್ದಾಳೆ. ಜೊತೆಗೆ ಈ ವಿಷಯದ ಬಗ್ಗೆ ಕುಟುಂಬದ ಯಾವ ಸದಸ್ಯರು ಗಮನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಈ ಪ್ರಸಂಗವನ್ನು ಕೊನೆಗೊಳಿಸುವ ಕಾದಂಬರಿಯ ಕ್ರಮ ವಾಸ್ತವಸ್ಥಿತಿಗತಿಗೆ ಅನುಗುಣವಾಗಿದೆ. ಹುಂಜನನ್ನು ಹುಡುಕಲು ಮಾದರಿಗಾಗಿ ಸಾಕವ್ವನ ಮತ್ತೊಂದು ಕೋಳಿ ಪಡೆದು ಪೊಲೀಸರು ದೂಳೆಬ್ಬಿಸಿಕೊಂಡು ಜೀಪಲ್ಲಿ ತೆರಳುವ ದೃಶ್ಯ ಅತ್ಯಂತ ಧ್ವನಿಪೂರ್ಣವಾಗಿದೆ. ಒಂದು ಹುಂಜ ಕಳೆದುಕೊಂಡ ಸಾಕವ್ವ ಅದನ್ನು ಪಡೆಯುವುದಕ್ಕಾಗಿ ಮತ್ತೊಂದು ಅಂತಹದ್ದೇ ಹುಂಜವನ್ನು ಕಳೆದುಕೊಂಡು ಪಡುವ ಯಾತನೆ ಇಡೀ ದಲಿತ ಲೋಕದ ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ. 
ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಮೂಟೆ ಕಳುವು
       ಕಾದಂಬರಿಯಲ್ಲಿ ಬರುವ ಮತ್ತೊಂದು ಕಳುವಿನ ಪ್ರಸಂಗ ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಕಳವಿನ ಪ್ರಸಂಗ. ಬಂಡವಾಳಶಾಹಿ ಎತ್ತಪ್ಪ, ಸಾಕವ್ವನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲಿ ವಿರುದ್ಧ. ಬಡತನದ ಭಾಗವಾಗಿ ಸಾಕವ್ವನ ಕುಟುಂಬದ ಹಿರಿಮಗ ಕಾಳಣ್ಣ ಎತ್ತಪ್ಪನ ಮಿಲ್ಲಿನಿಂದ ಒಂದು ಕಡ್ಲೆಕಾಯಿ ಮೂಟೆಯನ್ನು ಹೊತ್ತು ತಂದು ಬೆಂಕಿ ಹಾಕಿ ಅದರ ಸುತ್ತ ತನ್ನ ಕುಟುಂಬದ ಸದಸ್ಯರೆಲ್ಲರನ್ನು ಕೂರಿಸಿಕೊಂಡು ತಿನ್ನುವ ಸಂದರ್ಭದಲ್ಲಿ ಅವರೆಲ್ಲರೂ ಸಾಹುಕಾರ್ ಎತ್ತಪ್ಪನ ಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಇವರ ಮಾತುಗಳಿಂದಲೇ ತಿಳಿದು ಬರುವ ಎತ್ತಪ್ಪನ ಅಂತಸ್ತು ಹೀಗಿದೆ: ಎತ್ತಪ್ಪನ ದನದ ಹಟ್ಟಿ, ಅಲ್ಲಿರೋ ದನ ಹಾಗೂ ಎಮ್ಮೆಗಳು ಉನ್ನತ ಸ್ಥಿತಿಯಲ್ಲಿವೆ. ಅಂದ ಮೇಲೆ ಮನೆ-ಮನುಷ್ಯರ ಬಗ್ಗೆ ಹೇಳುವುದೇ ಬೇಡ. ಇವರ ಮನೆಯ ಮಗಳ ಮದುವೆ ಅಂಥ ಎಲ್ಲಾ ಸೂಚನೆಗಳನ್ನು ನೀಡುತ್ತದೆ. ಇಂತಹವರ ಸ್ವತ್ತು ಕಳುವಾದಾಗ ವ್ಯವಸ್ಥೆಯ ಭಾಗವಾದ ಪೊಲೀಸ್ ವ್ಯವಸ್ಥೆ ಸ್ಪಂಧಿಸುವ ರೀತಿ ಕಾನೂನು ಇದ್ದವರಿಗೊಂದು ಇಲ್ಲದವರಿಗೆ ಇನ್ನೊಂದು ಎಂಬ ನಾಣ್ನುಡಿಯನ್ನು ನೆನಪಿಸುತ್ತದೆ. 
        ಈ ಸಂದರ್ಭದಲ್ಲಿ ಬೆಂಕಿಯ ಮುಂದೆ ಕುಳಿತು ಸಾಕವ್ವನ ಕುಟುಂಬದ ಸದಸ್ಯರು ಚರ್ಚಿಸುವ ವಿಷಯಗಳು ಅತ್ಯಂತ ಪ್ರಮುಖವಾಗಿವೆ. ಮುಖ್ಯವಾಗಿ ಸಾಹುಕರ್ ಎತ್ತಪ್ಪನ ಕುಟುಂಬದಂತೆ ಶ್ರೀಮಂತ ಸ್ಥಿತಿಗೆ ತಲುಪುವ ಕನಸು ಕಾಣುತ್ತಾರೆ. ಅಷ್ಟೆ ಅಲ್ಲ ಎತ್ತಪ್ಪನ ದನ-ಎಮ್ಮೆಗಳು ಆನೆಗಳಂತಿದ್ದು ಅವುಗಳಲ್ಲಿ ಒಂದು ಸತ್ತರೆ ಸಾಕು ನಮ್ಮ ಇಡೀ ಹಟ್ಟಿ ಸಂತೃಪ್ತವಾಗುತಿತ್ತು ಎಂಬ ತತ್ಕ್ಷಣದ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿನ ಕದ್ದು ತಂದ ಕಡ್ಲೆಕಾಯಿಯಲ್ಲೇ ಸ್ವಲ್ಪ ಭಾಗವನ್ನು ಹಸಿದ ಇತರೆ ವ್ಯಕ್ತಿಗಳಿಗೂ ನೀಡುತ್ತಾರೆ. ಗುರುಸಿದ್ಧ ಅಸ್ಪೃಶ್ಯತೆಯ ವಿರುದ್ಧದ ತನ್ನ ಹೋರಾಟದ ವಿವರಗಳನ್ನು ನೀಡುವುದು ಕೂಡ ಇಲ್ಲಿಯೇ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ಕಾದಂಬರಿಯ ಈ ಸಂದರ್ಭ ಓದುಗರಲ್ಲಿ, ವಿಮರ್ಶಕರಲ್ಲಿ ಹಲವು ರೀತಿಯ ವಾಗ್ವಾದಗಳನ್ನು ಎಬ್ಬಿಸಿದೆ. ಮುಖ್ಯವಾದ ಅಂಥ ಒಂದೆರಡು ಅಭಿಪ್ರಾಯಗಳನ್ನು ಗಮನಿಸುವುದಾದರೆ,ಅನಂತಮೂರ್ತಿ  ಅವರು ಬೆಂಕಿ ಮುಂದೆ ಕುಟುಂಬದ ಎಲ್ಲಾ ಸದಸ್ಯರು ಕದ್ದು ತಂದ ಕಡ್ಲೆಕಾಯಿಯನ್ನು ತಿನ್ನುವ ಈ ಸಂದರ್ಭ ಯಜ್ಞ ಕಾರ್ಯದಂತೆ ಕಾಣುತ್ತದೆ ಎನ್ನುತ್ತಾರೆ. ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮ.ನ.ಜವರಯ್ಯ ಅವರು ಇಂಥ ಅತಿರೇಕದ ಹೋಲಿಕೆಗಳಿಗಿಂತ ವಾಸ್ತವ ನೆಲೆಯಲ್ಲಿ ನೋಡಬೇಕೆಂದು ಅಭಿಪ್ರಾಯ ಪಟ್ಟು ಅಂಥ ವಾಸ್ತವ ನೆಲೆಯಲ್ಲಿ ಮೂರು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಅವುಗಳಲ್ಲಿ ಮೊದಲನೆಯದಾಗಿ ಉಳ್ಳವರ ಸಂವೃದ್ಧಿಗಾಗಿ ದುಡಿದು ತಾವು ಮಾತ್ರ ಉಪವಾಸ ಬೀಳಬೇಕೆಂಬ ಅವ್ಯಕ್ತ ಆಕ್ರೋಶ ಒಡಲ ಬಡಬಾಗ್ನಿಯಾಗಿ ಕಡ್ಲೆಕಾಯಿ ನಾಮಾವಶೇಷವಾಯಿತು. ಎರಡನೆಯದಾಗಿ, ಕಡಲೆಯ ಕಾಯಿಯ ಒಂದು ಸಿಪ್ಪೆಯೂ ಸಿಗದಿದ್ದುದು, ದುಡಿದ ಒಡಲಿಂದ ಎದ್ದ ಕಿಚ್ಚಿಗೆ ಉಳ್ಳವರ ಸಿರಿತನ, ಧರ್ಪ, ಅನ್ಯಾಯಗಳೆಲ್ಲವೂ ಕಡಲೆ ಕಾಯಿಯಂತೆ ಸುಟ್ಟು ಬೂದಿಯಾದವು. ಮೂರನೆಯದಾಗಿ, ಕಡ್ಲೆಕಾಯಿಯನ್ನು ಹಸಿದ ಒಡಲುಗಳೆಲ್ಲ ಸುತ್ತುವರೆದು ತಿನ್ನುವ ಚಿತ್ರದಿಂದ ಹಸಿವು ಮನೆ ಮಂದಿಯನ್ನೆಲ್ಲ ಕಿತ್ತು ತಿಂದಿತು ಅಥವಾ ಮನೆಮಂದಿಯೆಲ್ಲ ಸೇರಿ ಹಸಿವನ್ನು ಕಿತ್ತು-ಕಿತ್ತು ತಿಂದರು ಎಂಬ ಧ್ವಂದ್ವಾರ್ಥ ಇರಬಹುದು. ಹೀಗೆ ಹಲವಾರು ಅರ್ಥಗಳನ್ನು ಪ್ರಸ್ತುತ ಪ್ರಸಂಗದಿಂದ ಅರಿಯಬಹುದಾಗಿದೆ.
ಕಥನದ ಕೆಲವು ಪ್ರಮುಖ ಪಾತ್ರಗಳು ಮತ್ತು ಘಟನೆಗಳು
ಒಡಲಾಳ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ವಿಶೇಷವಿದೆ. ಇಲ್ಲಿ ಬರುವ ಪಾತ್ರಗಳೆಂದರೆ: ಮನೆಯ ಯಜಮಾನಿ ಸಾಕವ್ವ, ಹಿರಿಮಗ ಕಾಳಣ್ಣ ಮತ್ತು ಆತನ ಮಡದಿ, ಕಿರಿಮಗ ಸಣ್ಣಯ್ಯ ಮತ್ತು ಆತನ ಹೆಂಡತಿ ಚಲುವಮ್ಮ ಹಾಗೂ ಇವರ ಮಕ್ಕಳು, ಮದುವೆಯಾದರೂ ಗಂಡನ ಬೇಜವ್ಬಾರಿ ಕಾರಣಕ್ಕೆ ತವರು ಮನೆ ಸೇರಿರುವ ಗೌರಮ್ಮ ಹಾಗೂ ಆಕೆಯ ಮಗ ಶಿವು, ಮತ್ತೊಬ್ಬ ದುಪ್ಟಿಕಮಿಷನರ್, ಮನೆಯ ಕಿರಿಮಗಳು ಪುಟ್ಟಗೌರಿ, ಕಿರಿಮಗ ಗುರುಸಿದ್ಧ. ಇವರಲ್ಲದೆ ಪೊಲೀಸ್ ರೇವಣ್ಣ, ಸಾಹುಕಾರ್ ಎತ್ತಪ್ಪ ಮೊದಲಾದವರು. ಇಷ್ಟು ಪಾತ್ರಗಳಲ್ಲಿ ನಮ್ಮ ಗಮನ ಸೆಳೆಯುವ ಪಾತ್ರಗಳಾಗಿ ಸಾಕವ್ವ, ಶಿವು, ಪುಟ್ಟಗೌರಿ, ಗುರುಸಿದ್ಧ ಅವರುಗಳು ಕಂಡುಬರುತ್ತಾರೆ.
ಸಾಕವ್ವ
ಅತ್ಯುತ್ತಮ ಪಾಲಕಿ-ಪೋಷಕಿ. ಈಕೆಯ ಸಿಟ್ಟು-ಸೆಡವು-ದ್ವೇಷಗಳೆಲ್ಲ ಕುಟುಂಬದ ಉದ್ಧಾರ ಸೂತ್ರಗಳು. ವೃದ್ಧಾಪ್ಯದಲ್ಲೂ ಛಲಗಾರ್ತಿ ಸೊಸೆ ಚಲುವಮ್ಮನ ಜೊತೆ ಆಸ್ತಿನೆಪದಲ್ಲಿ ಮಾಡಿದ ಜಗಳದಲ್ಲಿ, ಕಳೆದ ಹುಂಜಕ್ಕಾಗಿ ಪರದಾಡಿದ ಕ್ರಮದಲ್ಲಿ ಸವತಿ ಕೆಂಪಮ್ಮನ ಮೇಲಿನ ದ್ವೇಷದಲ್ಲಿ ಇವೇ ಮೊದಲಾದ ಪ್ರಸಂಗಗಳಲ್ಲಿ ಸಾಕವ್ವನ ಅಂತರಾಳ ಸ್ಪಷ್ಟವಾಗುತ್ತದೆ.
ಗುರುಸಿದ್ಧ
ಮನೆಯ ಹಕ್ಕುದಾರನಾದರೂ ಕುಟುಂಬಕ್ಕೆ ಅತಿಥಿ, ಗಾರೆ ಕಾಂಟ್ರ್ಯಾಕ್ಟು, ರೇಷ್ಮೆಗೂಡು ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದಾನೆ. ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಗುರುಸಿದ್ಧ ವ್ಯವಸಾಯದಂತಹ ಸಾಂಪ್ರದಾಯಿಕ ವೃತ್ತಿಗಳಿಂದ ನಿದರ್ಿಷ್ಟ ವರಮಾನವಿಲ್ಲವೆಂದು ತೀಮರ್ಾನಿಸಿದ್ದಾನೆ. ಕೈಗೆ ವಾಚು, ಓಡಾಡಲು ಸೈಕಲ್ ಹೊಂದಿರುವ ಈತ ಪಟ್ಟಣದ ಮೇಲ್ಜಾತಿಗೆ ಸೇರಿದ ಶಿವಪ್ಪನ ಹೋಟೆಲಿನಲ್ಲಿ ಸಮಾನ ಸತ್ಕಾರ ಪಡೆಯಲೆತ್ನಿಸುತ್ತಿದ್ದಾನೆ. ಪೇಟೆಯ ಸಂಪರ್ಕದ ಪರಿಣಾಮ ಬೆಲ್ಲದ ಕಾಪಿಗಿಂತ ಸಕ್ಕರೆ ಟೀಗೆ ಒಗ್ಗಿಹೋಗಿದ್ದಾನೆ. ಇಂಥ ಕೆಲವು ಕಾರಣಗಳಿಗಾಗಿಯೇ ಕುಟುಂಬದಿಂದ ದೂರ. ಇದೇನೆ ಇದ್ದರೂ ಮನೆಯವರಿಗೆ ಈತ ಹೀರೋ ಆಗಿರುವುದಂತೂ ಸತ್ಯ. ಸಾಕವ್ವನ ಮನೆಯನ್ನು ಕಡಲೆ ಕಾಯಿಗಾಗಿ ತಲಾಶ್ ಮಾಡುವ ಸಂದರ್ಭದಲ್ಲಿ ಈತನ ಕೆಂಗಣ್ಣು ಪೊಲೀಸರಲ್ಲಿ ನಡುಕ ಹುಟ್ಟಿಸುತ್ತದೆ. ಗುರುಸಿದ್ಧನ ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸಿದರೆ ದಲಿತರ ಉದ್ದಾರಕ್ಕಾಗಿ ಉದಯಿಸಲಿದ್ದ ದಲಿತ ಸಂಘರ್ಷ ಸಮಿತಿಯ ತತ್ವಗಳ ಮೊಳಕೆಗಳು ಕಾಣಿಸುತ್ತವೆ. 
ಪಟ್ಟಗೌರಿ
ಈ ಮನೆಯ ಸಂಕಷ್ಟ ಕೇಳಲಾರದೆ ನಾನು ಎಂದು ಈ ಮನೆಯನ್ನು ಬಿಟ್ಟೇನು ಎಂಬ ಭಾವನೆಯೊಳಗೆ ಈಕೆ ಬದುಕುತ್ತಿದ್ದಾಳೆ. ಮನೆಯ ಗೋಡೆಯ ಮೇಲೆ ಬಣ್ಣದಲ್ಲಿ ನವಿಲು ಬಿಡಿಸುವ ಪುಟ್ಟಗೌರಿ ಶೂನ್ಯದಲ್ಲಿ ಏನನ್ನಾದರೂ ಸೃಷ್ಟಿಸುವ ಭಾಗವಾಗಿ ಕಂಡುಬರುತ್ತಾಳೆ. ಅಷ್ಟೇ ಅಲ್ಲ ಕಡಲೆಕಾಯಿ ತಿನ್ನಲು ಮಾರಿಗುಡಿಯಲ್ಲಿ ನಾಟಕದ ತಾಲೀಮು ಮಾಡುತ್ತಿದ್ದ ಗುರುಸಿದ್ಧನನ್ನು ಕರೆತರಲು ಶಿವೂನ ಜೊತೆಗೂಡಿ ಹೋಗಿ ಬಂದುದು ಇವಳ ಕ್ರಿಯಾ ಶೀಲತೆಯನ್ನು ಸೂಚಿಸುತ್ತದೆ.
ಶಿವು
ಗೌರಮ್ಮನ ಎರಡನೇ ಮಗನಾದ ಶಿವು ಶಾಲೆಗೆ ಹೋಗುತ್ತಿದ್ದಾನೆ. ಅಕ್ಷರಸ್ಥನಾಗಿ ಮುಂದಿನ ಕುಟುಂಬದ ಬೆಳಕಾಗುವ ಸೂಚನೆಯಿದೆ. ಅದಕ್ಕಾಗಿಯೇ ಸಾಕವ್ವ ತನ್ನ ಕಳೆದುಹೋದ ಹುಂಜವನ್ನು ಹುಡುಕಲು ಶಿವೂನ ಸಹಾಯ ಪಡೆಯುತ್ತಾಳೆ. ಹಾಗೆಯೇ ಅಡವಿಟ್ಟ ಪಾತ್ರೆಗಳ ವ್ಯವಹಾರದ ಲೆಕ್ಕ ಹೇಳುವುದಕ್ಕೂ ಶಿವೂ ಬೇಕಾಗಿದ್ದಾನೆ. ಪುಟ್ಟಗೌರಿಯು ಬಿಡಿಸುವ ನವಿಲುಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲಂಥವನು ಆಗಿದ್ದಾನೆ. ಒಟ್ಟಾರೆ ದಲಿತ ಕುಟುಂಬಗಳಿಗೆ ಶಿಕ್ಷಣ ಬೆಳಕಾಗುತ್ತದೆ ಎಂಬ ಆಶಯ ಇಲ್ಲಿದೆ.
ಪುಟ್ಟಗೌರಿ ನವಿಲು ಚಿತ್ರ ಬಿಡಿಸುವ ಸಂದರ್ಭ
         ಪುಟ್ಟಗೌರಿ ತನ್ನ ಮನೆಯ ಗೋಡೆಯ ಮೇಲೆ ನವಿಲಿನ ಚಿತ್ರ ಬಿಡಿಸುತ್ತಾಳೆ. ಚಿತ್ರ ಬಿಡಿಸಿದ ಕ್ರಮ ಇಲ್ಲಿ ಗಮನಾರ್ಹ. ಪ್ರಸ್ತುತ ವ್ಯವಸ್ಥೆಯೊಳಗೆ ಯಾವುದೇ ಚಿತ್ರಬಿಡಿಸುವಾಗಲೂ ಮೇಲಿನಿಂದ ಕೆಳಕ್ಕೆ ಅಂದರೆ ತಲೆಯಿಂದ ಪಾದಕ್ಕೆ ಬರುವುದು ಸಂಪ್ರದಾಯ. ಈ ಕ್ರಮ ಸಮಾಜದ ಏಣಿ-ಶ್ರೇಣಿ ವ್ಯವಸ್ಥೆಯನ್ನು ಸಮಥರ್ಿಸುವ ಭಾಗವೆನ್ನಬಹುದು. ಒಂದು ವ್ಯವಸ್ಥೆಯ ಪ್ರಕಾರ ಶಿರ ಶ್ರೇಷ್ಟಾಂಗ ಆದ್ದರಿಂದಲೇ ಶಿರಕ್ಕೆ ಮೊದಲ ಸ್ಥಾನ. ಪಾದ ಕನಿಷ್ಟ ಹಾಗಾಗಿಯೇ ಪಾದಗಳಿಗೆ ಕೊನೆಯ ಸ್ಥಾನ. ಆದರೆ ಪುಟ್ಟಗೌರಿ ತನ್ನ ನವಿಲಿನ ಚಿತ್ರವನ್ನು ಪಾದದಿಂದಲೇ ಅರಂಭಿಸುತ್ತಾಳೆ. ವ್ಯವಸ್ಥೆಯ ತಿಳುವಳಿಕೆಯನ್ನು ಒಡೆದುಹಾಕಿ ಪಾದಕ್ಕೆ ಮೊದಲ ಸ್ಥಾನ ಕಲ್ಪಿಸುವ ಆಲೋಚನೆ ಇಲ್ಲಿ ಪ್ರಧಾನವಾಗಿರುವಂತಿದೆ. ಇಡೀ ಶರೀರವನ್ನು ಹೊತ್ತು ತಿರುಗುವ ಪಾದಗಳಿಗೆ ಮೊದಲು ಸ್ಥಾನ ನೀಡಬೇಕೆಂಬ ಇಲ್ಲಿನ ಆಶಯಕ್ಕೆ ಸಾಮಾಜಿಕ ಏಣಿ-ಶ್ರೇಣಿ ತತ್ವವನ್ನು ತಿರುಗ-ಮುರುಗಾಗಿಸುವ ಕಲ್ಪನೆಯಿದೆ. ಹಾಗೆಯೇ ಆ ಮನೆಯನ್ನು ಪೊಲೀಸರು ತಲಾಶ್ ಮಾಡುವ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರೂ ಹೆದರಿ ನಿಂತಿರುವಾಗ ಗೋಡೆಯ ಮೇಲಿನ ನವಿಲು ಚಿತ್ರಗಳು ನರ್ತಿಸುತ್ತವೆ. ಈ ನರ್ತನವನ್ನು ವಿಶೇಷವಾಗಿ ಶಿವು ಮಾತ್ರ ಗಮನಿಸುತ್ತಾನೆ. ಇಂಥ ಎಲ್ಲಾ ಸೂಕ್ಷ್ಮಗಳು ಲೇಖಕರ ಸಮಕಾಲೀನ ಸ್ಪಂದನೆಯನ್ನು ಸೂಚಿಸುತ್ತವೆ.
ಶಿವು ಮತ್ತು ಸಾಕವ್ವನ ನಡುವಿನ ಒಂದು ಚರ್ಚೆ
             ಸಾಕವ್ವ ತನ್ನ ಹುಂಜವನ್ನು ಕಳೆದ ಆ ಹುಂಜವನ್ನು ಹುಡುಕುವ ಹಲವು ಪ್ರಯತ್ನಗಳನ್ನು ನಡೆಸುತ್ತಾಳೆ. ಅಂಥ ಪ್ರಯತ್ನಗಳಲ್ಲಿ ಶಿವುವನ್ನು ಕರೆದುಕೊಂಡು ಈ ಹುಂಜವನ್ನು ಪತ್ತೆಹಚ್ಚಲು ಹೊರಡುತ್ತಾಳೆ. ಆ ಸಂದರ್ಭದಲ್ಲಿ ಶಿವು ಮತ್ತು ಸಾಕವ್ವನ ನಡುವೆ ಯಮಲೋಕ ಕೇಂದ್ರಿತವಾದ ಚರ್ಚೆಯೊಂದು ನಡೆಯುತ್ತದೆ. ಇವರಿಬ್ಬರೂ ಹುಂಜ ಹುಡುಕಲು ಹೊರಟಾಗ ಸಂಜೆಗತ್ತಲು. ಶಿವು ನನಗೆ ಹೆದರಿಕೆಯಾಗುತ್ತದೆ ನಾನು ಬರಲಾರೆ ಎನ್ನುತ್ತಾನೆ. ಅದಕ್ಕೆ ಸಾಕವ್ವ ನಾನಿದ್ದೀನಲ್ಲ ಏತಕ್ಕೆ ಭಯ ಯಮದೂತರು ಬಂದರು ನಾವು ಹೆದರಬೇಕಿಲ್ಲ ಎಂಬ ಧೈರ್ಯವನ್ನು ತುಂಬುತ್ತಾಳೆ. ಹಾಗೆಯೇ ಇವರಿಬ್ಬರ ಮುಂದುವರಿದ ಚಚರ್ೆಯಲ್ಲಿ ಸಾಕವ್ವ, ಯಮದೂತರು ಬಂದು ನಮ್ಮನ್ನು ಎಳೆದೊಯ್ಯುತ್ತೇವೆ ಎಂದರೆ ನನ್ಯಾಕ ಎಳ್ಕಂಡು ವೋದೀರಿ ಮೂದೇವ್ಗಳ ನನೇ ಬರ್ತೀನಿ ನಡೀ ಅಂತೀನಿ. ಅವರಿಗಿಂತ ಮೊದಲು ಯಮಧರ್ಮನ ಮುಂದೆ ನಾನೇ ನಿಲ್ತೀನಿ ಎಂದಾಗ ಶಿವು ಅದ್ಕೂನೂ ನಿಂಗ ಹೆದ್ರಕ ಆಗಲ್ವಾ ಎಂಬ ಮುಗ್ದ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಸಾಕವ್ವ ಅಯ್ ನರಲೋಕದಲ್ಲಿ ನಾನು ಪಟ್ಟ ಕಷ್ಟಕ್ಕಿಂತ ಆ ಸೀಕ್ಸ ಎಲ್ಲಾದ್ದು ತಗಾ ಅವ್ನ ಜೊತಲೂ ಅದ್ನೆ ಅಂತೀನಿ ಕನಾ ನನ್ನ ಅಂಥ ಮಾತನ್ನು ಕೇಳಿದ ಯಮ ನನ್ನ ಧೈರ್ಯ ಮೆಚ್ಚಿ ಏನುವರ ಬೇಕು ಕೇಳು ಅಂಥಾನೆ ಆಗ ನಾನು ನೋಡು ಸ್ವಾಮಿ ನನ್ನ ಮೊಮ್ಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರ ಕೊಡು ಅಷ್ಟೆ ಸಾಕು ಅಂತೀನಿ ಎನ್ನುತ್ತಾಳೆ. ಈ ಪ್ರಸಂಗದಲ್ಲಿ ಪ್ರಮುಖವಾದ ಎರಡು ಅಂಶಗಳನ್ನು ಗಮನಿಸಿಬೇಕು. ಒಂದು: ನರಲೋಕದ ಕಷ್ಟಗಳಿಗಿಂತ ಯಮ ಲೋಕದ ಕಷ್ಟಗಳು ಏನೇನೂ ಅಲ್ಲ ಎನ್ನುವ ಮಾತು ದಲಿತರ ಬದುಕು ನರಕಕ್ಕಿಂತ ಹೀನಾಯವಾದುದು ಎಂಬ ವಾಸ್ತವ ಸತ್ಯವನ್ನು ಮನವರಿಕೆ ಮಾಡುವ ಪ್ರಯತ್ನ  ಇಲ್ಲಿದೆ. ಎರಡು: ಯಮಧರ್ಮನಲ್ಲಿ ಸಾಕವ್ವ ನನ್ನ ಮೊಮ್ಮಗ ರಾಜ್ಯಭಾರ ಮಾಡಬೇಕೆಂಬ ಬೇಡಿಕೆ ನಿಜ ಜೀವನದಲ್ಲಿ ಬೇಕಾಗಿರುವ ಆದರೆ ಅಸಾಧ್ಯವೆನಿಸುವ ಈ ಕನಸು ದಲಿತರೆಲ್ಲರ ಸ್ವಾಭಾವಿಕ ಕನಸು ಎಂಬುದನ್ನು ತಿಳಿಯಬಹುದಾಗಿದೆ. ಲೇಖಕರು ಪ್ರಜ್ಞಾಪೂರ್ವಕವಾಗಿ ಇಂಥ ಸನ್ನಿವೇಶಗಳನ್ನು ಸೃಷ್ಟಿಸುವುದರ ಮೂಲಕ ದಲಿತರ ವಿಮೋಚನೆಯ ಹಾದಿಗಳನ್ನು ಹುಡುಕುತ್ತಿದ್ದಾರೆ ಎನ್ನಬಹುದು.
ಕಥನದ ಭಾಷೆ 
        ಕನ್ನಡ ಸಾಹಿತ್ಯಕ್ಕೆ ದಲಿತ ಸಾಹಿತ್ಯವು ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿರುವುದು ನಮೆಲ್ಲರಿಗೂ ತಿಳಿದ ವಿಷಯ. ದಲಿತ ಕುಟುಂಬಗಳ ದಿನ ನಿತ್ಯದ ವಿಷಯಗಳು ಹಾಗೂ ಪ್ರಾದೇಶಿಕ ಭಾಷೆ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದಿದ್ದು, ಸಾಹಿತ್ಯವು ಮುಖ್ಯ ವಾಹಿನಿಯ ವಸ್ತು ಮತ್ತು ಭಾಷೆಯ ಮೇಲೆ ಅವಲಂಬಿಸಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ. ದೇವನೂರು ಮಹದೇವ ಅವರ ಈ ಕಥನದಲ್ಲಿ ಮೈಸೂರಿನ ಪ್ರಾದೇಶಿಕ ಭಾಷೆಯ ಬಳಕೆಯಾಗಿದ್ದು ಸಂವಹನಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ದಿನ ನಿತ್ಯದ ಬಳಕೆಯ ಭಾಷೆ ಇದ್ದಾ ಹಾಗೆಯೇ ಬಳಕೆಗೊಂಡಿದೆ. ತಿಪ್ಗ ಬಂದಿದ್ದಿಕಾ ಕೂಸು ಅಷ್ಮಿಯಾ, ತಗಾ ಅದ್ಯಾರೊ ಒಬ್ಬಳು ಕುಟ್ಟೋ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ, ನಿಂಗೆ ಹೆದ್ರಕ ಆಗಲ್ವಾ, ಇಂಥ ಭಾಷೆಯ ಮೂಲಕ ದಲಿತರ ಸಮುದಾಯಗಳ ಬಳಕೆಯ ಭಾಷೆ ಕಂಡುಬರುತ್ತದೆ.
             ಒಟ್ಟಾರೆ ದೇವನೂರು ಮಹಾದೇವ ಅವರ ಒಡಲಾಳ ದಲಿತ ಲೋಕದ ಚಿತ್ರಣವನ್ನು ನೀಡುತ್ತಲೆ ಅವರ ಬದುಕಿನ ದುರಂತಗಳನ್ನು ಅನಾವರಣ ಮಾಡಿದ್ದಾರೆ. ದಲಿತರ ದುರಂತ ಸ್ಥಿತಿಯೊಳಗೆ ಇರುವ ಅವರ ಸೃಜನಶೀಲತೆಯ ಕಡೆಗೂ ಬೆರಳು ತೋರಿಸಿದ್ದಾರೆ.

ಪರಾಮರ್ಶನ ಗ್ರಂಥಗಳು
1. ದೇವನೂರು ಮಹಾದೇವ ಅವರ ಕೃತಿಗಳು, 1997, ಪತ್ರಿಕಾ ಪ್ರಕಾಶನ, ಬೆಂಗಳೂರು.
2. ಯಾರ ಜಪ್ತಿಗೂ ಸಿಗದ ನವಿಲುಗಳು, 2000 ಸಂ: ರವಿಕುಮಾರ್.ನ. ಅಭಿನವ, ಬೆಂಗಳೂರು.

  - ಡಾ. ಎಸ್.ಎಂ. ಮುತ್ತಯ್ಯ        

Saturday, 23 June 2012

ಪುರಾಣ ಪರಿಕಲ್ಪನೆ : ಶಿಷ್ಟ - ಪರಿಶಿಷ್ಟ ದೃಷ್ಟಿಕೋನಗಳು


ಡಾ.ಎಸ್.ಎಂ. ಮುತ್ತಯ್ಯ

                  ಪುರಾಣ ಎಂಬುದು ಬರೀ ಶಬ್ಧವಲ್ಲ. ಶಬ್ಧದಾಚೆಗೆ ಸಮಾಜದಲ್ಲಿ ತನ್ನ ಪ್ರಭಾವಳಿಯನ್ನು ಸೃಷ್ಟಿಸಿದ ಶಕ್ತಶಾಲಿಯಾದ ಒಂದು ಪರಿಕಲ್ಪನೆಯಾಗಿದೆ. ಹಾಗಾಗಿ ಪುರಾಣ ಎಂದರೇನು? ಅದರ ಸೃಷ್ಟಿಯ ಹಿಂದಿನ ಉದ್ದೇಶ ಯಾವುದು? ಅದರ ಬಗ್ಗೆ ಶಿಷ್ಟ - ಪರಿಶಿಷ್ಟ ಸಮುದಾಯಗಳಲ್ಲಿ ಪ್ರಚಲಿತವಿರುವ ಅರ್ಥ ಮತ್ತು ಬಳಕೆಯ ಸಾಧ್ಯತೆಗಳೇನು? ಎಂಬಿತ್ಯಾದಿ ವಿಷಯಗಳನ್ನು ವಿವರಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

 ಪುರಾಣದ ಅರ್ಥ ಮತ್ತು ಸ್ವರೂಪ

       'ಪುರಾಣ'ವು ಆಂಗ್ಲಭಾಷೆಯ 'Myth'ನ ಜೊತೆ ಸಮೀಕರಣಗೊಂಡಿದೆ. ಪುರಾಣವನ್ನು ಪುರಾ=ನವ=ಪುರಾಣ ಎಂಬುದಾಗಿ ವಿಭಜಿಸಿ ಅರ್ಥೈಯಿಸಲಾಗಿದೆ. 'ಪುರಾ' ಎಂದರೆ ಪುರಾತನವಾದುದು ಎಂತಲೂ 'ನವ' ಎಂದರೆ ನಿತ್ಯನೂತನವಾದುದು ಎಂತಲೂ ಹೇಳಲಾಗಿದೆ. ಹಾಗಾಗಿ ಪುರಾಣ ಎಂಬುದು ಭಾಷಿಕ ಅಭಿವ್ಯಕ್ತಿಗೆ ಒಳಪಟ್ಟ ಒಂದು ದೀರ್ಘನಿರೂಪಣೆ. ಪ್ರಾಚೀನ ಮಾನವ ತನ್ನ ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಹಾಗೂ ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಕಟ್ಟಿಕೊಂಡ ಕಾಲ್ಪನಿಕ ಕಥೆಗಳು ಇಲ್ಲಿವೆ. ಜೊತೆಗೆ ಪೂಜ್ಯ, ಗೌರವಯುತ ವ್ಯಕ್ತಿಗಳ, ದೈವಗಳ, ಸಾಂಸ್ಕೃತಿಕ ನಾಯಕರ ಜೀವನ ವಿವರಗಳು ಹಾಗೂ ಜನ ಸಮುದಾಯಗಳ ನಡುವೆ ಬದುಕಿರುವ ಧಾರ್ಮಿಕ ನಂಬಿಕೆಗಳು, ಆಚರಣೆ ಸಂಪ್ರದಾಯಗಳು ಪ್ರಧಾನವಾಗಿವೆ. ಇಂಥ ಸಂಗತಿಗಳನ್ನು ಅದ್ಭುತ ಶೈಲಿಯಲ್ಲಿ ವಿವರಿಸುವ ಮತ್ತು ಸಮರ್ಥಿಸುವ ಕಥನಗಳಾಗಿಯೂ ಪುರಾಣಗಳು ಕಾರ್ಯನಿರ್ವಹಿಸುತ್ತವೆ. ಒಂದು ದೃಷ್ಟಿಯಲ್ಲಿ ವಿಜ್ಞಾನ ಪೂರ್ವಯುಗದ ವಿಜ್ಞಾನಗಳು. 

   ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಊಹಾತ್ಮಕ ನೆಲೆಯಿಂದ ವಿವರಿಸುವಂತಹವು. ಈ ದೃಷ್ಟಿಯಿಂದ ನೋಡಿದಾಗ ಪುರಾಣಗಳ ವಸ್ತು ಏನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ವಿಚಾರದಲ್ಲಿ ಅಮರಕೋಶ ಹೇಳಿದ ಮಾತು ಗಮನಾರ್ಹ. 
                                                            ಸರ್ಗಶ್ಚ ಪ್ರತಿಸರ್ಗಶ್ಚವಂಶೋ ಮನ್ವಂತರಾಣಿ ಚ
                                                           ವಂಶಾನು ಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ      ಎನ್ನುತ್ತದೆ. 

  ಅಂದರೆ ಪುರಾಣವೆನ್ನುವುದು ಸ್ವರ್ಗ, ಪ್ರತಿಸ್ವರ್ಗ, ವಂಶ, ಮನ್ವಂತರ ಮತ್ತು ವಂಶಾನುಚರಿತೆ ಎಂಬ ಐದು ಲಕ್ಷಣಗಳುಳ್ಳದ್ದು. ಇವುಗಳಲ್ಲಿ ಸ್ವರ್ಗ ಎಂದರೆ ಜಗತ್ತಿನ ಮೂಲಸೃಷ್ಟಿ; ಪ್ರತಿಸ್ವರ್ಗ ಎಂದರೆ ಬ್ರಹ್ಮನಿಂದಾದ ಜಗತ್ಸೃಷ್ಟಿ; ವಂಶವೆಂದರೆ ಪ್ರಾಚೀನ ಕಾಲದಿಂದ ಬಂದ ದೇವತೆಗಳು, ಋಷಿಗಳು, ಮಾನವರು; ಮನ್ವಂತರ ಎಂದರೆ ಮನುಗಳ ಕಾಲ; ವಂಶಾನುಚರಿತ್ರೆ ಎಂದರೆ ಬೇರೆ ಬೇರೆ ವಂಶಗಳಲ್ಲಿ ಬಂದ ರಾಜಾಧಿರಾಜರ ಚರಿತ್ರೆ ಎಂದರ್ಥವಿದೆ. ಈ ಮೇಲಿನ ಐದು ಮುಖ್ಯ ನೆಲೆಗಳೇ ಪುರಾಣದ ವಸ್ತುಗಳು. 
                ಮೊದಲಿಗೆ, ಇಡೀ ಪುರಾಣಗಳನ್ನು ಲಿಖಿತ ಹಾಗೂ ಮೌಖಿಕವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವೆರಡೂ ಗುಂಪುಗಳು ಸ್ಪಷ್ಟವಾದ ಭಿನ್ನತೆಗಳನ್ನು ರೂಢಿಸಿಕೊಂಡಿರುತ್ತವೆ. ಇನ್ನು ಪುರಾಣಗಳಲ್ಲಿ ಸೃಷ್ಟಿಪುರಾಣಗಳು, ಆಕಾಶಕಾಯ ಮತ್ತು ಮನುಷ್ಯ ಚಟುವಟಿಕೆ ಕುರಿತ ಪುರಾಣಗಳು, ಸಾವಿನ ನಂತರದ ಜಗತ್ತನ್ನು ಕುರಿತ ಪುರಾಣಗಳು ಎಂಬಿತ್ಯಾದಿಯಾಗಿ ವಿಂಗಡಿಸಿಕೊಳ್ಳಬಹುದು. ಇದೇ ಹಿನ್ನೆಲೆಯಲ್ಲಿ ಎಲ್.ಆರ್. ಹೆಗಡೆಯವರು ಪುರಾಣದ ಬಗೆಗಳನ್ನು ಸೃಷ್ಟಿಕ್ರಮದ ಕಥೆಗಳು, ಮಾನವ ಹಾಗೂ ಪ್ರಾಣಿಗಳ ಉತ್ಪತ್ತಿ, ಆಕಾಶದ ನಕ್ಷತ್ರ-ಗ್ರಹಗಳ ಉತ್ಪತ್ತಿಗಳು ಮತ್ತು ವಿಧಿಕ್ರಮಗಳನ್ನು ರೂಪಿಸಿದ ಕಥೆಗಳು ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಹಿ.ಶಿ. ರಾಮಚಂದ್ರೇಗೌಡರ ಪ್ರಕಾರ ಪುರಾಣಗಳನ್ನು ಋತುಮಾನಕ್ಕೆ ಸಂಬಂಧಿಸಿದ, ನಿಸರ್ಗದ ಹುಟ್ಟ-ಸಂದರ್ಭಕ್ಕೆ ಸಂಬಂಧಿಸಿದ, ದೇವತೆಗಳ ಹುಟ್ಟು ಮನುಷ್ಯ ಪ್ರಾಣಿಗಳ ಹುಟ್ಟು-ರೂಪಾಂತರ, ಸಾಂಸ್ಕೃತಿಕ ನಾಯಕರ ಸಾಮಾಜಿಕ ಅನ್ವೇಷಣೆಗಳು, ಸಾವಿನ ನಂತರದ ಸ್ಥಳಗಳ ಕುರಿತ, ಚಾರಿತ್ರಿಕ ಘಟನೆಗಳ ಕುರಿತ ಪುರಾಣಗಳು ಎಂಬುದಾಗಿ ವರ್ಗೀಕರಿಸಬಹುದು 

               ಅನೇಕ ವಿದ್ವಾಂಸರು ಹೇಳಿರುವಂತೆ, 'ಆದಿ ಮಾನವನ ಲೋಕದೃಷ್ಟಿಯ ಅಭಿವ್ಯಕ್ತಿಯೇ ಪುರಾಣ. ಅದೊಂದು ನಿರೂಪಣೆ, ಮನುಷ್ಯ ತಾನು ಪರಿಸರಕ್ಕೆ ಹೊಂದಿಕೊಂಡು ಬಾಳಲಾರಂಭಿಸಿದ ಕಾಲಕ್ಕೆ ಪರಿಸರದ ಭೌತಿಕ ಜಗತ್ತು ಹಾಗೂ ಪಕ್ಷಿ, ಪ್ರಾಣಿ ಪರಿಸರಗಳ ಹುಟ್ಟು-ಸಾವಿನ ಬಗೆಗೆ ತಳೆದ ಊಹಾತ್ಮಕ ವಿಚಾರಗಳ ಮೊತ್ತ. ಮೊದಲು ಪ್ರಾಚೀನ ಘಟನಾವಳಿಗಳು, ಪಳಗತೆಗಳು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಇವು ನಂತರದ ಕಾಲಕ್ಕೆ ಪುರಾಣ ಎಂಬುದಾಗಿ ಕರೆಸಿಕೊಂಡಿವೆ'. ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ಕುರಿತಂತಿರುವ ಆದಿ ಮಾನವನ ಕಲ್ಪನೆಗಳೇ ಪುರಾಣಗಳು. ಇವುಗಳ ಪ್ರಧಾನ ಉದ್ದೇಶ ವಿವರಣೆ, ಸಮರ್ಥನೆ, ಶಿಕ್ಷಣ, ಪುನರ್ ನವೀಕರಣ ಮತ್ತು ಸ್ಪೂರ್ತಿಯನ್ನು ಹುಟ್ಟಿಸುವುದು. ಈ ಮಾತನ್ನು ಇನ್ನಷ್ಟು ವಿವರಿಸುವುದಾದರೆ, ಜಗತ್ತು ಹೀಗೇ ಯಾಕೆ ಇದೆ ಎಂಬ ಸಹಜ ಕುತೂಹಲಕ್ಕೆ ಇರುವ ಉತ್ತರಗಳೇ ಪುರಾಣಗಳು. ಇವು ತಾವು ಮಂಡಿಸುವ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಇವುಗಳನ್ನು ಪುರಾಣಗಳಿಗಿರುವ ಅಧಿಕಾರ ಹಾಗೂ ಗೌರವದ ಸ್ಥಾನಮಾನಗಳು ಸತ್ಯವೆನ್ನುವಂತೆ ನಂಬಿಸುತ್ತವೆ. ಹೀಗೆ ಜನರಿಗೆ ಜಗತ್ತಿನ ಚರಾಚರ ವಸ್ತು ವಿಷಯಗಳ ಉಗಮ-ವಿಕಾಸವನ್ನು ಕುರಿತು ಹೇಳುವುದರಿಂದ ಇದು ಶಿಕ್ಷಣದ ಒಂದು ಕ್ರಮವೂ ಹೌದು. ಮಾನವ ಒಂದು ಕಾಲಕ್ಕೆ ತಾನು ಊಹಿಸಿದ ಸಂಗತಿಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗು ರವಾನಿಸುವ ಮೂಲಕ ಜಗತ್ತಿನ ಬಗ್ಗೆ ಒಂದು ಬಗೆಯ ತಿಳುವಳಿಕೆಯನ್ನು ನೀಡುತ್ತಾನೆ. ಈ ಊಹಾತ್ಮಕ ಸಂಗತಿಗಳು ಎಲ್ಲಾ ಕಾಲ, ಧರ್ಮ, ಜಾತಿ, ಜನಾಂಗಗಳಲ್ಲಿ ಒಂದೇ ರೀತಿ ಇರಲಾರವು. ಕಾಲಕ್ಕೆ ತಕ್ಕಂತೆ ಆದಿಮಾನವನ ಕಲ್ಪನೆಗಳು ಬದಲಾವಣೆಯಾಗುತ್ತಾ ಬರುತ್ತವೆ. ಇವೆಲ್ಲವುಗಳ ಜೊತೆಗೆ ಪುರಾಣಗಳು ಲೋಕದ ನಡುವೆ ಬದುಕುವ ಮನುಷ್ಯನಿಗೆ ಈ ಮತ್ರ್ಯಲೋಕದಲ್ಲಿ ಇನ್ನಷ್ಟು ಕಾಲ ಬದುಕುವ, ಬರೀ ಬದುಕುವ ಅಲ್ಲ; ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ  ಸ್ಪೂರ್ತಿಯನ್ನು  ನೀಡುತ್ತವೆ. ವಿಶೇಷವಾಗಿ ಸಾಂಸ್ಕೃತಿಕ ನಾಯಕರನ್ನು ಕುರಿತ ಪುರಾಣಗಳು ಸಾಂಸ್ಕೃತಿಕ ನಾಯಕನ ಶೌರ್ಯ-ಸಾಹಸಗಳನ್ನು ವಿವರಿಸುವುದರ ಮೂಲಕ ಕೇಳುವವರಲ್ಲಿ ಆಸಕಿ ಮತ್ತು  ಸ್ಪೂರ್ತಿಯನ್ನು  ತುಂಬುತ್ತವೆ. 

               ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಊಹಾತ್ಮಕ ವಿವರಣೆ ನೀಡುವುದಷ್ಟೇ ಅಲ್ಲ, ಅದರಾಚೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತವೆ. ತಮ್ಮ ಬುದ್ಧಿಗೆ ನಿಲುಕದಿರುವ ವಿಷಯಗಳಿಗೂ ಕಾರ್ಯ ಕಾರಣ ಸಂಬಂಧವನ್ನು ಸೂಚಿಸುತ್ತವೆ. ಜೊತೆಗೆ ಕೆಲವು ಸತ್ಯ ಸಂಗತಿಗಳನ್ನೂ ಪುರಾಣೀಕರಿಸುತ್ತವೆ. ಪ್ರಸಿದ್ಧ ರಚನಾವಾದಿ ಲೆವಿಸ್ಟ್ರಾಸ್ ಹೇಳುವ ಹಾಗೆ ಪುರಾಣ ಎನ್ನುವುದು ಒಂದು ಭಾಷೆ. ಮಾನವನ ಸುಪ್ತ ಅಭೀಪ್ಸೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಿದ ರಚನೆಗಳಿವು. ಹೀಗೆಂದಾಕ್ಷಣ ಸಾಹಿತ್ಯಕ ಪ್ರಕಾರಗಳೆಲ್ಲವೂ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಈ ಎಲ್ಲಾ ಪ್ರಕಾರಗಳಲ್ಲಿ ಪುರಾಣಗಳ ಆಶಯಗಳಿರುತ್ತವೆ. ಹೀಗೆ ಪ್ರಾಚೀನಕಾಲದಿಂದಲೂ ಮಾನವ ತನ್ನ ಪರಿಸರದ ಸ್ವರೂಪ ಹಾಗೂ ಚಟುವಟಿಕೆಗಳಿಗೆ ಕಾರ್ಯಕಾರಣ ಸಂಬಂಧಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಹುಟ್ಟಿದ ಈ ಪುರಾಣಗಳ ಸೃಷ್ಟಿ ಅಲ್ಲಿಗೇ ನಿಂತಿಲ್ಲ. ಈ ರೀತಿಯ ರಚನೆಗಳು ಆಧುನಿಕ ಕಾಲದವರೆಗೂ ಮುಂದುವರೆದಿದೆ. ಈ ಮುಂದುವರಿಕೆ ಹೊಸ ಪುರಾಣಗಳ ಸೃಷ್ಟಿಗಿಂತ ಹಳೆಯ ಪುರಾಣಗಳನ್ನು ಹೊಸ ಅರ್ಥ ಹಾಗೂ ಆಶಯಗಳಿಗೆ ಒಗ್ಗಿಸುವ ಕಡೆ ಗಮನ ಹರಿಸುತ್ತದೆ. ಸಮಾಜದಲ್ಲಿ ಹೊಸ ದರ್ಶನಗಳು ಮೂಡಿದಾಗ ಅವುಗಳನ್ನು ಜನಪ್ರಿಯಗೊಳಿಸಲು ಸಂಪೂರ್ಣ ಹೊಸದೇ ಆದ ಪುರಾಣ ರಚನೆಯಾಗುವುದು ಅಪರೂಪ. ಏಕೆಂದರೆ ಜನ ಹೊಸದನ್ನು ಅಷ್ಟು ಸುಲಭವಾಗಿ ಶೀಘ್ರವಾಗಿ ಸ್ವೀಕರಿಸಲಾರರು. ಇಂಥ ಸಂದರ್ಭದಲ್ಲಿ ತಮ್ಮ ಮೂಲ ಆಕಾರವನ್ನು ಕಳೆದುಕೊಳ್ಳದೇ ಹೊಸ ದರ್ಶನಗಳನ್ನು ಹೇಳಲಾಗುತ್ತದೆ.

         ಹೀಗೆ ರೂಪಗೊಂಡಿರುವ ಪುರಾಣಗಳು ಯಾವಗ ರಚಿತವಾದವು ಎಂಬುದು ಮುಖ್ಯವಾದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಆಲೋಚಿಸುತ್ತಿರುವ ಹಲವು ವಿದ್ವಾಂಸರು ಕ್ರಿ.ಶ. ಆರಂಭದ ಹೊತ್ತಿಗಾಗಲೇ ಪುರಣಾಗಳು ಅಸ್ತಿತ್ವದಲ್ಲಿದ್ದವು. ವಿಶೇಷವಾಗಿ ವೈದಿಕ ಸಮುದಾಯಗಳಲ್ಲಿ ರಾಜಾಯಣ-ಮಹಾಭಾರತಗಳು ರಚನೆಯಾಗುತ್ತಿದ್ದ ಕಾಲಕ್ಕೆ ಮತ್ತೊಂದು ಕಡೆ ಪುರಾಣಗಳು ರಚನೆಯಾಗುತ್ತಿದ್ದವು. ಅವುಗಳನ್ನೇ ನಾವು ಇಂದು 18 ಮಹಾಪುರಾಣಗಳು 18 ಉಪ-ಪುರಾಣಗಳು ಎಂಬುದಾಗಿ ಕರೆದುಕೊಳ್ಳುತ್ತಿದ್ದೇವೆ. ಆ ಕಾಲಕ್ಕೆ ವೇದಗಳು ಪ್ರಧಾನ ಸಾಹಿತ್ಯ ಸಾಮಗ್ರಿಗಳಾಗಿ ನೆಲೆನಿಂತಿದ್ದರೂ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ಸು ಕಂಡಿರಲಿಲ್ಲ. ಕಾರಣ ಸಾಮಾನ್ಯ ಜನ ಹಾಗೂ ವಿಶೇಷವಾಗಿ ಕೆಳಜಾತಿಯ ಜನ ವೇದಗಳನ್ನು ಓದಲು ಅರ್ಹರಲ್ಲ ಎಂಬ ಹೇರಿಕೆ ಇತ್ತು. ಜೊತೆಗೆ ಸ್ವತಃ ವೇದಗಳೇ ಕಠಿಣ ರಚನೆಗಳಾಗಿದ್ದವು. ಈ ಕಾರಣಕ್ಕಾಗಿ ವೇದಗಳು ಜನರಿಂದ ದೂರವಾಗಲಾರಂಭಿಸಿದವರು. ಈ ಅಭಿಪ್ರಾಯವನ್ನು ತಪ್ಪಿಸುವ ಸಲುವಾಗಿ ವೇದಗಳನ್ನೇ ಅತ್ಯಂತ ಸರಳವಾದ ಜನಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಲಾಯಿತು. ಅದರ ಫಲವೇ 18 ಮಹಾಪುರಾಣಗಳು, 18 ಉಪಪುರಾಣಗಳ ಸೃಷ್ಟಿ. ಈ ಕಾರಣಕ್ಕಾಗಿಯೇ ಇರಬೇಕು, ಪುರಾಣಗಳನ್ನು ಐದನೇ ವೇದ ಎಂಬುದಾಗಿ ಕರೆಯಲಾಗಿದೆ. ಇವುಗಳಲ್ಲಿ ಆದಿಮಾನವನ ಕಲ್ಪನೆಗಳಿದ್ದು ಇವು ಒಂದು ರೀತಿಯಲ್ಲಿ ಪುರಾಣದ ಆಶಯ-ಸ್ವರೂಪಗಳನ್ನು ಪಡೆದಿವೆ ಎಂಬುದು ಗಮನಾರ್ಹ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಜನಪದರಲ್ಲಿ ಅವರವೇ ಆದ ನಂಬಿಕೆ-ಸಂಪ್ರದಾಯ-ಹಾಡು-ಕಥೆಗಳಿದ್ದವು. ಈ ಹೊತ್ತಿಗೂ ಜನಪದರಲ್ಲಿ ಪ್ರಚಲಿತವಿರುವ ಆಚರಣೆಗಳಲ್ಲಿ ಅಂತಹ ಆಶಯಗಳನ್ನು ಗುರುತಿಸಬಹುದಾಗಿದೆ. 

          ಮುಖ್ಯವಾಗಿ, ಪುರಾಣಗಳಿಗೆ ವ್ಯವಸ್ಥಿತ ರೂಪ ಕೊಟ್ಟು ತಮ್ಮ ಉದ್ದೇಶಗಳ ಈಡೇರಿಕೆಗೆ ಬಳಸಿಕೊಂಡಿದ್ದು ಮಾತ್ರ ವೈದಿಕ ಧಮ್. ತದನಂತರ ಈ ತಂತ್ರವನ್ನು ಎಲ್ಲಾ ಧರ್ಮಗಳು ಉಪಯೋಗಿಸಿಕೊಂಡು ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಂಡವು. ಜೈನಧರ್ಮದ ತೀರ್ಥಂಕರ ಚರಿತೆಗಳು, ಶೈವಸಂತರ ಚರಿತ್ರೆಗಳು ವಿಶೇಷವಾಗಿ ಸೃಷ್ಟಿಯಾಗಿರುವುದನ್ನು ನೋಡಬಹುದು. ಹೀಗೆ ಧರ್ಮ ಪ್ರಚಾರದ ಆಶಯವನ್ನೇ ಕೇಂದ್ರವಾಗಿಸಿಕೊಂಡ ಪುರಾಣಗಳಿಗೆ ಸಂಕೀರ್ಣತೆ ಬಂದೊದಗಿತು. ಇದನ್ನು ರಾಜಾರಾಮ ಹೆಗಡೆಯವರು ಹೀಗೆ ವಿವರಿಸುತ್ತಾರೆ: ಪುರಾಣಗಳು ವೈದಿಕ ಅವೈದಿಕ ಧಾರೆಗಳೆರಡರಲ್ಲಿ ಸಮ್ಮಿಶ್ರ ರೂಪಗಳಿರುತ್ತವೆ. ಯಾವೊಂದು ಗುಂಪಿನ ಪುರಾಣಗಳು ಕೂಡಾ ತನ್ನಷ್ಟಕ್ಕೆ ತಾನೇ ಸ್ವಯಂಭೂ ಆಗಿರುವುದಿಲ್ಲ. ಏಕೆಂದರೆ ಇದೊಂದು ಸಾಂಸ್ಕೃತಿಕ ಉತ್ಪನ್ನ. ಹಾಗಾಗಿ ಇತಿಹಾಸದ ವಿಭಿನ್ನ ಸಂದರ್ಭಗಳನ್ನು ಹೊಂದುತ್ತ, ಹಿಗ್ಗುತ್ತಾ, ರೂಪಾಂತರಗೊಳ್ಳುತ್ತಾ ಹೋಗುತ್ತವೆ. ಹಾಗಾಗಿ, ಈ ಪುರಾಣಲೋಕ ಒಂದು ಸಮ್ಮಿಶ್ರ ಸಂಪ್ರದಾಯವಾಗಿ ಕಂಡುಬರುತ್ತದೆ. ಆದ್ದರಿಂದ ಪುರಾಣಗಳು ಇಡಿಯಾಗಿ ಯಾವುದೇ ಒಂದು ಧರ್ಮದ ಸಂಪ್ರದಾಯವನ್ನು ಪ್ರತಿಪಾದಿಸಬೇಕೆಂದೇನೂ ಇಲ್ಲ. ಕೂರ್ಮ ಪುರಾಣದಲ್ಲಿ ರುದ್ರನೇ ಶೈವ ಸಂಪ್ರದಾಯದಲ್ಲಿ ಸೇರಿದ ಕಾಪಾಲಕರನ್ನು ಹಳಿಯುವಂತೆ ಚಿತ್ರಿಸಲಾಗಿದೆ. ವೃಷ್ಣವ ಸಂಪ್ರದಾಯ ಶಿವನನ್ನು ವಿಷ್ಣುವಿನ ಅಧೀನಕ್ಕೆ ತಂದು ದಂತ ಕಥೆಗಳನ್ನು ಸಷ್ಟಿಸಿದರೆ; ಅದೇ ದಂತ ಕಥೆಯಲ್ಲಿ ಶಿವನನ್ನು ಎತ್ತಿ ಹಿಡಿಯುವ ಶೈವ ಪಾಠವೊಂದು ಬಂದಿರುತ್ತದೆ. ಪುರಾಣಗಳಲ್ಲಿ ಇಂಥ ಹಲವು ದಂತಕಥೆಗಳನ್ನು ನೋಡಬಹುದು. ಶಿಷ್ಟಪರಂಪರೆಯ ಪಂಡಿತರಿಂದ ವ್ಯಕ್ತವಾಗುವ ವಿಚಾರಗಳಿವು. ಈ ಪರಂಪರೆಗಿಂತ ಭಿನ್ನವಾದ ದೃಷ್ಟಿ - ಧೋರಣೆಗಳಿರುವ ಜನಪದರು ಇದೇ ಪರಂಪರೆಯ ಪುರಾಣಗಳನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ? ಹಾಗೂ ಅವರು ಕಟ್ಟಿಕೊಂಡಿರುವ ಜನಪದ ಪುರಾಣಗಳ ಸ್ವರೂಪವೇನು ಎಂಬುದು ವಿಚಾರಾರ್ಹ. ಹಾಗಾಗಿ, ಮೊದಲಿಗೆ ಜನಸಾಮಾನ್ಯರು ಪುರಾಣಗಳನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು. 

           ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಹುತೇಕ ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಆಶ್ರಯಿಸಿದ್ದು ಅರಣ್ಯವಾಸಿ ಮತ್ತು ಕೃಷಿಕರಂಥ ಶ್ರಮಸಂಸ್ಕೃತಿಯ ಜನರನ್ನೇ. ಈ ಪ್ರಕ್ರಿಯೆಯೊಳಗೆ ಹಲವಾರು ಸಮುದಾಯಗಳು ತಮ್ಮ ಅನನ್ಯತೆಯನ್ನು ಕಳೆದುಕೊಂಡವು. ಮತ್ತೆ ಕೆಲವು ಅನನ್ಯತೆಯ ಉಳಿವಿಗಾಗಿ ಹೋರಾಡಿದವು. ಈ ಹೋರಾಟಗಳು ಯಾವ ಸ್ವರೂಪದಲ್ಲಿದ್ದವು ಎಂಬುದಕ್ಕೆ ನಿಖರವಾದ ಯಾವ ಆಧಾರಗಳೂ ಇಲ್ಲ. ಆದರೂ ಭಾಷಾಭಿವ್ಯಕ್ತಿಗಳಿಂದ ಪ್ರತಿಭಟನೆ ಮಾಡಿದ್ದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕೆ ಇಂದಿಗೂ ಸಮುದಾಯಗಳಲ್ಲಿ ಪ್ರಚಲಿತವಿರುವ ಪುರಾಣಗಳು ಸಮರ್ಥ ಉದಾಹರಣೆಯಾಗಬಲ್ಲವು. ಈ ಕಾಲದ ಜನಪದ ಪುರಾಣಗಳು ಶಾಸ್ತ್ರೀ ಪುರಾಣಗಳ ಅನುಕರಣೆ ಎಂಬಂತೆ ಇವೆ. ಆದರೆ ಅವುಗಳ ಆಳದಲ್ಲಿ ಶಾಸ್ತ್ರೀಯ ಧಾರೆಯ ಮೌಲ್ಯಗಳನ್ನು ಟೀಕಿಸುವ, ಅವುಗಳನ್ನು ಮೀರುವ ಪ್ರಯತ್ನಗಳಿವೆ. ಜೊತೆಗೆ ಆ ಮೌಲ್ಯಗಳ ಸ್ಥಾನದಲ್ಲಿ ಅವರದೇ ಜಗತ್ತಿನೊಳಗೆ ಚಾಲ್ತಿಯಲ್ಲಿದ್ದ ಮೌಲ್ಯಗಳು ತುಂಬಿಕೊಂಡಿವೆ. ಜನಪದ ಪುರಾಣಗಳು ಇಂಥ ರೂಪಾಂತರ ಕಂಡ ಕಾಲ ಯಾವುದು? ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ಸದ್ಯ ನಮಗೆ ಲಭಿಸಿರುವ ಐತಿಹ್ಯ ಪುರಾಣಗಳ ಸ್ವರೂಪವನ್ನು ಗಮನಿಸಿದರೆ 15, 16, 17ನೇ ಶತಮಾನದಿಂದಲೇ ಸೃಷ್ಟಿಯಾದಂತೆ ತೋರುತ್ತದೆ. .......................... ಇದನ್ನು ಒಪ್ಪಿಕೊಂಡರೆ, 15, 16, 17ನೇ ಶತಮಾನದ ಸಾಮಾಜಿಕ, ಆಥರ್ಿಕ, ಧಾಮರ್ಿಕ ಸಂರಚನೆಗಳು ಐತಿಹ್ಯ ಮತ್ತು ಪುರಾಣಗಳ ಸೃಷ್ಟಿಗೆ ಕಾರಣವಾಗಿರಬೇಕೆಂದು ಊಹಿಸಬಹುದು. ಇದಕ್ಕೆ ಪುಷ್ಟಿನೀಡುವಂತೆ ಅನೇಕ ಜನಪದ ಮಹಾಕಾವ್ಯಗಳ ಹುಟ್ಟು ಇದೇ ಕಾಲಮಾನದಲ್ಲಿ ಓಡಾಡುತ್ತಿರುವುದು ಗಮನಾರ್ಹ. ಈ ಕಾಲ ಭಕ್ತಿ ಪಂಥದ ಕಾಲ, ಈ ಭಕ್ತಿಪಂಥ ಮಾಡಿದ ಮುಖ್ಯ ಕೆಲಸವೆಂದರೆ ಆದಿವಾಸಿ, ಕೆಳಜಾತಿಗಳ ಮೂಲಧರ್ಮದ ನಿರಾಕರಣೆ. ಇದಕ್ಕೆ ಕಾರಣ ಕಲ್ಲು, ಮರ, ಮೊದಲಾದ ಕ್ಷುದ್ರ ದೇವತೆಗಳು ಇವರವೆಂಬುದು. ಹೀಗೆ ಕೆಳಜಾತಿಗಳ ದೈವಗಳನ್ನು ನಿರಾಕರಿಸಿ, ಹೊಸ ರೀತಿಯ ಧರ್ಮದ ಪ್ರತಿಷ್ಠಾಪನೆಗೆ ಪ್ರಯತ್ನಿಸಿತು ಪರಿಣಾಮ, ಕೆಳ ಜಾತಿಗಳು ತಮ್ಮ ಮೂಲ ಧರ್ಮ, ದೇವತೆಗಳನ್ನು ಕಾಯ್ದಿಟ್ಟುಕೊಳ್ಳುವ ತಂತ್ರವಾಗಿ ಇಂಥ ಪುರಾಣ ಕಾವ್ಯಗಳನ್ನು ಕಟ್ಟಿಕೊಂಡಿರಬಹುದೆಂದು ಊಹಿಸಬಹುದಾಗಿದೆ.

          'ಪುರಾಣ'ವನ್ನು ಕುರಿತ ಹಾಗೆ ಪ್ರಾಚೀನ ಕಾಲದಿಂದಲೂ ಇರುವ ವಿವಿಧ ರೀತಿಯ ಅರ್ಥಗ್ರಹಿಕೆಗಳಲ್ಲಿ ಜನಪದರ ಗ್ರಹಿಕೆಯೊಂದಿದೆ ಎಂಬುದು ವಿಶೇಷ. ಸಾಮಾನ್ಯ ಜನತೆಯ ಪುರಾಣದ ವ್ಯಾಖ್ಯಾನ ಅತ್ಯಂತ ಕುತೂಹಲಕರವಾದುದು. ಇವರು ಪುರಾಣದ ಹಿನ್ನೆಲೆ ಮುನ್ನೆಲೆಗಳನ್ನು ತಾತ್ವಿಕವಾಗಿ ಗ್ರಹಿಸದೇ ಹೋದರೂ, ಅವು ಅರ್ಥವಾದಷ್ಟನ್ನು ಸ್ಪಷ್ಟವಾಗಿ ಹೇಳಬಲ್ಲರು. ಈ ಹಿನ್ನೆಲೆಯಲ್ಲಿ ಪ್ರಚಲಿತವಿರುವ ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಗಮನಿಸುವುದರ ಮೂಲಕ ಪುರಾಣದ ಬಗ್ಗೆ ಜನಸಾಮಾನ್ಯರಿಗಿರುವ ದೃಷ್ಟಿಕೋನವನ್ನು ನೋಡಬಹುದು. 
                             1) ಪುರಾಣ ಹೇಳೋಕೆ; ಬದನೆಕಾಯಿ ತಿನ್ನೋಕೆ 
                             2) ಪುರಾಣ ಕೇಳಿ ಪರಾಣ (ಪ್ರಾಣ) ಹೋಯಿತು 
                             3) ಪುರಾಣ ಹೇಳ್ಬೇಡ
                             4) ರಾತ್ರಿಯೆಲ್ಲ ರಾಮಾಯಣ ನೋಡಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕೆಂದನಂತೆ 
                             5) ಪೂರ್ವಿಕರು ಹೇಳಿದ್ದು ಪುರಾಣ; ಊರ್ವಿಕರು ಹೇಳಿದ್ದು ಗಾದೆ 
         ಮೇಲಿನ ನುಡಿಗಟ್ಟುಗಳಲ್ಲಿ, ಮೊದಲನೆಯ ನುಡಿಗಟ್ಟು ಪುರಾಣಗಳನ್ನು ವಾಸ್ತವ, ಅವಾಸ್ತವ ಎಂಬೆರಡು ನೆಲೆಗಳಿಂದ ವಿವರಿಸುತ್ತದೆ. ಇಲ್ಲಿ ಪುರಾಣ ಹೇಳೋಕೆ ಮಾತ್ರ ಎಂಬ ಮಾತಿನಿಂದ ಅದೊಂದು ಅವಾಸ್ತವತೆಯಿಂದ ಕೂಡಿದ್ದು, ಬರೀ ನುಡಿ, ತಾತ್ವಿಕ ದೃಷ್ಟಿ ಎಂಬರ್ಥ ಹೊರಡುತ್ತದೆ. ಮುಂದಿನ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವ ನೆಲೆಯುಳ್ಳದ್ದು. ಎರಡನೇ ನುಡಿಗಟ್ಟು ಪುರಾಣವೆಂದರೆ, ದೀರ್ಘವಾದುದು ಆದರೆ, ಜೀವನ ಮಾತ್ರ ಅಲ್ಪಕಾಲಾವಧಿಯುಳ್ಳದ್ದು. ಮನುಷ್ಯನ ಜೀವಿತಾವಧಿ ಮುಗಿದರೂ ಪುರಾಣ ಮುಗಿಯಲಾರದು ಎಂಬರ್ಥ ಸ್ಫುರಿಸುತ್ತದೆ. ಇದೇ ನೆಲೆಯಲ್ಲಿ ಮೂರನೇ ನುಡಿಗಟ್ಟನ್ನು ಗಮನಿಸಬಹುದಾಗಿದೆ. ಅದರಲ್ಲಿಯೂ ಕೂಡ ಪುರಾಣ ದೀರ್ಘವಾದುದು ಎಂಬರ್ಥ ಬರುವಂತೆ ಹೇಳಲಾಗಿದೆ. ಹಾಗೆಯೇ ಅವಾಸ್ತವ ಎಂಬರ್ಥ ಹೊಳೆಯುತ್ತದೆ. ಇನ್ನು ನಾಲ್ಕನೇ ನುಡಿಗಟ್ಟು ಪುರಾಣದ ಸಂಕೀರ್ಣತೆಯ ಕಡೆಗೆ ಗಮನಕೊಡುತ್ತದೆ. ರಾತ್ರಿಯೆಲ್ಲ ರಾಮಾಯಣ ಕಥೆ ನೋಡಿದರೂ ರಾಮ ಸೀತೆಯರ ಸಂಬಂಧಗಳು ಅರ್ಥವಾಗದೇ ಉಳಿಯುತ್ತವೆ. ಹಾಗಾಗಿ ಪುರಾಣವೆಂಬುದು ಅಷ್ಟೊಂದು ಸಂಕೀರ್ಣ ಸ್ಥಿತಿಯದ್ದು. ಐದನೇ ನುಡಿಗಟ್ಟಾದರೂ ಪುರಾಣದ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಆದಿ ಮಾನವನ ಕಲ್ಪನೆ ಅಥವಾ ಊಹೆಯ ಅಭಿವ್ಯಕ್ತಿಯಾಗಿ ಪುರಾಣಗಳನ್ನು; ಅನುಭವದ ಮಾತಾಗಿ ಗಾದೆಯನ್ನು ಪರಿಭಾವಿಸಿರುವುದು ಸ್ಪಷ್ಟವಾಗುತ್ತದೆ. 

      ಒಟ್ಟಾರೆ, ಪುರಾಣವೆಂದರೆ ಪುರಾತನವಾದುದು, ಪುರಾತನ ಮಾನವನ ಊಹಾತ್ಮಕ ಮಾತು, ಧೀರ್ಘವಾದುದು, ಸಂಕೀರ್ಣವಾದುದು ಎಂಬರ್ಥದಲ್ಲಿ ಸಾಮಾನ್ಯ ಜನತೆ ಅರ್ಥೈಸಿರುವುದು ಸ್ಪಷ್ಟವಾಗಿದೆ. ಇದರ ಜೊತೆಗೆ ಸೂಕ್ಷ್ಮವಾಗಿ ಗಮನಿಸಿದರೆ ಪುರಾಣದ ಬಗೆಗೆ ಮೇಲಿರುವ ಜನಸಾಮಾನ್ಯರ ಹೇಳಿಕೆಗಳು ಪುರಾಣಗಳನ್ನು ನೇತ್ಯಾತ್ಮಕವಾಗಿ ನೋಡಿರುವುದು ಸ್ಪಷ್ಟವಾಗುತ್ತದೆ. ಶಿಷ್ಟ ಪರಂಪರೆಗಳು ಸೃಷ್ಟಿಸಿ ಇವರ ನಡುವೆ ಚಲಾವಣೆಗೆ ಬಿಟ್ಟಿದ್ದ ಪುರಾಣಗಳನ್ನು ಹೀಗೆ ನೋಡಿದ ಈ ಮನಸ್ಸುಗಳು ತಾವು ಸೃಷ್ಟಿಸಿದ ಪುರಾಣಗಳಿಗೆ ಯಾವ ಸ್ವರೂಪ ನೀಡಿವೆ ಎಂಬುದು ಕುತೂಹಲಕರವಾದುದು. ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

  ಜನಪದ - ಶಿಷ್ಟ ಪುರಾಣಗಳು

 ಪುರಾಣಗಳನ್ನು ಶಿಷ್ಟ-ಜಾನಪದ ಎಂಬುದಾಗಿ ವಿಂಗಡಿಸಿ ನೋಡುವುದು ಅಂತಿಮವಾಗಿ ಯಾವುದೇ ಬಹುದೊಡ್ಡ ಫಲಿತ ನೀಡಲಾರದು. ಆದರೂ ಎರಡು ವಿಭಿನ್ನ ಗುಂಪುಗಳ ಸೃಷ್ಟಿಗಳನ್ನು ಸೂಕ್ಷ್ಮ ಅಧ್ಯಯನಕ್ಕೊಳಪಡಿಸುವ ಕಾರಣಕ್ಕಾಗಿ ಇಂಥ ವಗರ್ೀಕರಣ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ: ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳೆರಡರ ಮೂಲ ಸಾಮಗ್ರಿಗಳು ಮನೋಬಿಂಬಗಳು, ಪ್ರತಿಮೆಗಳಂಥ ಸ್ವಪ್ನ ಪ್ರತೀಕಗಳೇ ಆಗಿವೆ. ಎರಡರಲ್ಲಿಯೂ ಹೇರಳವಾದ ಬ್ರಾಮಕಗಳಿರುತ್ತವೆ. ಅಪ್ಪ-ಅಮ್ಮ, ಗಂಡ-ಹೆಂಡತಿ, ಮಗ-ಮಗಳು, ಕಾಮ-ಪ್ರೇಮ, ಹುಟ್ಟು-ಸಾವು, ಲೌಕಿಕ-ಅಲೌಕಿಕ ಪ್ರತೀಕಗಳು ಎರಡರಲ್ಲಿಯೂ ಇರುತ್ತವೆ. ಎರಡರಲ್ಲಿಯೂ ಸಂಸ್ಕೃತಿಯ ವೀರನೊಬ್ಬನ ಮೂಲಕ ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ಕೆಲವು ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

        ಲಿಖಿತ ಅಥವಾ ಶಿಷ್ಟಪುರಾಣಗಳು ಅಧಿಕಾರದ ನೆಲೆಯ ಸೃಷ್ಟಿಗಳು. ಇವುಗಳಲ್ಲಿ ಬಹುತೇಕ ಸುಖಾಂತ ನಿರೂಪಣೆಯುಳ್ಳವು. ಇಲ್ಲಿಯ ನಾಯಕ ಹುಟ್ಟುತ್ತಲೇ ಮಹಾನ್ ವ್ಯಕ್ತಿಯಾಗಿದ್ದು, ಕೊನೆಗೆ ಅಮರನಾಗುತ್ತಾನೆ. ಸಾವು ಈತನ ಹತ್ತಿರ ಸುಳಿಯುವುದಿಲ್ಲ. ಇಲ್ಲಿ ಬರುವ ಹೋರಾಟಗಳು ರಕ್ಷಣಾತ್ಮಕವಾಗಿರುತ್ತವೆ. ಸಾಮ್ರಾಜ್ಯ ಉಳಿಸಿಕೊಳ್ಳುವಿಕೆ, ಸಮರ್ಥವಾಗಿ ಮೂಡಿಬಂದರೆ ಮಾತ್ರ ಸಮೂಹದ ಪ್ರತಿಬಿಂಬಗಳಾಗುತ್ತವೆ. ಮೌಖಿಕ ಅಥವಾ ಜನಪದ ಪುರಾಣಗಳಾದರೋ ಸಮಾಜದ ನೊಂದ ಜನತೆಯ ದನಿಗಳು. ಬಹುತೇಕ ಜನಪದ ಪುರಾಣಗಳು ದುಃಖಾಂತ ನಿರೂಪಣೆಗಳಾಗಿವೆ. ಸಾಮಾನ್ಯವಾಗಿ ಇಲ್ಲಿಯ ಹೆಚ್ಚಾನುಹೆಚ್ಚು ನಾಯಕರು ಮಧ್ಯೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಕಾರಣ ಇಲ್ಲಿಯ ನಾಯಕರು ಸಾಮಾನ್ಯ ಜನತೆಯ ಸ್ವರೂಪದಲ್ಲಿ ಬಂದವರು. ಶಿಷ್ಟನಾಯಕರಿಗಿದ್ದಂತಹ ದೈವತ್ವ ಇಲ್ಲಿಯ ನಾಯಕರಿಗಿಲ್ಲ. ಹಾಗಾಗಿ ಇಲ್ಲಿಯ ನಾಯಕರು ಸಾಧನೆಯಿಂದ ಮೇಲೇರುತ್ತಾರೆ. ಇಡೀ ಪುರಾಣಗಳಲ್ಲಿ ನಾಯಕರ ಹೋರಾಟದ ನೆಲೆ ಸೃಷ್ಟ್ಯಾತ್ಮಕ ನೆಲೆಯುಳ್ಳದ್ದು. ಇಲ್ಲಿ ಯಾವುದೇ ಸಾಮ್ರಾಜ್ಯದ ಅಥವಾ ಅಧಿಕಾರದ ವಿಸ್ತರಣೆ ಅಥವಾ ಉಳಿವಿಗಾಗಿ ಹೋರಾಟ ನಡೆಯುವುದಿಲ್ಲ. ಬದಲಿಗೆ ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಡುತ್ತಾರೆ. ಅಧಿಕಾರ ಪಡೆಯುವ ಆಸಕ್ತಿಯೂ ಕೆಲವೊಮ್ಮೆ ಇದ್ದಿರಬಹುದು. ಒಟ್ಟಾರೆ ಸಾಮೂಹಿಕ ಅಭಿವ್ಯಕ್ತಿಯಾಗಿರುವ ಇವು ಸಮುದಾಯಗಳ ಅನುಭವಗಳಿಂದ ಮೂಡಿಬಂದವುಗಳು. 

ಪುರಾಣ ಮತ್ತು ಚರಿತ್ರೆ 

ಜಗತ್ತಿನ ಸಂಗತಿಗಳ ಬಗ್ಗೆ ಮಾನವ ಊಹಿಸಿ ಕಟ್ಟಿದ ಕಥೆಗಳೇ ಪುರಾಣಗಳಾದವು. ಜೊತೆಗೆ ಚರಿತ್ರೆಯ ಘಟನೆಗಳೂ ಕಾಲಾನಂತರ ಪುರಾಣಗಳಾದವು. ಇವೆರಡು ಮಾತುಗಳು ಪುರಾಣ ಮತ್ತು ಚರಿತ್ರೆಯ ಸಂಬಂಧಗಳ ಕುರಿತು ವಿವೇಚಿಸಲು ಹಚ್ಚುತ್ತವೆ. ನಮ್ಮಲ್ಲಿ ಪುರಾಣಗಳನ್ನು ಎರಡು ಅತಿರೇಖದ ನೆಲೆಗಳಲ್ಲಿ ಗ್ರಹಿಸಲಾಗಿದೆ.

 1. ಪುರಾಣಗಳು ಆದಿಮಾನವನ ಊಹೆಗಳು. ಧಾಮರ್ಿಕ ಪುಣ್ಯ ಕಥೆಗಳು
 2. ಪುರಾಣಗಳು ಚರಿತ್ರೆಗಳೇ ಆಗಿವೆ. 

 ಇವುಗಳಲ್ಲಿ ಮೊದಲನೆಯದು ಭಕ್ತರನ್ನು ಕೇವಲ ಕೇಳುವ ಭಕ್ತರನ್ನಾಗಿಸುವ ಪ್ರಯತ್ನ ಮಾಡಿದರೆ; ಎರಡನೆಯದು ಪುರಾಣಗಳ ಅನೇಕ ಕಲ್ಪನೆಗಳನ್ನು ಚರಿತ್ರೆಯ ಘಟನೆಗಳೆಂದೇ ನಂಬಿಸುವ ಮನೋಭಾವ ಹೊಂದಿದೆ. ಹಾಗಾದರೆ ಪುರಾಣ ಮತ್ತು ಚರಿತ್ರೆಗಳ ಸಂಬಂಧ ಎಂಥದ್ದು? ಎಂಬುದು ಇಲ್ಲಿಯ ಪ್ರಶ್ನೆ. ಪುರಾಣ ಮತ್ತು ಚರಿತ್ರೆ ಸಂಪೂರ್ಣ ಪ್ರತ್ಯೇಕ ಅಸ್ತಿತ್ವ ಹೊಂದಿರುವಂಥವು. ಆದರೆ ತೀರಾ ಹತ್ತಿರದ ಸಂಬಂಧಗಳನ್ನೂ ಪಡೆದಿರುವುದು ಸಹ ಅಷ್ಟೇ ಸತ್ಯ. ಪುರಾಣದೊಳಗೆ ಚರಿತ್ರೆ ಇರುವುದನ್ನು ವಿವರಿಸುತ್ತಾ ಬರಗೂರು ರಾಮಚಂದ್ರಪ್ಪ ಹೀಗೆನ್ನುತ್ತಾರೆ. ಪುರಾಣಗಳ ವಿವರಗಳೆಲ್ಲ ನಿಜವಾಗಿ ನಡೆದ ಘಟನೆಗಳಲ್ಲ. ಪುರಾಣದ ಪಾತ್ರಗಳೆಲ್ಲ ಹಿಂದೆ ಜೀವಂತವಿದ್ದ ವ್ಯಕ್ತಿಗಳಲ್ಲ. ಆದರೆ ಪುರಾಣಗಳಲ್ಲಿ ಸಮಾಜ ಹಾಗೂ ಸಾಂಸ್ಕೃತಿಕ ಚಾರಿತ್ರಿಕ ವಿನ್ಯಾಸಗಳು ಇರುತ್ತವೆ. ಪುರಾಣದ ಪಾತ್ರಗಳು ಬದುಕಿನ ವ್ಯಕ್ತಿ ರೂಪಕಗಳಾಗಿರುತ್ತವೆ. ನಿದರ್ಿಷ್ಟ ಸ್ವಭಾವ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ಅರ್ಥಪೂರ್ಣವಾಗಿದೆ. 

          ಜನಪದ ಪುರಾಣಗಳು ಆಳುವ ವರ್ಗ ಮತ್ತು ಆಳುವ ವರ್ಗ ಪ್ರತಿಪಾದಿಸಿರುವ ಮೌಲ್ಯಗಳನ್ನು ಪ್ರಬಲವಾಗಿ ವಿರೋಧಿಸಿವೆ. ಹಾಗೂ ಹೊಸ ಮೌಲ್ಯ ಪ್ರಪಂಚದ ಕನಸ್ಸೊಂದನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ ಜನಪದ ಪುರಾಣ ಹಾಗೂ ಶಿಷ್ಟ ಪುರಾಣಗಳ ನಡುವೆ ಕೆಲ ಮುಖಾಮುಖಿಗಳಿವೆ. ಹಿಂದಿನ ಭಾಗದಲ್ಲಿ ವಿಶ್ಲೇಷಿಸಿರುವಂತೆ, ಪುರಾಣಗಳ ಮೂಲ ಮಾದರಿಗಳು ಜಾನಪದದಲ್ಲಿಯೇ ಇದ್ದವು. ಆದರೆ ಅಂಥ ವಿಚಾರಗಳ ಆಧಾರದ ಮೇಲೆ ವೈದಿಕಾದಿ ಸಾಂಸ್ಥಿಕ ಧರ್ಮಗಳು ಹೊಸ ಮಾದರಿಯ ಅಂದರೆ ಧರ್ಮ ಪ್ರಚಾರಕ್ಕೆ ಯೋಗ್ಯವಾದ ಪುರಾಣಗಳನ್ನು ಸೃಷ್ಟಿಸಿದವು. ಇವುಗಳನ್ನು ಮತ್ತೆ ಜನಪದದ ಕ್ರಿಯಾಶೀಲ ಮನಸ್ಸುಗಳು ತಮ್ಮ ಅಸ್ತಿತ್ವ-ಅನನ್ಯತೆಗಳ ಪ್ರಕಟಣೆಗೆ ಬಳಸಿಕೊಂಡವು. ಹಾಗಾಗಿಯೇ ಶಿಷ್ಟ ಹಾಗೂ ಮೌಖಿಕ ಧಾರೆಗಳ ಪುರಾಣಗಳಲ್ಲಿ ಹಲವಾರು ಸಾಮ್ಯತೆಗಳಿವೆ. ನಾಯಕರ ಗುಣ-ಲಕ್ಷಣಗಳು ಮತ್ತು ವಿವಿಧ ಪಾತ್ರಗಳ ಆಳದಲ್ಲಿ ಇಂಥ ಸಂಬಂಧವಿದೆ. ಇಂಥ ಹೋಲಿಕೆಯಿಂದ ಸ್ಪಷ್ಟವಾಗುವ ಸಂಗತಿಗಳು ಹಲವಾರು. 

           ಈ ದಿಕ್ಕಿನಲ್ಲಿ ಆಲೋಚಿಸಿರುವ ವಿದ್ವಾಂಸರು ಜನಪದ ಪುರಾಣಗಳು ಒಂದಲ್ಲ ಒಂದು ರೀತಿಯಲ್ಲಿ ಶಿಷ್ಟ ಪುರಾಣಗಳಿಂದ ಪಾತ್ರಗಳನ್ನು, ಘಟನೆಗಳನ್ನು ಪರಿಕಲ್ಪನೆಗಳನ್ನು ಕಾಣಬಹುದು............... ಆ ಮೂಲಕ ಶಿಷ್ಟ ಪರಂಪರೆಯ ಕಡೆಗೆ ಸಾಗುವ ಪ್ರಯತ್ನ ನಡೆಸಿರುವುದನ್ನು ಗುರುತಿಸಬಹುದು. ಸಣ್ಣ ಸಣ್ಣ ಸಮುದಾಯಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೀರರ ಚರಿತ್ರೆಗಳು ಆ ಸಮುದಾಯಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದವು. ಪ್ರಬಲ ಸಂಸ್ಕೃತಿಯ ಪ್ರಭಾವ ಪ್ರೇರಣೆಗಳಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ವೀರರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಲು ಹವಣಿಸಿದವು. ಆಳುವ ವರ್ಗದಲ್ಲಿ ಹುಟ್ಟುವ ಅನೇಕ ಪುರಾಣಗಳ ವಿಷಯಗಳನ್ನು ಎತ್ತಿಕೊಂಡು ತನ್ನ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಡಿಸಿಕೊಂಡವು. ಪ್ರಬಲ ಕೋಮಿನ ಬೆನ್ನು ಹತ್ತಿದ ನಮ್ಮ ಕಾವ್ಯಗಳಲ್ಲಿನ ವೀರರು ತಮ್ಮ ತನವನ್ನು ಕಳೆದುಕೊಂಡರು ಎನ್ನುತ್ತಾರೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈಗಿರುವ ಜನಪದ ಪುರಾಣಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ದೃಷ್ಟಿ ಮೂಲತಃ ಶಾಸ್ತ್ರೀಯ ಸಂಪ್ರದಾಯಗಳಿಂದ ಪ್ರೇರಿತವಾದುದು. ಹಾಗೂ ತಮ್ಮ ಉದ್ದೇಶಕ್ಕೆ ತಕ್ಕ ಹಾಗೆ ರೂಪಗೊಂಡಂತಹವು. ಮೇಲಿನ ವಿದ್ವಾಂಸರ ಮಾತುಗಳಲ್ಲಿರುವ ಆತಂಕವೆಂದರೆ ಕೆಳ ಎನಿಸಿಕೊಂಡಿರುವ ಸಂಸ್ಕೃತಿಗಳು ಮೇಲ್ವರ್ಗ ಅಥವಾ ಅಧಿಕಾರದ ನೆಲೆಯ ಸಂಪ್ರದಾಯಗಳನ್ನು ಅನುಕರಿಸುವುದರ ಮೂಲಕ ತಮ್ಮ ತನವನ್ನು ಕಳೆದುಕೊಂಡರು ಎಂಬುದು. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಮೇಲೆ ಉಲ್ಲೇಖಿಸಿರುವ ವಿದ್ವಾಂಸರ ಮಾತುಗಳಲ್ಲಿನ ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಮಾರ್ಪಡಿಸಿದರು ಎಂಬಲ್ಲಿಯೇ ಅ ಸಮುದಾಯಗಳ ಅನನ್ಯತೆ ಇದೆ. ಯಾವುದೋ ಒಂದು ಸಂಸ್ಕೃತಿ ಪ್ರಬಲವಾದ ಮತ್ತೊಂದು ಸಂಸ್ಕೃತಿ ಜೊತೆ ಮುಖಾಮುಖಿಯಾದಾಗ ನೇರ ಹಾಗೂ ಖಚಿತವಾಗಿ ಪ್ರತಿಭಟನೆ ಮಾಡದೆ ಹೋದರೂ ಅಂರ್ತಮುಖಿಯಾದ ವಿರೋಧ ಇದ್ದೆ ಇರುತ್ತದೆ. ಜೊತೆಗೆ ವಿರೋಧಿಸಿದ ಮೌಲ್ಯ ಪ್ರಪಂಚಕ್ಕಿಂತ ಆರೋಗ್ಯಪೂರ್ಣ ಎನಿಸಿದ ಮತ್ತೊಂದು ಮೌಲ್ಯ ಪ್ರಪಂಚವನ್ನು ಕಟ್ಟುವ ಆಶಯಗಳಿರುತ್ತವೆ. ಸಮುದಾಯಗಳ ಇಂಥ ಪ್ರಕ್ರಿಯೆಯನ್ನು ಪ್ರತಿಸಂಸ್ಕೃತಿಯ ನಿರ್ಮಾಣ ಎನ್ನಬಹುದು. ಈ ನೆಲೆಯಲ್ಲಿ ಅದರ ಸ್ವರೂಪ ಮತ್ತು ಸಾಧ್ಯತೆಗಳ ಪ್ರಧಾನ ಚರ್ಚೆಯನ್ನು ಹೀಗೆ ಬೆಳೆಸಬಹುದು. 

        ಪುರಾಣಗಳೆಂದರೆ ವ್ಯಕ್ತಿಗಳ ಅಥವಾ ಸಮೂಹಗಳ ಸುಪ್ತ ಮನಸ್ಸಿನ ಅಭಿವ್ಯಕ್ತಿಗಳಲ್ಲದೆ ಮತ್ತೇನು ಅಲ್ಲ. ಇಂಥ ಅಭಿವ್ಯಕ್ತಿಗಳ ಸಂದರ್ಭಗಳಲ್ಲಿ ಸಹಜವಾಗಿ ಪರಂಪರೆ ಪ್ರಭುತ್ವ ಸಾಧಿಸಿದೆ. ಹಾಗೂ ಈಗಲೂ ಸಾಧಿಸುತ್ತಿದೆ. ಜೊತೆಗೆ ಇಂಥ ಪುರಾಣಗಳ ಬಗೆಗೆ ನಿರ್ಲಕ್ಷಿತ ಸಮುದಾಯದಲ್ಲಿ ಸಮ್ಮಿಶ್ರವಾದ ಅಭಿಪ್ರಾಯಗಳೂ ಇರಲು ಸಾಧ್ಯ. ಇವುಗಳಲ್ಲಿ ಪ್ರತಿಷ್ಠೆಯ ಪುರಾಣಗಳ ಬಗ್ಗೆ ಮೋಹಗೊಂಡು ಅವುಗಳನ್ನು ಅನುಕರಿಸುವ ಹಂಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ಅಂಥವುಗಳಿಂದ ನಾನೇನು ಕಡಿಮೆ? ಎನ್ನುವ ಮನೋಧರ್ಮದೊಡನೆ ಪರ್ಯಾಯ ನೆಲೆಯಲ್ಲಿ ಸೃಜಿಸುವ ಧೈರ್ಯಮಾಡುತ್ತವೆ. ಇಂತ ಸಂದರ್ಭಗಳೇ ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಗಳನ್ನು ತೋರ್ಪಡಿಸುತ್ತವೆ.

 ಕೊನೆ ಟಿಪ್ಪಣಿಗಳು 
  •  ವಿವರಗಳಿಗೆ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 4-5, 1987 
  •  ಉದ್ಧೃತ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 5, 1987
  •  ಎಲ್.ಆರ್. ಹೆಗಡೆ, ಪುರಾಣಜಿಜ್ಞಾಸೆ, ಪುಟ: 71, 1976 
  •  ಸೋಮಶೇಖರ ಇಮ್ರಾಪುರ, (ಸಂ) ಜಾನಪದ ಸಾಹಿತ್ಯ ದರ್ಶನ-15, ಪುಟ: 49-50, 1994
  •  ಓ.ಎಲ್. ನಾಗಭೂಷಣಸ್ವಾಮಿ, ಪುರಾಣ, ಪುಟ: 13,
  •  1993 ರಾಜರಾಮ ಹೆಗಡೆ, ಭಾರತೀಯ ಮೂರ್ತಿಶಾಸ್ತ್ರ......, ಅರಿವು ಬರಹ-4, ಪುಟ: 86,
  •  1993 ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ-101, 1997
  •  ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪುಟ-60, 2000 
  •  ಹಿ.ಶಿ. ರಾಮಚಂದ್ರೇಗೌಡ ಅವರ ವಿಚಾರಗಳಿಗೆ ಋಣಿ ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ: 99, 1997
  •  ಬರಗೂರು ರಾಮಚಂದ್ರಪ್ಪ,ಪುರಾಣದೊಳಗೆ ಚರಿತ್ರೆಯ ಚಡಪಡಿಕೆ,ಪ್ರಜಾವಾಣಿ (ಸಾ.ಪು),ಪುಟ:8, 25-08-2002 
  •  ತೀ.ನಂ. ಶಂಕರನಾರಾಯಣ, ಜನಪದ ಮಹಾಕಾವ್ಯ, ಪುಟ: 55, 1996
  •  ಗಂಗಾಧರ ದೈವಜ್ಞ, ಮಾಳಿಂಗರಾಯನ ಕಾವ್ಯ, ಪುಟ: 12, 1999





Wednesday, 20 June 2012

ಭಾರತದಲ್ಲಿ ಉನ್ನತ ಶಿಕ್ಷಣ : ಇತ್ತೀಚಿನ ಹೊಸ ಆಯಾಮಗಳು




  ಬೇರೆ ಯಾವುದೇ ರಾಷ್ಟ್ರಗಳಿಗಿಂತ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶಿಕ್ಷಣದ ಅಗತ್ಯತೆ ಹೆಚ್ಚಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಸಮಾಜಗಳ ಸರ್ವ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಶಿಕ್ಷಣ ಪಡೆಯುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ಸರ್ಕಾರಕ್ಕೆ ತನ್ನ ಪ್ರಜೆಗಳಿಗೆ ಶಿಕ್ಷಣ ನೀಡುವುದು ಮೂಲಭೂತ ಕರ್ತವ್ಯವಾಗಿದೆ. ಇಂಥ ಪ್ರಜ್ಞೆಯೊಳಗೆ ನಮಗೆ ಎಂತಹ ಶಿಕ್ಷಣ ಬೇಕು ಎಂಬುದರ ಬಗ್ಗೆ ಸರ್ಕಾರಗಳು ಮತ್ತು ಪ್ರಜೆಗಳು ಸಾಕಷ್ಟು ಗಂಭೀರವಾಗಿ ಚಿಂತನ-ಮಂಥನ, ಪ್ರಯೋಗ -ಪ್ರಯತ್ನಗಳು ನಡೆಯುತ್ತಲೇ ಇವೆ

ಭಾರತದ ಶಿಕ್ಷಣ ವ್ಯವಸ್ಥೆ ಅನೇಕ ಹಂತಗಳನ್ನು ಹೊಂದಿದ್ದು , ಅವುಗಳಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಅಧ್ಯಯನ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಪದವಿಪೂರ್ವ ಅಂದರೆ 12 ನೇ ತರಗತಿಯ ನಂತರದ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಶಿಕ್ಷಣದ ಹಂತ ಎಂಬುದಾಗಿ ಭಾರತೀಯ ಜ್ಞಾನ ಆಯೋಗವು ವ್ಯಾಖ್ಯಾನಿಸಿದೆ.ಭಾರತದ ಶೈಕ್ಷಣಿಕ ಚರಿತ್ರೆಯನ್ನು ಗಮನಿಸಿದ ಯಾರಿಗಾದರೂ ತಟ್ಟನೆ ಹೊಳೆಯುವ ಸಂಗತಿ ಎಂದರೆ ಭಾರತ ಸರ್ಕಾರ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತಕ್ಕೆ ನೀಡಿದಷ್ಟು ಮಹತ್ವವನ್ನು ಉನ್ನತ ಶಿಕ್ಷಣಕ್ಕೆ ನೀಡಿಲ್ಲ. ಇದಕ್ಕೆ ಅದರದೇ ಆದ ಅನೇಕ ಕಾರಣಗಳಿವೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನೀಡುವುದು ಮಾತ್ರ  ಸರ್ಕಾರದ ಜವಾಬ್ಧಾರಿ ಉನ್ನತ ಶಿಕ್ಷಣ ಪಡೆಯುವುದು ಪ್ರಜೆಗಳ ಜವಾಬ್ಧಾರಿ ಎಂಬ  ಸರ್ಕಾರದ ಧೋರಣೆ ಪ್ರಮುಖ ಕಾರಣವಾಗಿದೆ. ಈ ಪರಿಸ್ಥಿತಿ 2005 ರಿಂದ ಬದಲಾಯಿತು ಇದಕ್ಕೆ ಕಾರಣವಾಗಿದ್ದು ಭಾರತೀಯ ಜ್ಞಾನ ಆಯೋಗದ ರಚನೆ. ಪ್ರಧಾನ ಮಂತ್ರಿಗಳ ಅತ್ಯುನ್ನತ ಮಟ್ಟದ ಶೈಕ್ಷಣಿಕ ಸಲಹಾ ಮಂಡಳಿಯಾದ ಇದು ಭಾರತದ ಉನ್ನತ ಶಿಕ್ಷಣದ ಸ್ಥಿತಿಗತಿಗಳನ್ನು ಅಧ್ಯಯನಮಾಡಿ, ಇಷ್ಟು ದೊಡ್ಡ ರಾಷ್ಟದ ಜನಸಂಖ್ಯೆಯಲ್ಲಿ  ಕೇವಲ ಶೇ. 7 ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆದವರಿದ್ದಾರೆ ಎಂಬ ವಾಸ್ತವವನ್ನು ಬಿಚ್ಚಿಟ್ಟಿತು. ಅಷ್ಟೆ ಅಲ್ಲದೇ ಇನ್ನು ಹದಿನೈದು ವರ್ಷಗಳಲ್ಲಿ ಅಂದರೆ 2020 ರ ವೇಳೆಗೆ ಉನ್ನತ ಶಿಕ್ಷಣದ ಪ್ರಮಾಣವನ್ನು ಕನಿಷ್ಟ ಶೇ.20 ಕ್ಕೆ ಹೆಚ್ಚಿಸಬೇಕೆಂದು ಸಲಹೆಮಾಡಿತು. ಇದರ ಪರಿಣಾಮ ಕೇಂದ್ರ ಸಕರ್ಾರ ತನ್ನ ಮೂಲ ನಿಲುವನ್ನು ಸಡಿಲಗೊಳಿಸಿ ಯುಜಿಸಿ ಯ ಮೂಲಕ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪ್ರಮಾಣ ಮತ್ತು ಪರಿಮಾಣದಲ್ಲಿ ಉನ್ನತೀಕರಿಸುವ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನಗಳ ಭಾಗವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗಗಳು ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದೆ . ಅದರಲ್ಲಿ ಮುಖ್ಯವಾಗಿ NAAC, CPE- UPE, Autonomous stetas, Innovative university, Deemed Universities  ಗಮನಿಸಬೇಕಾದ ಸಂಗತಿಗಳಾಗಿವೆ. ಇವುಗಳಲ್ಲಿAutonomous status, Innovative university  ಎನ್ನುವ ಹೊಸ ಪರಿಕಲ್ಪನೆಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯಬಹುದಾಗಿದೆ.

   ಅ. ಪದವಿ ಕಾಲೇಜುಗಳಿಗೆ ಸ್ವಾಯತ್ತತೆಯ ಸ್ಥಾನಮಾನ

        ಪ್ರಸ್ತುತ  ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳ ಅಂಗಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಮತ್ತು ಶೈಕ್ಷಣಿಕವಾದ ಎಲ್ಲಾ ಜವಾಬ್ದಾರಿಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳದ್ದಾಗಿದೆ. ಇತ್ತೀಚೆಗೆ ಈ ಕ್ಷೇತ್ರದಲ್ಲಿ 'ಸ್ವಾಯತ್ತತೆ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದರೆ, ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯದ ಅನೇಕ ಪದವಿ ಕಾಲೇಜುಗಳು ಶೈಕ್ಷಣಿಕ ಸ್ವಾಯತ್ತತೆ ಪಡೆದು ಮಿನಿ ವಿಶ್ವವಿದ್ಯಾಲಯಗಳಂತೆ ಕಾರ್ಯ ನಿರ್ವಹಿಸಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ, ಸ್ವಾಯತ್ತತೆ ಎಂದರೇನು? ಅದರ ಸ್ವರೂಪವೇನು? ಇದನ್ನು ಹೇಗೆ ಮತ್ತು ಯಾಕೆ ಜಾರಿಗೆ ತರಲಾಗುತ್ತೆ. ಜಾರಿಗೆ ತರುವಲ್ಲಿ ಎದುರಿಸಬೇಕಾದ ಸವಾಲುಗಳು ಯಾವುವು? ಇದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಎಂಬಿತ್ಯಾದಿ ಸಂಗತಿಗಳನ್ನು ಕುರಿತು ಚಚರ್ಿಸುವ ತುತರ್ು ನಮ್ಮೆಲ್ಲರ ಮುಂದಿದೆ.

           ಇಲ್ಲಿ ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ, ಪದವಿ ಕಾಲೇಜುಗಳು ಇನ್ನು ಪಡೆಯಲಿರುವ ಸ್ವಾಯತ್ತತೆ ಕೇವಲ ಶೈಕ್ಷಣಿಕ ಸ್ವಾಯತ್ತತೆ. ಉಳಿದಂತೆ ನೇಮಕಾತಿ, ನೌಕರರ ಜವಾಬ್ದಾರಿ ಇವೇ ಮೊದಲಾದ ಹಲವು ಜವಾಬ್ದಾರಿಗಳು ಎಂದಿನಂತೆ ಸಕರ್ಾರ ಮತ್ತು ವಿಶ್ವವಿದ್ಯಾಲಯಗಳ ಕೈಯಲ್ಲೇ ಉಳಿಯಲಿವೆ. ಶೈಕ್ಷಣಿಕ ಸ್ವಾಯತ್ತತೆ ಪಠ್ಯಕ್ರಮ ರಚನೆ, ಬೋಧನಕ್ರಮ ನಿಗಧಿ, ಪರೀಕ್ಷೆ ನಡೆಸುವುದು ಮೌಲ್ಯಮಾಪನ ಮಾಡಿಸುವುದು, ಅಂಕಪಟ್ಟಿ ನೀಡುವುದು ಹೀಗೆ ಶೈಕ್ಷಣಿಕವಾದ ಸರ್ವ ಅಧಿಕಾರಗಳನ್ನು ಕಾಲೇಜುಗಳಿಗೆ ನೀಡಲಿದೆ. 

       ಈ ಶೈಕ್ಷಣಿಕ ಸ್ವಾಯತ್ತತೆಯ ಬಗ್ಗೆ 1976 ರಲ್ಲಿಯೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೀತಿಯೊಂದನ್ನು ರೂಪಿಸಿತ್ತು. ಅದರಂತೆ ಕನರ್ಾಟಕದ ಮೈಸೂರು ಮತ್ತು ಬೆಂಗಳೂರು ನಗರಗಳ ಒಂದೆರಡು ಕಾಲೇಜುಗಳು ಸೇರಿದಂತೆ ದೇಶದ ಹಲವಾರು ಕಾಲೇಜುಗಳು ಸ್ವಾಯತ್ತತೆ ಪಡೆಯುವ ಪ್ರಯತ್ನ ನಡೆಸಿ ಅನುಮತಿಯನ್ನು ಕೂಡ ಪಡೆದಿದ್ದರು. ಆದರೆ ಎಲ್ಲಿಯೂ ಈ ವ್ಯವಸ್ಥೆ ಪೂರ್ಣ ಯಶಸ್ಸು ಕಾಣಲಿಲ್ಲ. ಸ್ವಾಯತ್ತತೆಯ ಬಗ್ಗೆ ಇದ್ದ ಹುಸಿ ಭಯಗಳೇ ಯಶಸ್ಸು ಕಾಣದಿರುವುದಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. . ಈಗ ಮತ್ತೆ ಭಾರತದ ಹಲವು ಕಾಲೇಜುಗಳು ಆ ಕಡೆ ಮುಖಮಾಡುವಂತಹ ವಾತಾವರಣವನ್ನು ನಿಮರ್ಾಣಮಾಡಲಾಗಿದೆ.  ವಿಶೇಷ ಸಂಗತಿ ಎಂದರೆ ಉತ್ತರ ಭಾರತದಲ್ಲಿ ಸ್ವಾಯತ್ತ ವ್ಯವಸ್ಥೆ ಈಗಲೂ ಯಶಸ್ವಿಯಾಗಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳು ಅದೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕನರ್ಾಟಕದ ಬೆಂಗಳೂರು, ಮಂಗಳೂರು, ಕುವೆಂಪು ವಿಶ್ವವಿದ್ಯಾನಿಲಯಗಳ ಕೆಲವು ಕಾಲೇಜುಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿವೆ. ದೇಶದಲ್ಲಿ ಪ್ರಸ್ತುತ ಸುಮಾರು 255 ಸ್ವಾಯತ್ತ ಕಾಲೇಜುಗಳಿವೆ. ಅದರಲ್ಲಿ ತಮಿಳುನಾಡು 86 ಸ್ವಾಯತ್ತ ಕಾಲೇಜುಗಳನ್ನು ಹೊಂದಿ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದರ ನಂತರ ಆಂದ್ರಪ್ರದೇಶ 34 ಕಾಲೇಜುಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ ಕನರ್ಾಟಕ 31 ಕಾಲೇಜುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಸ್ವಾಯತ್ತತೆ ಪಡೆಯುವುದು ಹೇಗೆ?
ಯು.ಜಿ.ಸಿ.ಯು ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಹಾಗೂ ಪದವಿ ಕಾಲೇಜುಗಳಿಗೆ ಅನೇಕ ಷರತ್ತುಗಳನ್ನು ವಿಧಿಸಿದ್ದು, ಉತ್ತಮ ಗುಣಮಟ್ಟ ಹಾಗೂ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ನಿದರ್ೇಶಿಸುತ್ತಿದೆ. ಇವುಗಳ ಗುಣಮಟ್ಟವನ್ನು ಅಳೆಯಲು ಯು.ಜಿ.ಸಿ ಅನೇಕ ಸಮಿತಿಗಳನ್ನು ನೇಮಿಸಿದೆ. ಇತ್ತೀಚೆಗೆ ಕಾಲೇಜುಗಳೀಗೆ ಬೇಟಿ ನೀಡುತ್ತಿರುವ 'ನ್ಯಾಕ್' ಅಂಥ ಒಂದು ಸಮಿತಿ. ಇಂಥ ಸಮಿತಿಗಳ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ಶೈಕ್ಷಣಿಕ ಸ್ವಾಯತ್ತತೆ ಪಡೆಯಲು ಅರ್ಹವಾಗಿರುತ್ತವೆ. ಉದಾ: ಯು.ಜಿ.ಸಿ.ಯ 12ಬಿ ಮತ್ತು ಅದಕ್ಕಿಂತ ಮೇಲಿನ ಗುಂಪಿಗೆ ಸೇರಿರುವ ಕಾಲೇಜುಗಳು ಸ್ವಾಯತ್ತತೆ ಬಯಸಿ ಅಜರ್ಿ ಸಲ್ಲಿಸಬಹುದಾಗಿದೆ.

ಸ್ವಾಯತ್ತತೆ ಪಡೆಯುವುದು ಅಷ್ಟು ಸರಳವೇನಲ್ಲ. ಅರ್ಹ ಕಾಲೇಜುಗಳು ತಮ್ಮ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯ - ಸಾಧನೆ, ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಇವೇ ಮೊದಲಾದ ಮೂಲಭೂತ ಸೌಕರ್ಯಗಳ ಲಭ್ಯತೆ: ಸಾಂಸ್ಕೃತಿಕ ಸಂಘ, ಕ್ರೀಡೆ, ಎನ್.ಸಿ.ಸಿ, ಎನ್ಎಸ್ಎಸ್ ಮೊದಲಾದ ಸಹಪಠ್ಯ ಚಟುವಟಿಕೆಗಳ ಸಾಮಥ್ರ್ಯ ಹಾಗೂ ಸಾಧನಗಳೇನು? ಎಂಬೆಲ್ಲಾ ವಿವರಗಳೊಂದಿಗೆ, ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಮೂಲಕ ಯು.ಜಿ.ಸಿಗೆ ಅಜರ್ಿ ಸಲ್ಲಿಸುತ್ತವೆ. ಆ ಅಜರ್ಿಯನ್ನು ಪರಿಶೀಲಿಸಿ ಪರಿಗಣಿಸುವಂತಿದ್ದರೆ ಯುಜಿಸಿಯು ಅಂಥ ಕಾಲೇಜುಗಳನ್ನು ಪರೀಕ್ಷಿಸಲು 'ಪರಿಣಿತ ಸಮಿತಿ' ಯನ್ನು ನೇಮಿಸುತ್ತದೆ. ಪರಿಣಿತ ಸಮಿತಿಯಲ್ಲಿ ಯು.ಜಿ.ಸಿ.ಯ ಉನ್ನತ ಅಧಿಕಾರಿಗಳು, ಈಗಾಗಲೇ ಸ್ವಾಯತ್ತತೆ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಈ ಸಮಿತಿ ಅಜರ್ಿ ಸಲ್ಲಿಸಿದ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ಅರ್ಹತೆ, ಶಕ್ತಿ -ಸಾಮಥ್ರ್ಯಗಳನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ ಸ್ವಾಯತ್ತತೆ ಕೊಡಬೇಕೆ? ಬೇಡವೇ? ಎಂಬುದರ ಬಗ್ಗೆ ವರದಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಕರ್ಾರಕ್ಕೆ ನೀಡುತ್ತದೆ. ಅಂಥ ವರದಿಯನ್ನಾಧರಿಸಿ ವಿಶ್ವವಿದ್ಯಾನಿಲಯ ಮತ್ತು ಸಕರ್ಾರದ ಅಭಿಪ್ರಾಯಗಳ       ಅನ್ವಯ ಯುಜಿಸಿ ಸ್ವಾಯತ್ತ ಸ್ಥಾನಮಾನವನ್ನು ಘೋಷಣೆಮಾಡುತ್ತದೆ. 

ಸ್ವಾಯತ್ತ ಕಾಲೇಜಿನ ಕಾರ್ಯ ಸ್ವರೂಪ

ಸ್ವಾಯತ್ತತೆ ಪಡೆದ ಕಾಲೇಜು ಶೈಕ್ಷಣಿಕ ಭಾಗದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊರಬೇಕಾಗುತ್ತದೆ. ಈ ವಿಷಯದಲ್ಲಿ ತಾನೇ ಒಂದು ವಿಶ್ವವಿದ್ಯಾಲಯವಾಗುತ್ತದೆ. ಹಾಗಾಗಿ ಕಾಲೇಜು ವಿವಿಧ ರೀತಿಯ ಕಾರ್ಯನಿರ್ವಹಣೆಗೆ ಈಗ ವಿಶ್ವವಿದ್ಯಾನಿಲಯಗಳಲ್ಲಿರುವಂತೆ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ, ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ, ಮೊದಲಾದ ಸಮಿತಿಗಳನ್ನು ರಚಿಸುತ್ತದೆ. ಈ ಎಲ್ಲಾ ಮಂಡಳಿಗಳೂ ಸಕರ್ಾರ, ಕುಲಪತಿ, ಪ್ರಾಂಶುಪಾಲರು ನಿಯೋಜಿಸಿದ ತಜ್ಞರು, ಕಾಲೇಜಿನ ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಒಂದು ವಿಶೇಷವೆಂದರೆ ಕಾಲೇಜಿನ ಹಾಲಿ ವಿದ್ಯಾಥರ್ಿ, ಹಳೆಯ ವಿದ್ಯಾಥರ್ಿಗಳಿಗೂ ಕೆಲವು ಮಂಡಳಿಗಳಲ್ಲಿ ಅವಕಾಶವಿರುತ್ತದೆ.

ಮೇಲ್ಕಾಣಿಸಿದ ಮಂಡಳಿಗಳಲ್ಲಿ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತವೆ. ಅಧ್ಯಯನ ಮಂಡಳಿ ಪಠ್ಯ ನಿಯೋಜನೆಯ ಮುಖ್ಯಕಾರ್ಯವನ್ನು ನಿರ್ವಹಿಸುತ್ತದೆ. ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿಸುತ್ತದೆ. ಹಣಕಾಸು ಮಂಡಳಿ ಕಾಲೇಜಿನ ಅಭಿವೃದ್ಧಿಯೋಜನೆಗಳನ್ನು ರೂಪಿಸುತ್ತದೆ. ಇವು ರೂಪಿಸಿದ ನೀತಿ ನಿಯಮಗಳಿಗೆ ಶೈಕ್ಷಣಿಕ ಮಂಡಳಿ ಅನುಮತಿ ನೀಡುತ್ತದೆ. ಒಟ್ಟಾರೆ ಸ್ವಾಯತ್ತತೆ ಕಾಲೇಜು ಪ್ರವೇಶ ನೀತಿ, ಶುಲ್ಕ ನೀತಿ, ಪಠ್ಯ ನಿಯೋಜನೆ, ಬೋಧನಾಕ್ರಮ, ಪರೀಕ್ಷೆಗಳ ಕ್ರಮ, ಮೌಲ್ಯಮಾಪನ ಪದ್ಧತಿ, ಅಂಕಪಟ್ಟಿ ನೀಡುವ ಕ್ರಮ ಹೀಗೆ ಶೈಕ್ಷಣಿಕವಾಗಿ ಸ್ವತಂತ್ರ ಪಡೆಯುತ್ತದೆ.

ಹಾಗಾಗಿ ಕಾಲೇಜಿನ ವಿವಿಧ ಸಮಿತಿಗಳ ದೃಷ್ಟಿ-ಧೋರಣೆಗಳು, ಶಕ್ತಿ-ಸಾಮಥ್ರ್ಯಗಳು ಹೇಗಿರುತ್ತವೆಯೋ ಅಂಥ ಶಿಕ್ಷಣ ಲಭ್ಯವಾಗಲಿದೆ. ಕಾಲೇಜು ತನ್ನಲ್ಲಿ ಪದವಿ ಮುಗಿಸಿದ ಅಭ್ಯಥರ್ಿಗಳಿಗೆ ಅಂಕಪಟ್ಟಿ ನೀಡುತ್ತದೆ. ನಂತರ ಕಾಲೇಜಿನ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾನಿಲಯ ಪದವಿ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಕಾಲೇಜುಗಳು ನಿರಂತರವಾದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರತಿ ಐದು ವರ್ಷಗಳಿಗೊಮ್ಮೆ ಯು.ಜಿ.ಸಿ ಸ್ವಾಯತ್ತ ಕಾಲೇಜನ್ನು ಕಾರ್ಯಸ್ವರೂಪ, ಫಲಿತಗಳು ಮೊದಲಾದ ವಿಷಯಗಳಲ್ಲಿ ಪರೀಕ್ಷೆಗೊಳಪಡಿಸುತ್ತದೆ. ಏನಾದರೂ ಅಸಮರ್ಥತೆ, ಕಾರ್ಯದೋಷಗಳು ಕಂಡುಬಂದಲ್ಲಿ ಅಂಥ ಕಾಲೇಜಿನ ಸ್ವಾಯತ್ತತೆಯನ್ನು ರದ್ದುಪಡಿಸುತ್ತದೆ. ಆದ್ದರಿಂದಲೇ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಕಾಲೇಜು ಸದಾ ಶ್ರಮಿಸಬೇಕಾಗುತ್ತದೆ.
  • ಕಾಲೇಜುಗಳಿಗೆ ಸ್ವಾಯತ್ತತೆ ನೀಡುವುದರಿಂದ ವಿದ್ಯಾಥರ್ಿಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಡೀ ಸಮಾಜಕ್ಕೆ      ಸಾಕಷ್ಟು ಅನುಕೂಲಗಳಾಗಲಿವೆ.
  • ಅತೀ ವಿಸ್ತಾರದ ವ್ಯವಸ್ಥೆಯೊಂದರಲ್ಲಿ ಎಲ್ಲಾ ಪ್ರದೇಶದ ಜನರ ಆಸೆಗಳು ಸಾಧ್ಯವಾಗುವುದು ಕಷ್ಟ. ಇಂಥ ಕಷ್ಟಗಳನ್ನು ಸಾಧ್ಯವಾಗಿಸುವಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕಾಲೇಜು ಸಮಾಜದ ನಿರೀಕ್ಷಿತ ಕ್ಷೇತ್ರಗಳಿಗೆ ಬೇಕಾದ ಕೌಶಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ, ವಿದ್ಯಾಥರ್ಿಗಳನ್ನು ಸ್ಪಧರ್ಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಬಹುದಾಗಿದೆ.
  • ಕಾಲೇಜಿನಲ್ಲಿ ಆಡಳಿತವನ್ನು ಹಾಗೂ ಅಧ್ಯಾಪಕ ಕಾರ್ಯದಕ್ಷತೆಯನ್ನು ಇವುಗಳ ಜೊತೆಗೆ ವಿದ್ಯಾಥರ್ಿಗಳಲ್ಲಿ ಶ್ರಮದಾಯಕ ಮನೋಭಾವವನ್ನು ಹೆಚ್ಚಿಸಲು ಸಾಧ್ಯ.
  • ಕಾಲೇಜಿನ ಶೈಕ್ಷಣಿಕ, ಸಂಶೋಧನಾತ್ಮಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ದೊರೆಯಲಿದೆ. ಈಗ ಯುಜಿಸಿಯ ಮಾನ್ಯತೆ ಗಳಿಸಿರುವ ಕಾಲೇಜುಗಳು ಐದು ವರ್ಷದ ಒಂದು ಯೋಜನೆಯಲ್ಲಿ 5 ಲಕ್ಷ ಮಾತ್ರ ಪಡೆಯಲಿವೆ. ಸ್ವಾಯತ್ತತೆ ಪಡೆದರೆ ಒಂದು ವರ್ಷಕ್ಕೆ 10 ರಿಂದ 15 ಲಕ್ಷ ಅನುದಾನ ಪಡೆಯಬಹುದಾಗಿದೆ. ಸ್ವಾಯತ್ತತೆಯಲ್ಲಿ ಸಾಕಷ್ಟು ಯಶಸ್ಸುಕಂಡರಂತೂ ವರ್ಷಕ್ಕೆ 1 ಕೋಟಿ ಅನುಧಾನ ಪಡೆಯಲಿಕ್ಕೆ ಸಾಧ್ಯವಿದೆ.
  • ಅಧ್ಯಾಪಕರು ಸಂಶೋಧನ ಯೋಜನೆಗಳ ಮೂಲಕ ತಾವು ಸ್ವಂತ ಬೆಳವಣಿಗೆ ಕಾಣುವುದಕ್ಕೆ ಈ ವ್ಯವಸ್ಥೆಯಲ್ಲಿ ವಿಪುಲ ಅವಕಾಶಗಳಿವೆ.

       ಇಂಥ ಒಳ್ಳೆಯ ಅನುಕೂಲಗಳ ಜೊತೆಗೆ ಕೆಲವು ಅನಾನುಕೂಲಗಳು ಆಗಲಿವೆ ಎಂಬುದೇ ವಿದ್ಯಾಥರ್ಿಗಳನ್ನು ಪೋಷಕರನ್ನು ಆತಂಕಕ್ಕೆ ಒಳಗುಮಾಡಿದೆ. ಇದರಿಂದಾಗುವ ಅನಾನುಕೂಲಗಳಲ್ಲಿ ಕೆಲವನ್ನು ಹೇಳುವುದಾದರೆ ಅವು ಹೀಗಿವೆ.
  • ಸ್ವಾಯತ್ತತೆ ಪಡೆಯಲಿರುವ ಕಾಲೇಜುಗಳಲ್ಲಿ ಖಾಸಗೀ ಕಾಲೇಜುಗಳೇ ಹೆಚ್ಚಾಗಿರುತ್ತವೆ. ಕಾರಣ ಸಕರ್ಾರಿ ಕಾಲೇಜುಗಳಿಗಿಂತ ಹೆಚ್ಚು ಸಮರ್ಥವಾಗಿರುವುದು ಖಾಸಗಿ ಕಾಲೇಜುಗಳೇ. ಖಾಸಗಿಯವರಿಗೆ ಇಂಥ ಅಧಿಕಾರಗಳು ಲಭ್ಯವಾದರೆ ಪದವಿ ಶಿಕ್ಷಣವೂ ಕೂಡ ಬಡಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗುವ ಸಂಭವವಿದೆ. ಸಕರ್ಾರಿ ಕಾಲೇಜುಗಳೂ ಕೂಡ ಸ್ವಾಯತ್ತತೆಯನ್ನು ಪಡೆದ ಮೇಲೆ ಖಾಸಗೀ ಕಾಲೇಜುಗಳ ಮೊತ್ತೊಂದು ಮುಖ ಆಗುವುದರಲ್ಲಿ ಸಂಶಯವಿಲ್ಲ.
  • ಪರೀಕ್ಷೆ-ಮೌಲ್ಯಮಾಪನ ಮೊದಲಾದ ಮಹತ್ವಕೆಲಸ-ಕಾರ್ಯಗಳ ಜವಾಬ್ದಾರಿ ಕಾಲೇಜಿನದೇ ಆಗಿರುವುದರಿಂದ ಜಾತಿವ್ಯಾಮೋಹ, ಸ್ವಜನ ಪಕ್ಷಪಾತಗಳು ಮತ್ತಿತರ ಭ್ರಷ್ಟಾಚಾರಗಳು ನಡೆಯುವುದಿಲ್ಲ ಎಂದು ನಂಬುವುದಾದರೂ ಹೇಗೆ?
  • ಒಂದೊಂದು ಕಾಲೇಜಿಗೆ ಒಂದೊಂದು ಪಠ್ಯಕ್ರಮ ಇರುವುದರಿಂದ ಪಠ್ಯಗಳ ಅಲಭ್ಯತೆ, ಹೊಸ ಹೊಸ ಪಠ್ಯಗಳಾದರೆ ಅಧ್ಯಾಪಕರ ಅಸಮರ್ಥತೆಗಳನ್ನು ಬಗೆಹರಿಸುವುದು ಕಷ್ಟ ಸಾಧ್ಯವಾಗುತ್ತದೆ.
  • ಇಂಥ ಸಾಧಕ-ಬಾಧಕಗಳ ನಡುವೆಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆ ಸಾಧ್ಯವಾಗಬೇಕಾದರೆ ಅಧ್ಯಾಪಕರ ಕಾರ್ಯನಿಷ್ಠತೆ, ಜವಾಬ್ದಾರಿಗಳು ಹಾಗೂ ಒಟ್ಟು ವ್ಯವಸ್ಥೆಯ ಪಾರದರ್ಶಕತೆಗಳು ಅತೀ ಮುಖ್ಯವಾಗುತ್ತವೆ. ಆ ಗುಣಗಳನ್ನು ಕಾಲೇಜುಗಳ ಮೈಗೂಡಿಸಿಕೊಳ್ಳಬೇಕಷ್ಟೇ.


ಆ. ಮಾದರಿ ವಿಶ್ವವಿದ್ಯಾಲಯಗಳ (Innovative Universities)  ರಚನೆ

         ಇಂದು ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಹಲವಾರು ಆಂತರಿಕ ದೋಷಗಳು ಹಾಗೂ ವಿಪರೀತ ರಾಜಕೀಯ ಹಸ್ತಕ್ಷೇಪದ ಕಾರಣದಿಂದಾಗಿ ರೋಗಗ್ರಸ್ಥ ವ್ಯವಸ್ಥೆಯಾಗಿ ಮಾಪರ್ಾಡಾಗಿದೆ. ಇದೇ ಸಂದರ್ಭಕ್ಕೆ ಶಿಕ್ಷಣ, ಉದಾರೀಕರಣ ನೀತಿಗಳಿಗೊಳಗಾದ ಪರಿಣಾಮವಾಗಿ ವಿದೇಶಿ ವಿಶ್ವವಿದ್ಯಾಲಯಗಳು ಭಾರತದೊಳಕ್ಕೆ ಪ್ರವೇಶ ಪಡೆಯಲಾರಂಭಿಸಿವೆ. ಹಾಗಾಗಿ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪುನರ್ರಚಿಸುವ ಅಗತ್ಯತೆಯನ್ನು ಭಾರತದ ಜ್ಞಾನ ಆಯೋಗ ಒತ್ತಿ ಹೇಳಿದೆ. ಈ ಹಿನ್ನೆಲೆಯೊಳಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಗಂಭೀರವಾಗಿ ಆಲೋಚಿಸಿದ ಪರಿಣಾಮ ಮಾದರಿ ವಿಶ್ವವಿದ್ಯಾಲಯಗಳ (ಟಿಟಿಠತಚಿಣತಜ ಗಟಿತಜಡಿಣಥಿ) ಕಲ್ಪನೆ ಒಡಮೂಡಿದೆ. ಭಾರತದಲ್ಲಿ ಇಂಥ ಪ್ರಯತ್ನದ ಫಲವಾಗಿ ಸುಮಾರು 14 ವಿಶ್ವವಿದ್ಯಾಲಯಗಳು ಹಳೆಯ ಪದ್ಧತಿಗಳಿಂದ ಬಿಡುಗಡೆಗೊಂಡು ನವೀನಾತ್ಮಕ ವಿಶ್ವವಿದ್ಯಾಲಯಗಳ ರೂಪವನ್ನು ಪಡೆಯುವ ಪ್ರಯತ್ನದಲ್ಲಿವೆ. ಕನರ್ಾಟಕದಲ್ಲೂ ಆ ರೀತಿಯ ಪ್ರಯತ್ನಗಳು ಆರಂಭಗೊಂಡಿದ್ದು ಮೈಸೂರು ಹಾಗೂ ಕನರ್ಾಟಕ ವಿಶ್ವವಿದ್ಯಾಲಯಗಳು ನವೀನ ರೂಪ ಪಡೆಯುವ ಅಂತಿಮ ಹಂತದಲ್ಲಿವೆ.
ಮಾದರಿ ವಿಶ್ವವಿದ್ಯಾಲಯಗಳ ಉದ್ದೇಶ-ಗುರಿಗಳಿಗನುಗುಣವಾಗಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು ಅವು ಹಳೆಯ ಕಾಯ್ದೆಗಿಂತ ಭಿನ್ನವಾಗಿವೆ. ಇಲ್ಲಿ ಮೊದಲಿಗೆ ಹೊಸ ರೂಪದಲ್ಲಿ ಹೊರಹೊಮ್ಮುವ ವಿಶ್ವವಿದ್ಯಾಲಯಗಳಿಗೆ ಬೇಕಾಗಿರುವ ಉದ್ದೇಶ-ಗುರಿಗಳನ್ನು ಪ್ರಸ್ತಾಪಿಸಿದ್ದು ಅವು ಈ ಮುಂದಿನಂತಿವೆ.
  • ಸಮಕಾಲೀನ ಸ್ಪಧರ್ಾತ್ಮಕ ಪರಿಸರದಲ್ಲಿ ಸಮರ್ಥವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವುದು.
  • ಇಂದು ಕುಸಿಯಲಾರಂಬಿಸಿರುವ ಶೈಕ್ಷಣಿಕ, ಆಡಳಿತಾತ್ಮಕ, ಸಂಶೋಧನೆಯ ಗುಣಮಟ್ಟವನ್ನು ನಿಯಂತ್ರಿಸುವುದು.
  • ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಬೇರ್ಪಡಿಸುವ ಮತ್ತು ಅಧಿಕಾರಗಳನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ಬೇಕಾಗಿರುವ ಸ್ವಾಯತ್ತತೆಯನ್ನು ನೀಡುವುದು.
  • ಅಂತರ್ ಶಿಸ್ತೀಯ ಹಾಗೂ ಬಹು ಶಿಸ್ತೀಯ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂರಚನೆಗಳಲ್ಲಿ ಮಹಾನ್ ನಮನೀಯತೆಯನ್ನು (ಈಟಜಥಛಟಣಥಿ) ತರುವುದು.
  • ನೀತಿ-ನಿಯಮಗಳು ಹಾಗೂ ಕಾರ್ಯಕ್ರಮಗಳ ಮೂಲಕ ಮಾನವೀಯ ವ್ಯಕ್ತಿತ್ವದ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದು.

        ಈ ಪ್ರಧಾನ ಉದ್ದೇಶಗಳ ಜೊತೆಗೆ ವಿಶ್ವವಿದ್ಯಾಲಯಗಳು ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿರಬೇಕು. ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಮೊದಲಾದ ಸಮಾಜಿಕ ದುರ್ಬಲರಿಗೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು ನೀಡುವ ಗುರಿಗಳನ್ನು ನಿಗದಿಪಡಿಸಲಾಗಿದೆ.

    ಇಂಥ ದೊಡ್ಡ ಪ್ರಮಾಣದ ಧೇಯ್ಯೋದ್ದೇಶಗಳು ಸಾಕಾರಗೊಳಿಸಲು ವಿಶ್ವವಿದ್ಯಾಲಯಗಳು ನಿದರ್ಿಷ್ಟವಾದ ಪ್ರಾಧಿಕಾರಗಳನ್ನು ಹಾಗೂ ಅವುಗಳ ಮುಖ್ಯಸ್ಥ ಅಧಿಕಾರಿಗಳನ್ನು ಸ್ಥಾನೀಕರಣಗೊಳಿಸಲಾಗಿದೆ. ಇಡೀ ವಿಶ್ವವಿದ್ಯಾಲಯಕ್ಕೆ ಉನ್ನತಾಧಿಕಾರಿಯಾಗಿ ಸವರ್ೋಚ್ಚ ಅಧಿಕಾರವುಳ್ಳ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಹಳೆಯ ಪದ್ಧತಿಯಲ್ಲಿ ರಾಜ್ಯಪಾಲರಿಗಿದ್ದ ಎಲ್ಲಾ ಅಧಿಕಾರಗಳು ಇವರಿಗಿರುತ್ತವೆ. ವಿ.ವಿ.ಗೆ ಕುಲಪತಿಗಳನ್ನು ನೇಮಿಸಿರುವುದರಿಂದ ಹಿಡಿದು ಹಲವು ಅಧಿಕಾರಿಗಳನ್ನು ನೇಮಿಸುವ ಹಾಗೂ ಅವರನ್ನು ನಿಯಂತ್ರಿಸುವ ಅಧಿಕಾರ ಇವರಿಗೆ ಇರತ್ತದೆ. ಇಂಥ ಅಧ್ಯಕ್ಷರನ್ನು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭಾಪತಿ, ವಿರೋಧಪಕ್ಷದ ನಾಯಕರು, ರಾಜ್ಯದ ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಗಳನ್ನೊಳಗೊಂಡ ಸಮಿತಿ ಆಯ್ಕೆಮಾಡುತ್ತದೆ. ಅಧ್ಯಕ್ಷರ ಆಯ್ಕೆಗೆ ಇರುವ ಪ್ರಮುಖ ಮಾನದಂಡಗಳೆಂದರೆ: ಅಧ್ಯಕ್ಷರಾಗುವವರಿಗೆ ಶಿಕ್ಷಣ/ಸಂಶೋಧನೆ/ಉಧ್ಯಮ/ಕಾನೂನು ಈ ಕ್ಷೇತ್ರಗಳಲ್ಲಿ ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದ್ಲಲಾಗಲಿ ಅತ್ಯುತ್ತಮ ಸಾಧನೆ ಮಾಡಿರಬೇಕು. ಈ ಕಾಯ್ದೆಯನ್ನು ಅಳವಡಿಸಿಕೊಂಡ ಪ್ರತೀ ವಿಶ್ವವಿದ್ಯಾಲಯಕ್ಕೂ ಪ್ರತ್ಯೇಕವಾಗಿ ಅಧ್ಯಕ್ಷರು ಇರುತ್ತಾರೆ. ಅಧ್ಯಕ್ಷರು ನೇಮಕವಾದ ತಕ್ಷಣ ರಾಜ್ಯಪಾಲರು ಹಾಗೂ ಸಕರ್ಾರ ವಿಶ್ವವಿದ್ಯಾಲಯದ ಆಡಳಿತಕ್ಕೆ ಕೇವಲ ಸಲಹೆಗಾರರಾಗಿ, ಪ್ರವರ್ತಕರಾಗಿರುತ್ತಾರೆ. ಅಧ್ಯಕ್ಷ ಹುದ್ದೆ ವಿಶ್ವವಿದ್ಯಾಲಯಕ್ಕೆ ಹೊಸ ಸೃಷ್ಟಿಯಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಯುವ ಉದ್ದೇಶಕ್ಕೆ ಪೂರಕವಾದ ಬೆಳವಣಿಗೆಯಾಗಿದೆ. 

       ಪ್ರಸ್ತುತ ನವೀನಾತ್ಮಕ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ಪುನರ್ ರಚನೆಗೊಳುವ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ಮೂರು ಹಂತಗಳಲ್ಲಿ ರೂಪುಗೊಳ್ಳುತ್ತವೆ. ಆ ಮೂರು ಹಂತಗಳೆಂದರೆ ಸಾಮಾನ್ಯ ವ್ಯವಸ್ಥೆ, ಏಕೀಕೃತ ವ್ಯವಸ್ಥೆ. ಸಂಯೋಜಿತ ವ್ಯವಸ್ಥೆ ಈ ವ್ಯವಸ್ಥೆಗಳಲ್ಲಿ ನಿಧರ್ಿಷ್ಟವಾದ ಅಧಿಕಾರಿಗಳು ಹಾಗೂ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ವ್ಯವಸ್ಥೆಗಳ ರಚನೆಗಳನ್ನು ಮುಂದಿನಂತೆ ವಿವರಿಸಬಹುದು.

1. ಸಾಮಾನ್ಯ ವ್ಯವಸ್ಥೆ (General  System)
ಪ್ರಸ್ತತ ವ್ಯವಸ್ಥೆಯಲ್ಲಿ ಅಧ್ಯಕ್ಷರು, ಕುಲಪತಿಗಳು, ಕುಲಸಚಿವರು, ಹಣಕಾಸು ಅಧಿಕಾರಿಗಳು, ಓಂಬಡ್ಸ್ಮನ್ ಮೊದಲಾದ ಅಧಿಕಾರಿಗಳು; ಆಡಳಿತ ಮಂಡಳಿ, ಓಂಬಡ್ಸ್ಮನ್ ಸಮಿತಿ, ಹಣಕಾಸು ಮತ್ತು ಲೆಕ್ಕಪತ್ರ ಸಮಿತಿ ಮುಂತಾದ ಪ್ರಾಧಿಕಾರಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ. ಇದರಲ್ಲಿ ಅಧ್ಯಕ್ಷರು ಹಾಗೂ ಓಂಬಡ್ಸ್ಮನ್ ಕಲ್ಪನೆಗಳು ನವೀನಾತ್ಮಕವಾದವು. ಹಾಗೆಯೇ ಆಡಳಿತ ಮಂಡಳಿ ಹಳೆಯ ಪದ್ಧತಿಯ ಸಿಂಡಿಕೇಟ್ನ ಮರುನಾಮಕರಣವಾಗಿದೆ.

2. ಏಕೀಕೃತ ವ್ಯವಸ್ಥೆ (Unitary System)  
ಇದರಲ್ಲಿ ಶೈಕ್ಷಣಿಕ ಮಂಡಳಿ, ನೇಮಕಾತಿ ಮಂಡಳಿ ಈಚಿಛಿಣಟಣಥಿ ಅಠಣಟಿಛಿಟ, ಖಜಜಚಿಡಿಛಿ ಚಿಟಿಜ ಟಿಟಿಠತಚಿಣಠಟಿ ಅಠಣಟಿಛಿಟ ಮೊದಲಾದ ಪ್ರಾಧಿಕಾರಗಳು; ಸಮ ಕುಲಾಧಿಪತಿ, ವಿವಿಧ ನಿಕಾಯಗಳ ಡೀನರು, ಜ್ಞಾನ ಸಂಪನ್ಮೂಲ ನಿರದ್ಏಶಕರು, ದೈಹಿಕ ಶಿಕ್ಷಣ ಹಾಗೂ ವಿದ್ಯಾಥರ್ಿ ಕ್ಷೇಮಪಾಲನಾ ನಿದರ್ೇಶಕರು, ಸಂಶೋಧನಾ ಗುಣಮಟ್ಟ ಮತ್ತು ನವೀನತೆಯ   ನಿರ್ದೇಶಕರು  ಮೊದಲಾದ ಅಧಿಕಾರಿಗಳು ಸ್ಥಾನೀಕರಣಗೊಂಡಿರುತ್ತಾರೆ. ಇಲ್ಲಿ ಹಲವಾರು ಹುದ್ದೆಗಳು ಮತ್ತು ಪ್ರಾಧಿಕಾರಗಳು ಹೊಸ ಸೃಷ್ಠಿಗಳಾಗಿವೆ. ಮುಖ್ಯವಾಗಿ ಸಮಕುಲಾಧಿಪತಿ ಹುದ್ದೆ ಇದಕ್ಕೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರನ್ನು ನೇಮಿಸಲಾಗುತ್ತದೆ. ಇಡೀ ಏಕೀಕೃತ ವ್ಯವಸ್ಥೆಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಈವರೆಗೆ ದೈಹಿಕ ಶಿಕ್ಷಣ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗಗಳು ಬೇರೆಯಾಗಿದ್ದು ಪ್ರಸ್ತುತ ವ್ಯವಸ್ಥೆಯಲ್ಲಿ ಒಂದೇ ವಿಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಂಶೋಧನೆಯಲ್ಲಿ ನವೀನತೆತಂದು ಅದರ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಒಂದು ವಿಭಾಗ ಮತ್ತು ಅದಕ್ಕೊಂದು  ನಿರ್ದೇಶಕರ ಹುದ್ದೆಯನ್ನು ಸೃಜಿಸಿರುವುದು ವಿಶೇಷವಾಗಿದೆ. 

3. ಸಂಯೋಜಿತ ವ್ಯವಸ್ಥೆ (Affiliation System)
ಇಲ್ಲಿ ನಿರ್ವಹಣಾ ಮಂಡಳಿ, ಸಂಯೋಜನೆ ಮತ್ತು ಪರೀಕ್ಷಾ ಮಂಡಳಿ, ಮುಕ್ತ ಮತ್ತು ದೂರ ಶಿಕ್ಷಣ ಮಂಡಳಿ, ಅಧ್ಯಯನ ಮಂಡಳಿ ಇತ್ಯಾದಿ ಪ್ರಾಧಿಕಾರಗಳು ಅಸ್ತಿತ್ವದಲ್ಲಿದ್ದು ಇವುಗಳನ್ನು ನಿರ್ವಹಿಸಲು ಪ್ರತೀ ವಿಭಾಗಕ್ಕೆ ಒಬ್ಬೊಬ್ಬ ನಿರ್ದೇಶಕರು ಇರುತ್ತಾರೆ. ಇವರೆಲ್ಲರನ್ನು ಮೇಲ್ವಿಚಾರಣೆ ಮಾಡಲು ಮತ್ತೊಬ್ಬ ಸಮಕುಲಾಧಿಪತಿ ಇರುತ್ತಾರೆ.

ವಿಮರ್ಶೆ

ಉದ್ದೇಶಿತ ಮಾದರಿ ವಿಶ್ವವಿದ್ಯಾಲಯಗಳ ಸ್ಥಾಪನೆ ಅಥವಾ ಮರು ರೂಪಣೆಯ ಹಿಂದೆ ಇರುವ ಉದ್ದೇಶ-ಗುರಿಗಳನುಸಾರವಾಗಿ ಮೇಲಿನಂತೆ ಹಳೆಯ ವ್ಯವಸ್ಥೆಯನ್ನು ಮಾಪರ್ಾಡು ಮಾಡಲಾಗಿದೆ. ಮೇಲು ನೋಟಕ್ಕೆ ಆಕರ್ಷಕವಾಗಿ ಕಾಣುವ ಈ ನಿಯಮಗಳು ನಿಜವಾಗಿ ಮೂಲ ಉದ್ದೇಶಗಳನ್ನು ಈಡೇರಿಸುತ್ತವೆಯೆ? ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು ಇದರಿಂದ ಸಾಧ್ಯವೇ? ಶಿಕ್ಷಣ ಹಾಗೂ ಸಂಶೋಧನೆಗಳ ಗುಣಮಟ್ಟ ಪ್ರಸ್ತುತ ವ್ಯವಸ್ಥೆಯಿಂದ ಸುಧಾರಿಸಬಲ್ಲ್ಲುದಾ? ವಿಕೇಂದ್ರಿಕರಣದಿಂದ ಆಡಳಿತ ಶಕ್ತಿಶಾಲಿಯಾಗಬಲ್ಲದಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಕೇಳಿಕೊಳ್ಳಬೇಕು. ಇಂಥ ಪ್ರಶ್ನೆಗಳು ಪ್ರಸ್ತುತ ಮಸೂದೆಯನ್ನು ವಿಮಶರ್ಾತ್ಮಕವಾಗಿ ನೋಡಲು ಪ್ರೇರೇಪಿಸುತ್ತವೆ. ಈ ಹಿನ್ನೆಲೆಯೊಳಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದು.
  • ಉದ್ದೇಶಿತ ಸದರಿ ಮಸೂದೆಯು ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು, ಅಧಿಕಾರ ವಿಕೇಂದ್ರಿಕರಣಗೊಳಿಸುವ ಉದ್ದೇಶದಿಂದ ಕಂಡುಕೊಂಡಿರುವ ಹೊಸ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ನೀಡಿರುವ ಅಧಿಕಾರಗಳು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತವೆ. ಅಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಇದೆಯಾದರೂ ಅದು ಸಮಕಾಲೀನ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದು ನಮಗೆ ಎದುರಾಗುವ ಮೊದಲ ಪ್ರಶ್ನೆ. ಅಧ್ಯಕ್ಷರ ಹುದ್ದೆಗೆ ಬರುವವರು ಕೇವಲ ಶೈಕ್ಷಣಿಕ ವಲಯದಿಂದಲೇ ಬರಬೇಕಿಲ್ಲ. ಕೈಗಾರಿಕಾ ಉದ್ಯಮಿಗಳು ಕೂಡ ಈ ಸ್ಥಾನಕ್ಕೆ ಅರ್ಹವಾದ್ದರಿಂದ ಅಂಥ ಹಿನ್ನಲೆಯಿಂದ ಬಂದವರು ಶಿಕ್ಷಣಪದ್ಧತಿಯನ್ನು ಒಂದು ಉದ್ಯಮವೆಂಬಂತೆ ನೋಡುವುದರಲ್ಲಿ ಅನುಮಾನವಿಲ್ಲ. ಹೀಗಾದರೆ ಅದರ ದುಷ್ಪರಿಣಾಮಗಳು ಅಗಾಧವಾಗಿರುತ್ತವೆ. ಇನ್ನೂ ಅಧಿಕಾರ ವಿಕೇಂದ್ರಿಕರಣ ನೆಪದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥೆಯೊಳಗೆ ಸೃಷ್ಟಿಯಾಗಲಿರುವ ಓಂಬಡ್ಸ್ಮನ್, ಸಮಕುಲಾದಿಪತಿಗಳು, ಆಡಳಿತ ಮಂಡಳಿ ಈ ವಿಭಾಗಗಳ ಮಧ್ಯೆ ವೃತ್ತಿ ಕಲಹಗಳು ಹೆಚ್ಚಾಗುವ ಸಂಭವವೇ ಹೆಚ್ಚಾಗಿದೆ. ಇದೆಲ್ಲದರ ನಡುವೆ  ಸರ್ಕಾರದ ಪಾತ್ರ ನಗಣ್ಯವೆ? ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಸರ್ಕಾರದಿಂದಲೇ ನೇಮಕಗೊಳ್ಳುವವರಾದ್ದರಿಂದ ಇವರು ರಾಜಕಾರಣದ ಮುಖವಾಡವಾಗಿ ಕೆಲಸ ಮಾಡುತ್ತಾರೆಂಬುದು ಈಗಿನ ಕಲುಷಿತ ರಾಜಕೀಯ ವ್ಯವಸ್ಥೆಯನ್ನು ಗಮನಿಸಿ ಯಾರಿಗೂ ಅರ್ಥವಾಗುವ ಸಂಗತಿಯಾಗಿದೆ. 
  • ಜಾಗತೀಕ ಮಟ್ಟಕ್ಕೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ಗುಣಮಟ್ಟವನ್ನು ಎತ್ತರಿಸುವ ಆಶಯವುಳ್ಳ ಈ ಮಸೂದೆಯಲ್ಲಿ, ಅಂಥ ಬೆಳವಣಿಗೆಗೆ ಬೇಕಾದ ನಿರ್ದಿಷ್ಟ ಕಲ್ಪನೆಗಳು ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಆಶಯ ಈಡೇರುವುದಕ್ಕೆ ಶಿಕ್ಷಕರ ಬೆಳವಣಿಗೆ ಹಾಗೂ ವೃತ್ತಿಕೌಶಲಗಳು, ಇವುಗಳಿಗಿಂತ ಹೆಚ್ಚಾಗಿ ಕೆಲಸ ಮಾಡುವ ಮನಸ್ಸು ಬೇಕಾಗುತ್ತದೆ. ಶಿಕ್ಷಕರಲ್ಲಿ ಇಂಥ ಮನಸ್ಥಿತಿಯನ್ನು ತರುವುದಕ್ಕೆ ವಿಶ್ವವಿದ್ಯಾಲಯ ಮಾಡಬೇಕಾದ ಪ್ರಯತ್ನ ಎಂಥದ್ದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. 
  • ವಿಶ್ವವಿದ್ಯಾಲಯದಲ್ಲಿ ಉನ್ನತಮಟ್ಟದ ಸಂಶೋಧನೆಗಳು ನಡೆಯಬೇಕೆಂಬುದರ ಬಗ್ಗೆ ಯಾರದು ಭಿನ್ನಾಭಿಪ್ರಾಯಗಳು ಇರಲಾರವು. ಆದರೆ ಪ್ರಶ್ನೆ ಇರುವುದು ಅದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳು ಮತ್ತು ಹಣಕಾಸಿನ ಸೌಲಭ್ಯಗಳು ಎಲ್ಲಿಂದ ದೊರೆಯುತ್ತವೆ. ಸಕರ್ಾರಗಳು ಯಾವುದೇ ಯೋಜನೆಗಳ ತತ್ವಗಳನ್ನು ಒಪ್ಪಿಕೊಂಡಷ್ಟು ಸುಲಭವಾಗಿ  ಆರ್ಥಿಕ ಸಹಾಯವನ್ನು ನೀಡಲು ಒಪ್ಪಲಾರವು. ಸರ್ಕಾರಗಳ ಇಂಥ ಇಬ್ಬಗಿಯ ನೀತಿಗಳು ಉದ್ದೇಶಿತ ಗುರಿಗಳನ್ನು ತಲುಪುವದಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯೊಳಗೆ ವಿಶ್ವವಿದ್ಯಾಲಯಗಳು ಹಠಕ್ಕೆ ಬಿದ್ದರೆ ವಿದ್ಯಾರ್ಥಿಗಳ ಶುಲ್ಕವನ್ನು ಏರಿಸಿಕೊಳ್ಳಬಹುದು. ಇದು ಕೂಡ ಮತ್ತೊಂದು ದೊಡ್ಡ ಸಮಸ್ಯೆಗೆ ನಮ್ಮೆಲ್ಲರನ್ನು ಸಿಲುಕಿಸುತ್ತದೆ.
  • ಈ ಮಸೂದೆಯ ಹಿಂದಿರುವ ಗುಪ್ತ ಅಜೆಂಡಗಳೆಂದರೆ ಭಾರತಕ್ಕೆ ಪ್ರವೇಶಿಸುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನ ಕಲ್ಪಿಸಿಕೊಡುವುದು ಮತ್ತು ಸ್ವಾಯತ್ತತೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದೇ ಆಗಿದೆ. ಇದಕ್ಕೆ ಬೇಕಾಗಿರುವ ನಿಯಮಗಳು ಮಸೂದೆಯಲ್ಲಿ ಸೇರ್ಪಡೆಯೂ ಆಗಿವೆ. ಹಾಗಾಗಿ ಮಸೂದೆಯ ಈ ಮುಖದ ಬಗೆಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ.
  • ಪ್ರಸ್ತುತ ಮಸೂದೆಯಲ್ಲಿ ಕಂಡುಬರುವ ಮತ್ತೊಂದು ದೋಷವೆಂದರೆ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರಗಳನ್ನಷ್ಟೇ ಅಲ್ಲದೆ ಕೈಗಾರಿಕೋದ್ಯಮಗಳು, ಖಾಸಗೀ ಸಂಘ-ಸಂಸ್ಥೆ-ವ್ಯಕ್ತಿಗಳು ಅಷ್ಟೇ ಅಲ್ಲದೆ ವಿದೇಶಿ ಮೂಲಗಳಿಂದಲೂ ಸಹಾಯ ಪಡೆದುಕೊಳ್ಳಬಹುದಾಗಿದೆ. ಹೀಗೆ ಮಾಡುವುದರಿಂದ ನಾವು ಅಂದು ಕೊಂಡಿರುವ ಗುರಿಗಳನ್ನು ತಲುಪಲು ಹಲವಾರು ರೀತಿಯ ಅಡಚಣೆಗಳು ಎದುರಾಗುತ್ತವೆ.
  • ನೇಮಕಾತಿಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಗುಣಮಟ್ಟ ಇವೆರಡು ಸಮಾನವಾಗಿ ಪರಿಗಣಿತವಾಗಬೇಕಾಘಿದೆ. ಇದು ಕೂಡ ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಕಷ್ಟಸಾಧ್ಯ ಎನ್ನಬೇಕಾಗುತ್ತದೆ.
  • ಇನ್ನೂ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ದೇಶೀಯ ಹಾಗೂ ವಿದೇಶಿಯ ವಿದ್ಯಾರ್ಥುಗಳ ಪ್ರವೇಶಕ್ಕೆ ಇಲ್ಲಿ ಅವಕಾಶವಿರುವುದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತವೆ. ದೇಶೀಯ ವಿಧ್ಯಾರ್ಥಿಗಳು ಹೊರಗಿನವರ ಜೊತೆ  ಸ್ಪರ್ಧೆ ಮಾಡಬೇಕಾದ ಒತ್ತಡಕ್ಕೆ ಒಳಗಾಗುತ್ತಾರೆ.

      ಇಂಥ ಹತ್ತಾರು ಸವಾಲುಗಳು ಪ್ರಸ್ತುತ ರೂಪುಗೋಳ್ಳುತ್ತಿರುವ ನವೀನಾತ್ಮಕ ವಿಶ್ವವಿದ್ಯಾಲಯಗಳಿಗೆ ಇರುತ್ತವೆ. ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ನಮ್ಮ ನೆಲದ ಸ್ಥಿತಿ-ಗತಿಗಳಿಗನುಗುಣವಾಗಿ ರೂಪುಗೊಂಡರೆ ಉತ್ತಮ ಬೆಳವಣಿಗೆಯೇ ಆಗುತ್ತದೆ. 

ಪರಾಮರ್ಶನ
  • ಎಸ್.ಎಂ. ಮುತ್ತಯ್ಯ,ಕರ್ನಾಟಕ ನವೀನಾತ್ಮಕ ವಿಶ್ವವಿದ್ಯಾಲಯಗಳ ಮಸೂದೆ-2011- ಸ್ವರೂಪ ಸಾಧ್ಯತೆಗಳು, (ಲೇಖನ), ಇದರಲ್ಲಿ : ಹೊಸತು ಮಾಸ ಪತ್ರಿಕೆ, ಏಪ್ರಿಲ್-2012
  •  ಎಸ್.ಎಂ ಮುತ್ತಯ್ಯ, ಲಿಖಿತ-ಅಲಿಖಿತ;2005;ಸೃಷ್ಟಿ ಪ್ರಕಾಶನ;ಬೆಂಗಳೂರು
  • CONCEPT NOTE ON INNOVATION UNIVERSITIES AIMING AT WORLD CLASS               STANDARDS,.mhrd.gov.in/sites/upload_files/mhrd/files/Universitiesconcep 
  • THE KARNATAKA STATE INNOVATIVE UNIVERSITIES  BILL, 2011
  • Presentation: “Decade of Innovations: 2010-2020 Roadmap”; Report by CII & INSEAD, “The Global Innovation Index Report 2009-2010”; http://www.globalinnovationindex.org/gii/ main/home.cfm
  •   XI Plan Guidelines ,Scheme of Autonomous College, www.ugc.ac.in  
  • http://www.knowledgecommission.gov.in/focus/higher.asp
  • UGC and the tale of two promotions, Economic Times, 15 November 2005
  •  'Regulating Higher Education' ( published in three parts),  Indian Express, New Delhi
  •  Edition on July 14th, 15th and 16th, 2005- also posted online in   www.indianexpres.com).
  •  India on Top in US Varsity enrolments, Hindustan Times, 8 November 2005
  •  India's Higher Education needs Policy, Hindustan Times, 28 November 2005

  ಡಾ. ಮುತ್ತಯ್ಯ ಎಸ್.ಎಂ